ರೋಡ್​ ಶೋ ವೇಳೆ ನಿಖಿಲ್​ ಕುಮಾರಸ್ವಾಮಿ ಕಾರು ಮೇಲೆ ಮಂಡ್ಯದಲ್ಲಿ ಕಲ್ಲು ತೂರಾಟ

ಮಂಡ್ಯ: ಕೆ.ಆರ್​. ಪೇಟೆಯ ಸೋಮನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕೆಲದುಷ್ಕರ್ಮಿಗಳು ಜೆಡಿಎಸ್​ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ಅವರ ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಅಕ್ಕಿಹೆಬ್ಬಾಳು ಗ್ರಾಮದಲ್ಲಿ ಪ್ರಚಾರ ಮಾಡಲು ನಿಖಿಲ್​ ತೆರಳುತ್ತಿದ್ದರು. ರೋಡ್​ ಶೋ ಮಾಡಿಕೊಂಡು ತೆರಳುತ್ತಿದ್ದ ಅವರ ವಾಹನದ ಹಿಂದೆ ಬರುತ್ತಿದ್ದ ಜೆಡಿಎಸ್​ ಮುಖಂಡ ಜಗದೀಶ್​ ಅವರ ಕಾರಿನ ಮೇಲೆ 10 ಜನರ ಗುಂಪು ಕಲ್ಲು ತೂರಿತು ಎನ್ನಲಾಗಿದೆ.

ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರು ದುಷ್ಕರ್ಮಿಗಳನ್ನು ವಶಕ್ಕೆ ಪಡೆದುಕೊಂಡರು ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)