ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಕೆ.ಆರ್.ಪುರ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಲ್ಲಿ ಮೂವರನ್ನು ಕಾಡುಗುಡಿ ಪೊಲೀಸರು ಬಂಧಿಸಿದ್ದಾರೆ.

ತುಂಬೇನ ಅಗ್ರಹಾರ ನಿವಾಸಿಗಳಾದ ಹರೀಶ್​ಕುಮಾರ್ (22), ವೆಂಕಟಾಚಲಪತಿ (19) ಮತ್ತು ಭಪಿನ್ (22) ಬಂಧಿತರು. ಮಾ.31ರ ರಾತ್ರಿ ಕೃತ್ಯ ನಡೆದಿದೆ.ಕೆಲ ತಿಂಗಳಿಂದ ಸಂತ್ರಸ್ತೆಗೆ ಟ್ರ್ಯಾಕ್ಟರ್‌ ಚಾಲಕ ಹರೀಶ್ ಪರಿಚಯವಿತ್ತು. ಇದೇ ಸಲುಗೆಯಲ್ಲಿ ಮಾ.31ರ ರಾತ್ರಿ ಆಕೆಯನ್ನು ತುಂಬೇನಹಳ್ಳಿಯ ನೀಲಗಿರಿ ತೋಪಿಗೆ ಕರೆದುಕೊಂಡು ಹೋಗಿದ್ದಾನೆ. ಆ ನಂತರ ತನ್ನ ಇಬ್ಬರು ಸ್ನೇಹಿತರನ್ನು ಅಲ್ಲಿಗೆ ಕರೆಸಿಕೊಂಡು ಮೂವರು ಸೇರಿ ಆಕೆ ಮೇಲೆ ಅತ್ಯಾಚಾರ ಎಸಗಿದ್ದರು. ಈ ಬಗ್ಗೆ ಬಾಲಕಿ ಪಾಲಕರಿಗೆ ತಿಳಿಸಿದ್ದಳು.

ಸಂತ್ರಸ್ತೆಯ ಪಾಲಕರು ಕೊಟ್ಟ ದೂರಿನ ಮೇರೆಗೆ ಎಫ್​ಐಆರ್ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.