ಹೆಂಡತಿ ಮುಖ ಸರಿಯಿಲ್ಲ ಎಂದು ಬಿಟ್ಟವರ ಮುಖ ನೋಡಿ ದೇಶದ ಜನ ಮತ ಹಾಕಬೇಕಾ: ಜಮೀರ್‌ ಅಹ್ಮದ್‌

ಹಾವೇರಿ: ಬಿಜೆಪಿ ಅಭ್ಯರ್ಥಿಗಳು ಮೋದಿ ಮುಖ ನೋಡಿ ವೋಟು ಹಾಕಿ ಎನ್ನುತ್ತಾರೆ. ಹಾಗಿದ್ದರೆ ತಮ್ಮ ಮುಖ ತೋರಿಸೋಕೆ ಇಷ್ಟ ಇಲ್ಲವಾದರೆ ಬುರ್ಖಾ ಧರಿಸಿ ಜನರ ಬಳಿ ಬರಲಿ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ಮೋದಿಗೆ ಅವರಿಗೆ ಇರುವುದೇ ಒಂದು ಹೆಂಡತಿ. ಅವರ ಮುಖ ಸರಿ ಇಲ್ಲ ಎಂದು ಹೆಂಡತಿ ಬಿಟ್ಟಿದ್ದಾರೆ. ಹೆಂಡತಿ ಮುಖಾ ಸರಿ ಇಲ್ಲ ಎಂದು ಹೆಂಡತಿ ಬಿಟ್ಟವರ ಮುಖ ನೋಡಿ ದೇಶದ ಜನ ಮತ ಹಾಕುವುದುಂಟಾ? ಐದು ವರ್ಷದ ಸಾಧನೆ ಹೇಳಿಕೊಂಡು ಜನರ ಮುಂದೆ ಹೋಗುತ್ತಿಲ್ಲ. ಶಿವಕುಮಾರ ಉದಾಸಿ ಅವರೆ ನಿಮ್ಮ ಸಾಧನೆ ಹೇಳಿಕೊಂಡು ಹೋಗಿ, ಮೋದಿ ಮುಖ ನೋಡಿ ಮತ ಹಾಕಿ ಎನ್ನಬೇಡಿ ಎಂದು ಕಿಡಿಕಾರಿದರು.

ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಬೇಕು ಎಂಬುದು ನಮ್ಮೆಲ್ಲರಿಗೂ ಆಸೆ ಇದೆ. ರಾಜ್ಯದ ಜನರಿಗೂ ಕೂಡ ಅದೇ ಆಸೆ ಇದೆ. ಸಿದ್ದರಾಮಯ್ಯ ನಾಳೆನೇ ಮುಖ್ಯಮಂತ್ರಿ ಆಗುತ್ತೇನೆ ಎಂದಿಲ್ಲ. ಮುಂದಿನ ಚುನಾವಣೆಯಲ್ಲಿ ಎಂದಿದ್ದಾರೆ. ಬಿಜೆಪಿಯವರು ಸರಕಾರ ರಚನೆ ಮಾಡಲು ಪ್ರತಿದಿನ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಸಚಿವ ಡಿ.ಕೆ. ಶಿವಕುಮಾರ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ನಾಯಕರಿದ್ದಾರೆ, ಪಕ್ಷಕ್ಕಾಗಿ ದುಡಿಯುತ್ತಿದ್ದಾರೆ. ವ್ಯಯಕ್ತಿಕವಾಗಿ ಮಾಡುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಸೋಲಿಲ್ಲದ ಸರದಾರ. ಅವರು ಯಾರಿಂದಲೂ ಸೋಲುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *