ಟ್ರಾಫಿಕ್ ನಿಯಂತ್ರಿಸಿದ ಸಚಿವ ಖಾದರ್

ಉಳ್ಳಾಲ: ಕಾರ್ಯಕ್ರಮ ನಿಮಿತ್ತ ವಾಹನದಲ್ಲಿ ತೆರಳುತ್ತಿದ್ದ ಸಚಿವ ಯು.ಟಿ.ಖಾದರ್ ಅವರಿಗೆ ಪಂಪ್‌ವೆಲ್‌ನಲ್ಲಿ ಬ್ಲಾಕ್ ಸಮಸ್ಯೆ ಕಾಡಿತು. ಇದರಿಂದ ವಾಹನಗಳ ಮಧ್ಯೆ ಸಿಲುಕಿದ ಸಚಿವರು ರಸ್ತೆಗಿಳಿದು ಟ್ರಾಫಿಕ್ ಪೊಲೀಸರ ಕೆಲಸ ಮಾಡಿ ಸರಳತೆ ಮೆರೆದರು.

ಶನಿವಾರ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರು ಉಳ್ಳಾಲದತ್ತ ತೆರಳುತ್ತಿದ್ದರು. ಪಂಪ್‌ವೆಲ್ ವೃತ್ತದ ಬಳಿ ಸಚಿವರ ಕಾರು ಇತರ ವಾಹನಗಳ ಮಧ್ಯೆ ಸಿಲುಕಿಕೊಂಡಿತು. ಈ ಭಾಗದಲ್ಲಿ ಒಂದಿಬ್ಬರು ಪೊಲೀಸರು ಮಾತ್ರ ಕರ್ತವ್ಯದಲ್ಲಿದ್ದು, ವಾಹನ ಸಂಚಾರ ಸುಗಮಗೊಳಿಸಲು ಕಷ್ಟಪಡುವುದನ್ನು ಕಂಡ ಸಚಿವರು ಕಾರಿನಿಂದಿಳಿದು ವಾಹನಗಳನ್ನು ಕಳುಹಿಸಿ ಬ್ಲಾಕ್ ಸರಿಪಡಿಸುವ ಪ್ರಯತ್ನ ಮಾಡಿದರು. ಸುಮಾರು 15 ನಿಮಿಷ ರಸ್ತೆಯಲ್ಲೇ ಇದ್ದ ಖಾದರ್‌ಗೆ ಆಪ್ತ ಸಹಾಯಕ ಮೊಹಮ್ಮದ್ ಲಿಬ್ಝೆತ್ ಸಾಥ್ ನೀಡಿದರು.