More

    ಸಂಗಣ್ಣ ಮನವೊಲಿಸಲು ಸಚಿವರಾದ ಕೃಷ್ಣಬೈರೇಗೌಡ, ತಂಗಡಗಿ ಯತ್ನ

    ಕೊಪ್ಪಳ: ಕೃಷಿ ಪಂಪ್‌ಸೆಟ್ ಸೌಲಭ್ಯ ಮುಂದುವರಿಸುವಂತೆ ಒತ್ತಾಯಿಸಿ ಸಂಸದ‌ ಸಂಗಣ್ಣ ಕರಡಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡ ಸ್ಥಳಕ್ಕೆ ಇಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ, ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಆಗಮಿಸಿ ಮನವೊಲಿಕೆಗೆ ಯತ್ನಿಸಿದರು.

    ಸಚಿವ ಶಿವರಾಜ ತಂಗಡಗಿ ಮಾತನಾಡಿ, 500 ಮೀಟರ್ ವರೆಗೆ ಉಚಿತವಾಗಿ ವಿದ್ಯುತ್ ಕಂಬ ಹಾಗೂ ತಂತಿ ನೀಡುತ್ತೇವೆ‌. ಜಿಲ್ಲೆಯಲ್ಲಿ 273 ಅಕ್ರಮ ಪಂಪ್ ಸೆಟ್ ಗಳಿವೆ. ಅವುಗಳನ್ನು ಸಕ್ರಮ ಮಾಡುತ್ತೇವೆ.

    ಸಂಪೂರ್ಣ ಉಚಿತ ಮಾಡುತ್ತೇವೆ. ಆದೇಶದಲ್ಲಿ ಹೊಸ ಪಂಪ್‌ಸೆಟ್ ಗಳಿಗೆ ರೈತರೇ ದುಡ್ಡು ಭರಿಸಬೇಕೆಂಬ ಆದೇಶ ತಿದ್ದುಪಡಿ ಮಾಡುತ್ತೇವೆ. ಈ ಬಗ್ಗೆ ಇಂಧನ ಸಚಿವ ಹಾಗೂ ಇಲಾಖೆ ಕಾರ್ಯದರ್ಶಿಯೊಂದಿಗೆ ಮಾತನಾಡಿರುವೆ.

    15ದಿನದಲ್ಲಿ ಆದೇಶ ಹೊರ ಬೀಳಲಿದೆ. ನೀವು ನಿರಶನ ವಾಪಸ್ ಪಡೆಯಿರಿ ಎಂದು ಮನವಿ ಮಾಡಿದರು.

    ಸಚಿವ ಬೈರೇಗೌಡ ಸಹ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದರು.

    ಆದರೆ ಸರ್ಕಾರ ಆದೇಶ ವಾಪಸ್ ಪಡೆಯುವ ಬಗ್ಗೆ ಮರು ಆದೇಶ ಮಾಡುವವರೆಗೆ ನಿರಶನ ವಾಪಸ್ ಪಡೆಯುವುದಿಲ್ಲ ಎಂದು ಸಂಗಣ್ಣ ಪಟ್ಟು ಮುಂದುವರೆಸಿದರು.

    ರಾಜ್ಯೋತ್ಸವ ರಸಪ್ರಶ್ನೆ - 21

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts