ಕಾರವಾರ: ಉತ್ತರ ಕನ್ನಡದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಸ್ತುವಾರಿ ಕಾರ್ಯದರ್ಶಿ (minister vs secretary) ನಡುವಿನ ಮಾತಿನ ಗುದ್ದಾಟ ಮುಂದುವರಿದಿದೆ.
ಸುಗಮ ಆಡಳಿತ ನಡೆಸುವ ಸಲುವಾಗಿ ಜಿಲ್ಲೆಗೊಬ್ಬ ಉಸ್ತುವಾರಿ ಸಚಿವರನ್ನು ಹಾಗೂ ಕಾರ್ಯದರ್ಶಿ ಅವರನ್ನು ನೇಮಕ ಮಾಡಲಾಗುತ್ತದೆ. ಶಾಸಕಾಂಗ ಹಾಗೂ ಕಾರ್ಯಾಂಗ ಎರಡು ಸಮನ್ವಯದಿಂದ ಕಾರ್ಯ ನಿರ್ವಹಿಸಿದರೆ ಅಭಿವೃದ್ಧಿ ಸಾಧ್ಯವಾಗಲಿದೆ. ಆದರೆ, ಉತ್ತರ ಕನ್ನಡದಲ್ಲಿ ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆದಿತ್ತು ಎಂಬ ಗಾದೆ ಮಾತಿನಂತಾಗಿದೆ ಪರಿಸ್ತಿತಿ.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರ ನಡುವಿನ ಮನಸ್ತಾಪ ಈಗ ಬಹಿರಂಗವಾಗುತ್ತಿದೆ. ಮಂಕಾಳ ವೈದ್ಯ ಸತತ ಎರಡನೇ ಬಾರಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿರುದ್ಧ ಮಾಧ್ಯಮಗಳ ಮೂಲಕ ಹರಿ ಹಾಯ್ದಿದ್ದಾರೆ.
ಏನಿದು minister vs secretary ವಿವಾದ
ನ.1 ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮಂಕಾಳ ವೈದ್ಯ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಅಭಿವೃದ್ಧಿ ಪರಿಶೀಲನೆ ಮಾಡಲು ಬರುತ್ತಾರೋ ಹೆದ್ದಾರಿಗಳ ಗುತ್ತಿಗೆದಾರರ ಜತೆ ಸೆಟ್ಟಿಂಗ್‌ಗೆ ಬರುತ್ತಾರೋ ಗೊತ್ತಿಲ್ಲ ಎಂದು ಕಿಡಿ ಕಾರಿದ್ದರು. ಶಿರಸಿ-ಕುಮಟಾ ರಸ್ತೆ ಬಂದ್ ಆದೇಶವನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆಯಂತೆ ಮಾಡಲಾಗಿದೆ ಎಂದು ದೂರಿದ್ದರು. ಅದಕ್ಕೆ ರಿತೇಶ ಕುಮಾರ ಸಿಂಗ್‌ನಾನು ಅಂಥ ಯಾವುದೇ ಸೆಟ್ಟಿಂಗ್ ಮಾಡಿಲ್ಲ ಎಂದು ಮಾಧ್ಯಮಗಳಲ್ಲಿ ಪ್ರತಿಕ್ರಿಯೆ ನೀಡಿದ್ದರು.
ಸೋಮವಾರ ಮತ್ತೆ ಮಂಕಾಳ ವೈದ್ಯ ರಿತೇಶ ಕುಮಾರ ಸಿಂಗ್ ವಿರುದ್ಧ ಕಿಡಿ ಕಾರಿದ್ದಾರೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಸಚಿವರ ಜತೆ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಸಚಿವರು ನಡೆಸುವ ಕೆಡಿಪಿ ಸಭೆಗಳಿಗೆ ಹಾಜರಾಗಬೇಕು ಎಂದು ಒಳಾಡಳಿತ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಹೊರಡಿಸಿದ ಆದೇಶ ಪ್ರತಿಯನ್ನು ಪ್ರದರ್ಶಿಸಿದರು. ರಿತೇಶ ಕುಮಾರ ಸಿಂಗ್ ಯಾವ ಸಭೆಗೆ ಬಂದಿದ್ದಾರೆ ಎಂದು ಕೇಳಿ ಎಂದರು.
Airport ಗಾಗಿ ಅಂಕೋಲಾದಲ್ಲಿ 1 ತಿಂಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣhttps://www.vijayavani.net/ankola-airport-compensetion