ಗುರೂಜಿ ಮನೆ ಎದುರು ಮಾಂಸ, ಮದ್ಯದ ಬಾಟಲಿ ಎಸೆದ ದುಷ್ಕರ್ಮಿಗಳು

ಬೆಂಗಳೂರು: ಖ್ಯಾತ ಜ್ಯೋತಿಷಿ ಆನಂದ ಗುರೂಜಿ ಮನೆ ಮೇಲೆ ದುಷ್ಕರ್ಮಿಗಳು ಬಿಯರ್ ಬಾಟಲ್ ಎಸೆದು ಅಸಭ್ಯ ವರ್ತನೆ ತೋರಿದ್ದಾರೆ.

ಖಾಸಗಿ ಚಾನಲ್​ವೊಂದರಲ್ಲಿ ‘ಗೋ ಸಂಪತ್ತು’ಗೆ ಸಂಬಂಧಿಸಿದ ಕಾರ್ಯಕ್ರಮವೊಂದನ್ನು ಆನಂದ್​ ಗುರೂಜಿ ನಡೆಸಿಕೊಡ್ತಿದ್ದು, ಅದರ ಪ್ರೋಮೊ ಬಿಡುಗಡೆಯಾಗಿತ್ತು. ಇದನ್ನು ವಿರೋಧಿಸಿ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ ಎಂದು ಆನಂದ್​ ಗುರೂಜಿ ಆರೋಪಿಸಿದ್ದಾರೆ.

ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಬೆಂಗಳೂರಿನ ಕಾಮಾಕ್ಯ ಬಡಾವಣೆಯಲ್ಲಿರುವ ಗುರೂಜಿ ಮನೆ ಬಳಿ ಬೈಕ್​ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಗುರೂಜಿ ಮನೆಯ ಮೇಲೆ ಬೀಯರ್​ ಬಾಟಲ್​ಗಳನ್ನು ಎಸೆದು, ನಂತ್ರ ಮನೆಯ ಮುಂಭಾಗ ಮಾಂಸದ ತುಂಡುಗಳನ್ನು ಬಿಸಾಡಿ ಎಸ್ಕೇಪ್​ ಆಗಿದ್ದಾರೆ.

ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *