ದೇವರ ಹೆಸರಿನಲ್ಲಿನ ಭೂ ದಂಧೆ ನಿಲ್ಲಬೇಕು, ವಕ್ಫ್‌ನ ಅಧಿಕೃತ ಆಸ್ತಿ ರಕ್ಷಣೆಯಾಗಬೇಕು ಎಂದ ಸಚಿವೆ ಶೋಭಾ ಕರಂದ್ಲಾಜೆ

blank

ವಿಜಯಪುರ: ವಕ್ಫ್‌ನಿಂದ ಲ್ಯಾಂಡ್ ಮಾಫಿಯಾದವರಿಗೆ ಅನುಕೂಲವಾಗಿದೆ. ದೇವರ ಹೆಸರಿನಲ್ಲಿ ಭೂ ಮಾಫಿಯಾ ನಡೆದಿದೆ. ಹೀಗಾಗಿ ವಕ್ಫ್‌ನ ಅಧಿಕೃತ ಆಸ್ತಿ ರಕ್ಷಣೆ ಆಗಬೇಕು ಮತ್ತು ಅತಿಕ್ರಮಣ ನಿಲ್ಲಬೇಕೆಂಬ ಕಾರಣಕ್ಕೆ ಈ ಹಿಂದೆ ಸಂಸತ್‌ನಲ್ಲಿ ಪ್ರಶ್ನೆ ಮಾಡಿದ್ದು ನಿಜ. ಇದೀಗ ಆ ಪ್ರಶ್ನೆಯ ಪ್ರತಿಯನ್ನೇ ಕಾಂಗ್ರೆಸ್‌ನವರು ಬಿಡುಗಡೆ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯಿಸಿದರು.

ಸಂಸತ್‌ನಲ್ಲಿ ವಕ್ಫ್ ಆಸ್ತಿ ಹಿತರಕ್ಷಣೆಯ ನಿಟ್ಟಿನಲ್ಲಿ ಪ್ರಶ್ನೆ ಮಾಡಿದ ಕುರಿತು ಕಾಂಗ್ರೆಸ್‌ನವರು ತಮ್ಮ ಮೇಲೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ನವರು ಹೇಳಿದ್ದು ಸತ್ಯ. ಅದಕ್ಕೆ ಸ್ವಾಗತವಿದೆ. ಈಗಲೂ ಆ ಪ್ರಶ್ನೆಗೆ ಬದ್ಧವಾಗಿದ್ದು, ನಿಜವಾದ ಆಸ್ತಿ ರಕ್ಷಣೆ ಆಗಬೇಕೆಂಬುದೇ ನಮ್ಮ ಉದ್ದೇಶ ಎಂದರು.

ಅನ್ವರ್ ಮಾನಿಪ್ಪಾಡಿ ವರದಿ ಬಂದಾಗಿನಿಂದ ಈವರೆಗೆ ನಾವು ಅದನ್ನೇ ಹೇಳುತ್ತಿದ್ದೇವೆ. ಆ ಸಮಿತಿಯ ವರದಿ ಸಿಬಿಐಗೆ ಒಪ್ಪಿಸಬೇಕು. ಯಾಕೆ? ಕಾಂಗ್ರೆಸ್‌ನವರು 29 ಸಾವಿರ ಎಕರೆ ಜಮೀನು ನುಂಗಿ ನೀರು ಕುಡಿದಿದ್ದಾರೆ. ಅಲ್ಲಾನ ಹೆಸರಲ್ಲಿಯೇ ಅಲ್ಲಾನ ಆಸ್ತಿ ದೋಖಾ ಆಗಿದೆ. ಇದನ್ನು ರಕ್ಷಿಸಬೇಕಾದವರು ಯಾರು? ಖಮರುಲ್ ಇಸ್ಲಾಂ, ಹ್ಯಾರೀಸ್, ರೋಷನ್‌ಬೇಗ್ ಇವರೆಲ್ಲ ಯಾರು? ಅದೇ ಜಾತಿಯಲ್ಲಿ ಹುಟ್ಟಿ ಅಲ್ಲಾನ ಹೆಸರಲ್ಲಿ ಅಲ್ಲಾಗೆ ಮೋಸ ಮಾಡುವವರು. ಇದನ್ನೇ ನಾನು ಪ್ರಶ್ನೆ ಮಾಡಿದ್ದೇನೆ. ಈಗಲೂ ಅದನ್ನೇ ಪ್ರಶ್ನೆ ಮಾಡುವೆ. ದೇಶದಲ್ಲಿ ವಕ್ಫ್‌ಗೆ ದಾನ ಕೊಟ್ಟ ಜಮೀನು ಎಷ್ಟು? ಆ ಜಮೀನು ಅತಿಕ್ರಮಿಸಿದ್ದು ಯಾರು? ಎಂದರಲ್ಲದೇ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಎಂಬಂತೆ ಜಂಟಿ ಸಂಸತ್ ಸಮಿತಿ ರಚಿಸಲಾಗಿದೆ ಎಂದರು.

ವಕ್ಫ್ ಆಸ್ತಿಗಳ ವ್ಯಾಜ್ಯವನ್ನು ನ್ಯಾಯಾಲಯದಲ್ಲೂ ಪ್ರಶ್ನೆ ಮಾಡುವಂತಿಲ್ಲ. ಕಾಂಗ್ರೆಸ್‌ನವರು 1995ರಲ್ಲಿ ಇಂಥ ಕಾನೂನು ಮಾಡಿದರು. ಬ್ರಿಟಿಷರು ಸಹ ಇಂಥ ಕಾನೂನು ಮಾಡಿರಲಿಲ್ಲ. ಬ್ರಿಟಿಷರ ಅವಧಿಯಲ್ಲಿ ನಮ್ಮ ಆಸ್ತಿಗಳ ವ್ಯಾಜ್ಯವನ್ನು ಸಿವಿಲ್ ಕೋರ್ಟ್‌ನಲ್ಲಿ ಪ್ರಶ್ನೆ ಮಾಡುವ ಹಕ್ಕಿತ್ತು. ಆದರೆ, ವಕ್ಫ್ ಕಾಯ್ದೆಯಲ್ಲಿ ಆ ಹಕ್ಕು ಇಲ್ಲ. ಹೀಗಾಗಿ ಈ ಎಲ್ಲ ಸಮಸ್ಯೆಗಳಿಗೆ ವಕ್ಫ್ ಆಸ್ತಿಯ ರಾಷ್ಟ್ರೀಕರಣವೊಂದೇ ಪರಿಹಾರ. ಅದಕ್ಕಾಗಿಯೇ ಜಂಟಿ ಸಂಸತ್ ಸಮಿತಿ ರಚಿಸಲಾಗಿದ್ದು, ಶೀಘ್ರದಲ್ಲಿಯೇ ಕಾಯ್ದೆಗೆ ತಿದ್ದುಪಡಿಯಾಗಲಿದೆ ಎಂದರು.

Share This Article

2025ರಲ್ಲಿ ಈ 3 ರಾಶಿಯವರಿಗೆ ರಾಜಯೋಗ!? ಅನೇಕ ರೀತಿಯಲ್ಲಿ ಹಣದ ಹರಿವು, ಐಷಾರಾಮಿ ಜೀವನ | Royal Life

Royal Life : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ಜೇನುತುಪ್ಪ ಜತೆ ಹುರಿದ ಶುಂಠಿ ತಿಂದರೆ ಗಂಟಲು ನೋವು ಮಾಯಾ! ಹೀಗಿವೆ ಪ್ರಯೋಜನಗಳು

ಬೆಂಗಳೂರು: ಜೇನುತುಪ್ಪ ಮತ್ತು ಶುಂಠಿ ಆರೋಗ್ಯಕ್ಕೆ ತುಂಬಾ ಪ್ರಯೋಜನ ಎಂಬ ವಿಷಯ ಬಹುತೇಕರಿಗೆ ತಿಳಿದಿದೆ. ಈ…

ಸಾಮಾನ್ಯವಾಗಿ ಮಾಡುವ ಈ ತಪ್ಪುಗಳಿಂದಲೇ ಲೈಂಗಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ! Relationship Tips

Relationship Tips : ಪರಸ್ಪರ ತಿಳುವಳಿಕೆಯುಳ್ಳ ಉತ್ತಮ ಲೈಂಗಿಕ ಜೀವನವು ಸಂತೋಷದ ದಾಂಪತ್ಯಕ್ಕೆ ಕಾರಣವಾಗುತ್ತದೆ. ಲೈಂಗಿಕ…