ಮಂತ್ರಿಗಿರಿ ಕನಸ್ಸಿಗೆ ಸಿದ್ದು ಕೊಳ್ಳಿ

ಅಶೋಕ ಶೆಟ್ಟರ ಬಾಗಲಕೋಟೆ: ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯಭಾರ ಇಲ್ಲ ಎನ್ನುವಂತೆ ರಾಜ್ಯದ ದೋಸ್ತಿ ಸರ್ಕಾರದಲ್ಲಿ ಬಾಗಲಕೋಟೆ ಜಿಲ್ಲೆಗೆ ಮಂತ್ರಿ ಭಾಗ್ಯ ಸಿಗಲ್ಲ ಅನ್ನೋದು ಖಾತ್ರಿಯಾಗಿದೆ. ಹಾಗೆಯೇ ಜಿಪಂ ಅಧ್ಯಕ್ಷ ಸ್ಥಾನದಿಂದ ವೀಣಾ ಕಾಶಪ್ಪನವರ ಅವರನ್ನು ಕೆಳಗಿಳಿಸಬೇಕೆಂಬ ಕೆಲವರು ಕಿಚ್ಚಿಗೂ ತಣ್ಣೀರು ಬಿದ್ದಿದೆ.

ಹೌದು, ಜಿಲ್ಲೆಯ ಮಟ್ಟಿಗೆ ಈ ಎರಡು ವಿಷಯಗಳಲ್ಲಿ ಸಿದ್ದರಾಮಯ್ಯ ಅಂತಿಮ ತೀರ್ಪಿಗೆ ಕಾಯ್ದು ಕá-ಳಿತಿದ್ದ ಆಕಾಂಕ್ಷಿಗಳಿಗೆ ಸ್ವತಃ ಮಾಜಿ ಸಿಎಂ ಸದ್ಯಕ್ಕೆ ಎರಡು ಬೇಡಿಕೆಗಳು ಈಡೇರá-ವ ಸಾಧ್ಯತೆ ಇಲ್ಲ. ಯಥಾಸ್ಥಿತಿ ಮುಂದá-ವರಿಯಲಿದೆ ಎಂದು ಸಂದೇಶ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಂಪುಟ ವಿಸ್ತರಣೆ ವೇಳೆ ಬಾಗಲಕೋಟೆ ಜಿಲ್ಲೆಗೂ ಸಚಿವ ಸ್ಥಾನ ಸಿಗಬಹá-ದೆಂದá-ಕೊಂಡಿದ್ದ ಆಕಾಂಕ್ಷಿಗಳಿಗೆ ಸಿದ್ದರಾಮಯ್ಯನವರು ಮಾಧ್ಯಮಗಳ ಎದá-ರೇ ಶರಾ ಬರೆದು ಹೋಗಿದ್ದಾರೆ. ನಾನು ಸá-ಳ್ಳು ಹೇಳಲ್ಲ. ಸಂಪುಟದಲ್ಲಿ ಕೋಟೆನಾಡಿನ ಜನಪ್ರತಿನಿಧಿಗಳಿಗೆ ಅವಕಾಶ ಸಿಗಲ್ಲ ಎಂದು ಕಡ್ಡಿಮುರಿದಂತೆ ಹೇಳಿದ್ದಾರೆ. ಸಂಪುಟ ವಿಸ್ತರಣೆಯಾದರೆ ಸಚಿವ ಸ್ಥಾನ ಸಿಗಬಹá-ದá- ಎಂದು ಜಮಖಡಿ ಕ್ಷೇತ್ರದ ನೂತನ ಶಾಸಕ ಆನಂದ ನ್ಯಾಮಗೌಡ ಹಾಗೂ ವಿಧಾನ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪುರ ಬೆಂಬಲಿಗರು ಕನಸು ಕಟ್ಟಿಕೊಂಡಿದ್ದರು. ಇದು ಆ ಶಾಸಕರ ಮನದಿಂಗತವೂ ಆಗಿತ್ತು.

ಸ್ಮಮಿ್ರ ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಒಲವು ಯಾರಿಗೆ ಸಿಗá-ತ್ತದೆಯೋ ಅವರಿಗೆ ಮಂತ್ರಿಗಿರಿ ಸಿಗá-ತ್ತದೆ ಎಂದು ಹೇಳಲಾಗá-ತ್ತಿತ್ತು. ಇದೀಗ ಸಿದ್ದರಾಮಯ್ಯ ಅವರೇ ಅಂತಹ ಅವಕಾಶ ಜಿಲ್ಲೆಗೆ ಸಿಗಲ್ಲ ಎಂದು ಹೇಳಿದ್ದು, ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರಿಗೆ ನಿರಾಸೆ ಮೂಡಿಸಿದೆ.

ಸಿದ್ದು ವಾರೇ ನೋಟದಿಂದ ಮಂತ್ರಿಯಾಗಿದ್ದ ತಿಮ್ಮಾಪುರ: ಸಿದ್ದರಾಮಯ್ಯ ಸರ್ಕಾರದಲ್ಲಿ ಅವರ ವಾರೇ ನೋಟದಿಂದಾಗಿಯೇ ಸೋತು ಸೊರಗಿದ್ದ ತಿಮ್ಮಾಪುರಗೆ ರಾಜೕಯ ಪುನರ್​ಜೀವನ ಸಿಕ್ಕಿತ್ತು. ಮನೆಯಿಂದ ವಿಧಾನ ಪರಿಷತ್​ಗೆ ರಹದಾರಿ ಮಾಡಿಕೊrದ್ದಲ್ಲದೆ ಕೊನೆ ಹಂತದಲ್ಲಿ ಮಂತ್ರಿಗಿರಿಯನ್ನು ದಯಪಾಲಿಸಿದ್ದರು. ಈ ಬಾರಿಯೂ ತಮಗೆ ಸಚಿವ ಸ್ಥಾನ ಸಿಗಬಹá-ದು ಎಂದು ತಿಮ್ಮಾಪುರ ಆಸೆ ಹೊಂದಿದ್ದು, ಇದಕ್ಕಾಗಿ ಒತ್ತಡ ತಂತ್ರ ಅನುಸರಿಸá-ತ್ತಿದ್ದರಂತೆ. ಆದರೆ, ಇದೀಗ ಸಿದ್ದರಾಮಯ್ಯ ಅವರ ಹೇಳಿಕೆ ಮಾಜಿ ಸಚಿವರ ಬೆಂಬಲಿಗರಿಗೆ ಬರಸಿಡಿಲು ಬಡಿದಂತಾಗಿದೆ.

ಜಿಪಂ ಅಧ್ಯಕ್ಷೆ ಸ್ಥಾನ ಬದಲಾವಣೆ ಏಕಿಲ್ಲ: ಜಿಲ್ಲಾ ಪಂಚಾಯಿತಿಯಲ್ಲಿ ಹಾಲಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಕೆಳಗಿಳಿಸಲು ಪಕ್ಷದಲ್ಲಿ ಸಾಕಷ್ಟು ಕಸರತ್ತು ನಡೆದಿವೆ. ಅವರ ರಾಜೀನಾಮೆಗೆ ಕೆಲವರು ಬಿಗಿಪಟ್ಟು ಹಿಡಿದು ಕುಳಿತಿದ್ದಾರೆ. ಈ ವಿಷಯವಾಗಿ ಸದಸ್ಯೆ ಬಾಯಕ್ಕ ಮೇಟಿ ನೇತೃತ್ವದಲ್ಲಿ ಕೈ ಸದಸ್ಯರ ಒಂದು ಗುಂಪು ಬೆಂಗಳೂರಿಗೆ ತೆರಳಿ, ಸಿದ್ದರಾಮಯ್ಯ ಎದá-ರು ಬೇಡಿಕೆ ಮಂಡಿಸಿ ಬಂದಿದ್ದರು. ಬಾದಾಮಿ ಬಂದಾಗ ಮಾತಾಡೋಣ ಎಂದಿದ್ದರು ಎನ್ನಲಾಗಿದೆ. ಆದರೆ, ಈಗ ಲಭ್ಯವಾಗಿರá-ವ ಮಾಹಿತಿ ಪ್ರಕಾರ ವೀಣಾ ಕಾಶಪ್ಪನವರ ರಾಜೀನಾಮೆ ಸಲ್ಲಿಸಿದರೂ ಕಾಂಗ್ರೆಸ್ ಪಕ್ಷ ಮರಳಿ ಅಧಿಕಾರ ಗದ್ದುಗೆ ಹಿಡಿಯá-ವುದು ಅಂದá-ಕೊಂಡಷ್ಟು ಸುಲಭವಲ್ಲ. ಬಹá-ಮತ ಕೊರತೆಯಿಂದ ಬಳಲá-ತ್ತಿರá-ವ ಕಾಂಗ್ರೆಸ್ ಏನೇ ಮಾಡಿದರೂ ವಾಮಮಾರ್ಗ ಹಿಡಿಯಬೇಕಿದೆ. ಆದರೆ, ಈ ತಂತ್ರ ಜಿಲ್ಲೆಯ ಶಾಸಕರು ಆಗಿರá-ವ ಸಿದ್ದರಾಮಯ್ಯ ಅವರ ಒಪ್ಪಿಗೆ ಇಲ್ಲ ಎಂದು ಹೇಳಲಾಗá-ತ್ತಿದೆ. ವೀಣಾ ಅವರು ರಾಜೀನಾಮೆ ನೀಡಿದಲ್ಲಿ ಬಿಜೆಪಿಯ ಕೆಲ ಸದಸ್ಯರು ನನ್ನನ್ನು ಬೆಂಬಲಿಸಲಿದ್ದಾರೆ. ಅಧಿಕಾರ ಗದ್ದುಗೆ ಹಿಡಿಯá-ವುದು ಸುಲಭ ಎನ್ನುವ ಮಾತನ್ನು ಬಾಯಕ್ಕ ಮೇಟಿ ಸಿದ್ದರಾಮಯ್ಯ ಗಮನಕ್ಕೆ ತಂದಿದ್ದಾರಂತೆ. ಆದರೆ, ಸಿದ್ದರಾಮಯ್ಯವರು ಶಾಸಕರಾಗಿರá-ವ ಜಿಲ್ಲೆಯಲ್ಲೇ ಅಧಿಕಾರಕ್ಕಾಗಿ ಬಿಜೆಪಿ ಜತೆ ಕೈಜೋಡಿಸಿದ ಅಪವಾದ ರಾಜ್ಯಮಟ್ಟದಲ್ಲಿ ಸದ್ದು ಮಾಡá-ತ್ತದೆ. ತಮ್ಮ ಆಪ್ತ, ಮಾಜಿ ಸಚಿವ ಎಚ್.ವೈ. ಮೇಟಿ ಅವರ ಪುತ್ರಿ ಅಧ್ಯಕ್ಷರಾದಲ್ಲಿ ಆಪ್ತನ ಕುಟುಂಬಕ್ಕೆ ಅಧಿಕಾರ ಭಾಗ್ಯ ನೀಡಲು, ಅನೈತಿಕ ರಾಜೕಯಕ್ಕೆ ಹಸಿರು ನಿಶಾನೆ ನೀಡಿದ್ದಾರೆ ಎನ್ನುವ ಅಪವಾದ ಬರá-ತ್ತದೆ ಎನ್ನುವುದು ಸಿದ್ದರಾಮಯ್ಯ ಅವರ ಲೆಕ್ಕಾಚಾರವಂತೆ. ಹೀಗಾಗಿ ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಅಧಿಕಾರ ಹಿಡಿಯá-ವುದಾದಲ್ಲಿ ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ. ಇದರಿಂದ ಜಿಪಂ ಅಧ್ಯಕ್ಷ ಸ್ಥಾನದ ಮೇಲೆ ತೂಗುಕತ್ತಿ ನೇತಾಡುತ್ತಿದ್ದ ವೀಣಾ ಕಾಶಪ್ಪನವರ ಸದ್ಯಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ ಎಂದು ಹೇಳಲಾಗá-ತ್ತಿದೆ.

ತಂದೆಗೆ ತಪ್ಪಿದ್ದು ಪುತ್ರನಿಗೆ ಸಿಗಲಿ: ಸಿದ್ದರಾಮಯ್ಯ ಸರ್ಕಾರದಲ್ಲಿ ಮೂರು ಬಾರಿ ಸಚಿವ ಸ್ಥಾನಕ್ಕಾಗಿ ಸಾಕಷ್ಟು ಪ್ರಯತ್ನಿಸಿದ್ದರೂ ಮಂತ್ರಿಪಟ್ಟ ದೊರೆಯದೆ ತೀವ್ರ ಬೇಸರಗೊಂಡಿದ್ದ ಜಮಖಡಿ ಕ್ಷೇತ್ರದ ಅಂದಿನ ಶಾಸಕ ಸಿದ್ದು ನ್ಯಾಮಗೌಡರಿಗೆ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗಬಹá-ದು ಎಂದá-ಕೊಂಡಿರá-ವಾಗಲೆ ನಡೆಯಬಾರದ್ದು ನಡೆದು, ಅಕಾಲಿಕ ನಿಧನರಾದರು. ಕೇಂದ್ರದಲ್ಲಿ ಸಚಿವರಾಗಿದ್ದರೂ ರಾಜ್ಯ ಸರ್ಕಾರದಲ್ಲಿ ಸಚಿವರಾಗಬೇಕೆಂಬ ಅವರ ಆಸೆ ಕೊನೆಗೂ ಈಡೇಲಿಲ್ಲ. ಇದೇ ಕಾರಣಕ್ಕೆ ಇದೀಗ ಜಮಖಂಡಿ ಕ್ಷೇತ್ರದ ಶಾಸಕರಾಗಿರá-ವ ಆನಂದ ನ್ಯಾಮಗೌಡಗೆ ಸಚಿವ ಸ್ಥಾನ ಕೊಡಬೇಕು ಎಂದು ಅವರ ಸಮá-ದಾಯದವರು, ಬೆಂಬಲಿಗ ಪಡೆ ನಿರಂತರ ಒತ್ತಾಯ ಮಾಡá-ತ್ತಿದೆ. ಆದರೆ, ಇದೀಗ ಸಿದ್ದರಾಮಯ್ಯ ಅವರು, ಆನಂದ ನ್ಯಾಮಗೌಡ ಹೊಸದಾಗಿ ಶಾಸಕರಾಗಿದ್ದಾರೆ. ಅವರಿಗೆ ಮಂತ್ರಿ ಸ್ಥಾನ ಸಿಗಲ್ಲ ಎಂದು ಹೇಳಿರá-ವುದು ಶಾಸಕ ಆನಂದ ಬೆಂಬಲಿಗರಲ್ಲೂ ನಿರಾಸೆ ಮೂಡá-ವಂತೆ ಮಾಡಿದೆ.

ಎಸ್ಸಾರ್ಪಿಗೆ ಸಿಗá-ತ್ತ ಸಭಾಪತಿ ಸ್ಥಾನ?: ವಿಧಾನ ಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಸಹ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಲಾಗá-ತ್ತಿದೆ. ಆದರೆ, ಪಾಟೀಲರು ಮಾತ್ರ ಈವರೆಗೂ ಬಹಿರಂಗವಾಗಿ ಆಕಾಂಕ್ಷಿ ಎಂದು ಹೇಳಿಕೊಂಡಿಲ್ಲ. ಆದರೆ, ಸಿದ್ದರಾಮಯ್ಯ ಆಪ್ತಬಳಗದಲ್ಲಿ ಇರá-ವ ಪಾಟೀಲರನ್ನು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಅವರು ಹೆಸರು ಪ್ರಬಲವಾಗಿ ಕೇಳಿ ಬರá-ತ್ತಿದೆ. ಮಾಜಿ ಸಿಎಂ ಸಹ ಎಸ್ಸಾರ್ಪಿ ಪರವಾಗಿ ನಿಂತಿದ್ದಾರೆ ಎಂದು ಹೇಳಲಾಗá-ತ್ತಿದೆ.