ಜೈಪುರ: ತಿಂಗಳುಗಳ ಕಾಲ ಮೇಲಿಂದ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಾಲಕಿಯೊಬ್ಬಳು ಕೊಲೆ ಮಾಡಿದ್ದಾಳೆ. ಆರಂಭದಲ್ಲಿ ಸಹಜ ಸಾವು ಎಂದುಕೊಳ್ಳಲಾಗಿದ್ದ ಈ ಪ್ರಕರಣ ಆಶ್ಚರ್ಯಕರ ರೀತಿಯಲ್ಲಿ ತಿರುವು ಪಡೆದಿದ್ದು, ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ರಾಜಸ್ಥಾನದ ಆಳ್ವಾರ್ ಜಿಲ್ಲೆಯ ವಿಕ್ರಮ್ ಯಾದವ್ (45) ಎಂಬಾತನೇ ಕೊಲೆಗೀಡಾದ ವ್ಯಕ್ತಿ. ಈತನನ್ನು 13 ವರ್ಷದ ಬಾಲಕಿಯೊಬ್ಬಳು ಕೊಲೆ ಮಾಡಿದ್ದಳು. ಈ ಸಂಬಂಧ ತನಿಖೆ ಆರಂಭಿಸಿದ್ದ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿದ್ದು, ಇಂದು ಬಾಲಕಿಯನ್ನು ವಶಕ್ಕೆ ಪಡೆದಿದ್ದು, ರಿಮಾಂಡ್ ಹೋಮ್ಗೆ ಕಳಿಸಿದ್ದಾರೆ.
ಕೊಲೆಗೀಡಾದ ವ್ಯಕ್ತಿ ಆರು ತಿಂಗಳಿನಿಂದ ಬಾಲಕಿ ಮೇಲೆ ಆಗಾಗ ಅತ್ಯಾಚಾರ ನಡೆಸಿದ್ದಷ್ಟೇ ಅಲ್ಲದೆ, ಇತರ ಮೂವರೊಂದಿಗೆ ದೈಹಿಕ ಸಂಪರ್ಕ ಹೊಂದುವಂತೆ ಒತ್ತಾಯಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ಬಾಲಕಿ ಆತನನ್ನು ಕೊಲೆ ಮೇ 17ರಂದು ಕೊಲೆ ಮಾಡಿದ್ದು, ಆರಂಭದಲ್ಲಿ ಅದನ್ನು ಸಹಜ ಸಾವು ಎಂದುಕೊಳ್ಳಲಾಗಿತ್ತು. ಆದರೆ ಕತ್ತಿನ ಭಾಗದಲ್ಲಿ ಕಲೆಯನ್ನು ಗಮನಿಸಿ ಅನುಮಾನದ ಮೇರೆಗೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದಾಗ ಕೊಲೆ ಎಂಬುದು ದೃಢಪಟ್ಟಿತ್ತು.
ಈ ಹಿನ್ನೆಲೆಯಲ್ಲಿ ತನಿಖೆಗೆ ಇಳಿದ ಪೊಲೀಸರಿಗೆ ಮೊದಲಿಗೆ ಯಾವ ಸುಳಿವು ಕೂಡ ಸಿಕ್ಕಿರಲಿಲ್ಲ. ಆದರೆ ಕೊನೆಗೆ ಕೊಲೆಯಾದ ಸ್ಥಳದಲ್ಲಿ ಸಿಕ್ಕ ಬಟ್ಟೆಯ ಚೂರಿನ ಸುಳಿವಿನ ಮೇರೆಗೆ ತನಿಖೆ ಕೈಗೊಂಡಾಗ ಯಾದವ್ ಮನೆ ಬಳಿಯ ಬಾಲಕಿ ಮೇಲೆ ಅನುಮಾನ ಮೂಡಿತ್ತು. ಆಕೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾಳೆ.
ವಿಕ್ರಮ್ ಯಾದವ್ ಕಳೆದ ಆರು ತಿಂಗಳಿನಿಂದ ಆಗಾಗ ಅತ್ಯಾಚಾರ ಎಸಗಿದ್ದ. ಅಲ್ಲದೆ ಇನ್ನೊಬ್ಬರ ಜತೆ ದೈಹಿಕ ಸಂಪರ್ಕ ಹೊಂದುವಂತೆ ಬ್ಲ್ಯಾಕ್ಮೇಲ್ ಮಾಡುತ್ತಿದ್ದ. ಇದರಿಂದ ಬೇಸತ್ತಿದ್ದ ಬಾಲಕಿ, ಮೇ 17ರಂದು ಆತ ತನ್ನ ಮನೆಗೆ ಬರುವಂತೆ ಹೇಳಿದ್ದಾಗ ಹೋಗಿದ್ದಳು. ಅಲ್ಲಿ ಆತ ಮದ್ಯದ ಅಮಲಿನಲ್ಲಿದ್ದು, ಆ ಸಂದರ್ಭದಲ್ಲಿ ಬಟ್ಟೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವುದು ವಿಚಾರಣೆಯಲ್ಲಿ ತಿಳಿದು ಬಂದಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಜತೆಗೆ ಇತರ ನಾಲ್ವರ ವಿರುದ್ಧ ಗ್ಯಾಂಗ್ರೇಪ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದು 49 ವರ್ಷಗಳಲ್ಲೇ ದಾಖಲೆಯ ಮಳೆ; ಎಲ್ಲಿ ಯಾವಾಗ?