Tuesday, 11th December 2018  

Vijayavani

Breaking News

ಮತದಾರರ ಪಟ್ಟಿಯಲ್ಲಿ ಹೈಸ್ಕೂಲ್​ ವಿದ್ಯಾರ್ಥಿಗಳ ಹೆಸರು; ಅಕ್ರಮ ತಡೆಗಟ್ಟುವಂತೆ ಶಾಸಕ ಕಾರಜೋಳ ಮನವಿ

Saturday, 06.01.2018, 11:32 AM       No Comments

ಬಾಗಲಕೋಟೆ: ಮತದಾನದ ವಯಸ್ಸನ್ನು ತಲುಪದ ವಿದ್ಯಾರ್ಥಿಗಳನ್ನು ಅಕ್ರಮವಾಗಿ ಮತದಾರರ ಪಟ್ಟಿಯಲ್ಲಿ ಸೇರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಜಿಲ್ಲೆಯ ಮುಧೋಳ ತಾಲೂಕಿನ ನಾಗರಾಳದಲ್ಲಿ ಮತದಾನಕ್ಕೆ ಅರ್ಹರಲ್ಲದ ಹೈಸ್ಕೂಲ್, ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಹೆಸರು ಮತದಾರರ ಪಟ್ಟಿಯಲ್ಲಿ ಸೇರಿಸಿ 2018ರ ವಿಧಾನಸಭೆಗೆ ಮತದಾನ ಮಾಡಲು ಅವರನ್ನು ತಯಾರಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಮುಧೋಳ ಶಾಸಕ ಗೋವಿಂದ ಕಾರಜೋಳ ಅವರು ಈ ಅಕ್ರಮ ತಡೆಗಟ್ಟಬೇಕು ಎಂದು ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಮನವಿಯನ್ನೂ ಸಲ್ಲಿಸಿದ್ದಾರೆ. ಇದು ಬರೀ ನಾಗರಾಳ ಗ್ರಾಮವೊಂದರಲ್ಲಿ ನಡೆದಿರುವ ಘಟನೆಯಲ್ಲ. ಕ್ಷೇತ್ರದಲ್ಲಿ ಇರುವ 202 ಬೂತ್ ಗಳ ಪೈಕಿ ಅನೇಕ ಕಡೆಗೆ ಇದೇ ತೆರನಾಗಿ ವಿದ್ಯಾರ್ಥಿಗಳ ಹೆಸರು ಸೇರಿಸುವ ಕಾರ್ಯ ನಡೆದಿದೆ ಎನ್ನುವುದು ಅವರು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.

ಕೆಲ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ, ಯಾರದ್ದೋ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಈ ರೀತಿಯಾಗಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಕೃತ್ಯದ ಹಿಂದೆ ಯಾರ ಕೈವಾಡವಿದೆ ಮತ್ತು ಮಾಡುತ್ತಿರುವವರು ಯಾರು ಎಂದು ನಿಖರವಾಗಿ ತಿಳಿಯಬೇಕಾಗಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *

Back To Top