ಸಾಸ್ವೆಹಳ್ಳಿ: ಹೊಸಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬ್ಯಾಂಕ್‌ನ ಅವ್ಯವಹಾರ ಖಂಡಿಸಿ ಧರಣಿ ಕೈಗೊಂಡಿರುವ ರೈತರ ಮನವೊಲಿಸುವ ಅಧಿಕಾರಿಗಳ ಪ್ರಯತ್ನ ವಿಫಲವಾಗಿದೆ.
ಹೊಸಹಳ್ಳಿ, ಹುರಳೆಹಳ್ಳಿ, ಬಾಗವಾಡಿ ಗ್ರಾಮದ ಷೇರುದಾರ ರೈತರು ನಡೆಸುತ್ತಿರುವ ಧರಣಿ ಬುಧವಾರವೂ ಮುಂದುವರಿದಿದ್ದು ಸ್ಥಳಕ್ಕೆ ಹೊನ್ನಾಳಿ ತಾಲೂಕು ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ರಮೇಶ್ ಭೇಟಿ ನೀಡಿ, ಬ್ಯಾಂಕ್‌ಗೆ ಹಾಕಲಾದ ಬೀಗ ತೆಗೆಯಲು ಮನವಿ ಮಾಡಿದರಾರೂ ಷೇರುದಾರ ರೈತರು ಸ್ಪಂದಿಸಲಿಲ್ಲ.
ಏಪ್ರಿಲ್ 27 ರಂದು ಬ್ಯಾಂಕ್‌ನ ಆಡಳಿತ ಮಂಡಳಿ ಸಭೆಯಲ್ಲಿ ಕಾರ್ಯದರ್ಶಿ ವಜಾ ಗೊಳಿಸಲಾಗಿದೆ. ಮೇ 15ರಂದು ಆಡಳಿತ ಮಂಡಳಿಯವರೆಲ್ಲ ಸಹಕಾರ ಸಂಘದ ಸಹಾಯಕ ನಿಬಂಧಕರಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ. ಬ್ಯಾಂಕ್‌ನ ವ್ಯವಹಾರ ಸ್ಥಗಿತವಾಗಿದೆ. ನಿಮ್ಮ ಸುಪರ್ದಿಗೆ ಪಡೆದು ಕಾರ್ಯನಿರ್ವಹಿಸುವಂತೆ ಧರಣಿ ರತರು ಅಧಿಕಾರಿಯನ್ನು ಒತ್ತಾಯಿಸಿದರು.
ರೈತರ ಬೇಡಿಕೆಗೆ ಅಧಿಕಾರಿ ಒಪ್ಪಲಿಲ್ಲ. ಪೊಲೀಸ್ ಕೇಸ್ ದಾಖಲಿಸಲಾಗುವುದು ಎಂದಾಗ ಆಕ್ರೋಶಗೊಂಡ ರೈತರು ಅವ್ಯವಹಾರ ಎಸಗಿದವರ ಮೇಲೆ ಪ್ರಕರಣ ದಾಖಲಿಸಿ, ಹಣ ವಸೂಲಿ ಮಾಡಿ ಎಂದು ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಸಹಕಾರ ಸಂಘದ ಸಹಾಯಕ ನಿಬಂಧಕರು ಬಂದು ಬ್ಯಾಂಕ್‌ನ್ನು ಬೇರೊಬ್ಬ ಅಧಿಕಾರಿಗೆ ಉಸ್ತುವಾರಿ ನೀಡವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದರು.
ಧರಣಿ ನಿತರ ಮನವೊಲಿಸುವ ಪ್ರಯತ್ನ ವಿಫಲ
ಚಳಿಗಾಲದಲ್ಲಿ ಈ ಒಂದು ಹಣ್ಣನ್ನು ತಿಂದರೆ ಸಾಕು.. ರೋಗಗಳೇ ಬರುವುದಿಲ್ಲ..fruits
fruits : ಚಳಿಗಾಲ ಬಂದಿದೆ ಎಂದರೆ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಕೀಲು ನೋವು…
ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign
Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…
ಪೇನ್ ಕಿಲ್ಲರ್ ಮಾತ್ರೆ vs ಜೆಲ್… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel
Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…