More

  ವಿಪಕ್ಷಗಳಿಂದ ತಪ್ಪು ಮಾಹಿತಿ

  ವಿಜಯವಾಣಿ ಸುದ್ದಿಜಾಲ ಹಾವೇರಿ

  ಕಳೆದ ಒಂದು ತಿಂಗಳಿನಿಂದ ಪೌರತ್ವ ಕಾಯ್ದೆ ಜಾರಿಗೆ ಬಂದಾಗಿನಿಂದ ದೇಶದ ಅಲ್ಪಸಂಖ್ಯಾತ ಜನರಲ್ಲಿ ಅಭದ್ರತೆಯ ಭಾವನೆ ಉಂಟಾಗಲು ಕಾಂಗ್ರೆಸ್ ಹಾಗೂ ಇನ್ನುಳಿದ ವಿರೋಧಿ ಪಕ್ಷಗಳೇ ಕಾರಣ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ ಆರೋಪಿಸಿದರು.

  ಜಿಲ್ಲೆಯ ಶಿಗ್ಗಾಂವಿ ಪಟ್ಟಣದಲ್ಲಿ ಭಾನುವಾರ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

  ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ನಮ್ಮ ದೇಶದ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆಯಾಗಲ್ಲ. ಈ ಕಾಯ್ದೆ ಕೇವಲ ಪೌರತ್ವ ನೀಡಲು ಇರುವುದು ಹೊರತು ಯಾವುದೋ ವ್ಯಕ್ತಿಗಳಿಂದ ಪೌರತ್ವ ಕಿತ್ತುಕೊಳ್ಳಲು ಅಲ್ಲ. ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ರಾಷ್ಟ್ರಗಳಲ್ಲಿ ಧಾರ್ವಿುಕ ದೌರ್ಜನ್ಯಕ್ಕೆ ಒಳಗಾಗಿ ಭಾರತಕ್ಕೆ ಬಂದಿರುವ ಹಿಂದು, ಜೈನ್, ಸಿಕ್, ಪಾರ್ಸಿ, ಬೌದ್ಧ, ಕ್ರಿಶ್ಚಿಯನ್ ಧರ್ವಿುಯರಿಗೆ ಕೆಲವು ಕಾನೂನುಗಳಿಗೆ ಒಳಪಟ್ಟು ಪೌರತ್ವ ಕೊಡುವ ಕಾಯ್ದೆ ಇದಾಗಿದೆ. ಆದರೆ ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳು ರಾಷ್ಟ್ರದ ಅಲ್ಪಸಂಖ್ಯಾತ ಜನರಲ್ಲಿ ತಪ್ಪು ಮಾಹಿತಿ ನೀಡಿ ಅವರನ್ನು ಪ್ರಚೋದಿಸಿ ಗಲಭೆಗೆ ಕುಮ್ಮಕ್ಕು ನೀಡುತ್ತಿವೆ ಎಂದು ಆಪಾದಿಸಿದರು.

  ಸ್ವಾತಂತ್ರ್ಯ ನಂತರ ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸಿದ್ದು ಕಾಂಗ್ರೆಸ್. ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವುದು ಕೇವಲ ಬಿಜೆಪಿಯ ಗುರಿಯಾಗಿರಲಿಲ್ಲ. ಇದಕ್ಕಿಂತ ಮೊದಲು ಇಂದಿರಾ ಗಾಂಧಿ, ಮನಮೋಹನ್​ಸಿಂಗ್, ರಾಜೀವ್ ಗಾಂಧಿ ಈ ಕಾಯ್ದೆ ತರಲು ಪ್ರಯತ್ನಿಸಿದ್ದರು ಎಂದರು.

  ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮಾತು ಕೊಟ್ಟಂತೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ. ದೇಶದ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷದ ಮಾತಿಗೆ ಮರುಳಾಗದೇ ದೇಶದ ಸಂವಿಧಾನ ಹಾಗೂ ಭಾರತೀಯ ಜನತಾ ಪಕ್ಷದ ಮೇಲೆ ನಂಬಿಕೆಯನ್ನಿಟ್ಟು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.

  ಅಭಿಯಾನದ ಸಂಚಾಲಕರಾದ ಶಿವಾನಂದ ಮ್ಯಾಗೇರಿ, ರಮೇಶ ಹೊನ್ನಳ್ಳಿ, ಬಸನಗೌಡ ಮೇಲಿನಮನಿ, ಶಾಂತವ್ವ ಸುಬೇದಾರ, ಕರಲಂದಸಾಬ ಧಾರವಾಡ, ರೇಣಕಗೌಡ ಪಾಟೀಲ, ಶರೀಪಸಾಬ ನದಾಫ್, ರೇಖಾ ಕಂಕನವಾಡ, ಸಂಗಪ್ಪ ಕಂಕನವಾಡ, ಫಕ್ಕಿರಗೌಡ ಭರಮಗೌಡ್ರ, ನಾಸೀರಸಾಬ ಬಡಗೇರ, ಭಾರತಿ ರಾಮಪುರಮಠ, ಸಂಜನಾ ರಾಯ್ಕರ ಮತ್ತಿತರರು ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts