ಅಪ್ರಾಪ್ತ ಬಾಲಕಿ ಅಪಹರಿಸಿ ಅತ್ಯಾಚಾರ

ಹಿರೇಬಾಗೇವಾಡಿ: ತಾಯಿಯ ತವರೂರಿಗೆ ಬಂದಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಬಗ್ಗೆ ಬಾಲಕಿಯ ಮಾವ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ.

ಧಾರವಾಡ ಜಿಲ್ಲೆ ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದ ಬಾಲಕಿ ಸಮೀಪದ ಕುಕಡೊಳ್ಳಿ ಗ್ರಾಮದ ತಮ್ಮ ತಾಯಿಯ ತವರು ಮನೆಗೆ ಬಂದಾಗ ಆಕೆಯನ್ನು ಅಪಹರಿಸಲಾಗಿತ್ತು. ನಂತರ ಶೋಧ ನಡೆಸಿದಾಗ ಆಕೆ ಅಳ್ನಾವರದಲ್ಲಿ ಪತ್ತೆಯಾಗಿದ್ದಾಳೆ. ಕಡಬಗಟ್ಟಿಯ ಯುವಕ ಆಕೆಯನ್ನು ಅಪಹರಿಸಿದ್ದು ಆತ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಪೋಕ್ಸೊ ಕಾಯ್ದೆಯಡಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.