ಬೆಂಗಳೂರು: ರಾಜ್ಯದಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿಮೂರ್ಲನೆಗೆ ಎಲ್ಲ ಅಧಿಕಾರಿಗಳು ಪಣ ತೊಡಬೇಕೆಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ರಾಜ್ಯ ಬಾಲ ಕಾರ್ಮಿಕ ನಿಮೂರ್ಲನಾ ಯೋಜನಾ ಸೊಸೈಟಿ ಮತ್ತು ಬೆಂಗಳೂರು ನಗರ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಸಹಯೋಗದಲ್ಲಿ ಕಾರ್ಮಿಕ ಇಲಾಖೆ, ಎಂ.ಜಿ.ರಸ್ತೆಯ ಗಾಂಧಿ ಪ್ರತಿಮೆ ಬಳಿ ಗುರುವಾರ ಆಯೋಜಿಸಲಾಗಿದ್ದ “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆ ವರದಿ ಪ್ರಕಾರ, ವಿಶ್ವದಲ್ಲಿ 13.80 ಕೋಟಿ ಬಾಲ ಕಾರ್ಮಿಕರು ಇದ್ದಾರೆ. ಭಾರತದಲ್ಲಿ 3.30 ಕೋಟಿ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇದನ್ನು ನೋಡಿದರೆ ಮಾನವೀಯತೆ ಇಲ್ಲದ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ಅನಿಸುತ್ತಿದೆ. ಈ ದಿನವನ್ನು ಆಚರಣೆಗೆ ಸೀಮಿತಪಡಿಸಬಾರದು. 2 ತಿಂಗಳಿಗೊಮ್ಮೆ ಆಚರಿಸುವ ಮೂಲಕ ಬಾಲಕಾರ್ಮಿಕರ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಡಾಬಾ, ಹೋಟೆಲ್, ಕಾರ್ಖಾನೆ, ಅಂಗಡಿಗಳು ಮತ್ತು ಮಾಲ್ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಬಾಲಕಾರ್ಮಿಕರನ್ನು ಗುರುತಿಸಿ ಶಾಲಾಗಳಿಗೆ ಕಳುಹಿಸುವಂತಾಗಬೇಕು. ಯಾರೂ ಸಹ ಶಿಣದಿಂದ ವಂಚಿತರಾಗಬಾರದು. ಇದು ಸರ್ಕಾರದ ಪ್ರಮುಖ ಉದ್ದೇಶವೂ ಆಗಿದೆ ಎಂದರು.
ಇಲಾಖೆ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಆಯುಕ್ತ ಡಾ.ಎಚ್. ಎನ್.ಗೋಪಾಲಕೃಷ್ಣ, ಜಂಟಿ ಆಯುಕ್ತ ಡಾ.ಎನ್.ವಿ.ರವಿಕುಮಾರ್ ಮತ್ತಿತರರಿದ್ದರು.
ಸಹಾಯವಾಣಿ ಸ್ಥಾಪನೆ: ಬಾಲಕಾರ್ಮಿಕರಿಂದ ದುಡಿಸಿಕೊಳ್ಳುವುದು ಕಂಡುಬಂದಲ್ಲಿ ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ ದೂರು ನೀಡಬಹುದು. ಈಗಾಗಲೇ 1 ಲಕ್ಕೂ ಅಧಿಕ ಕರೆಗಳು ಬಂದಿವೆ. 2001ರಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ನಮ್ಮ ರಾಜ್ಯವು, ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ದತಿ ನಿಮೂರ್ಲನೆಗೆ ಬಾಲ ಕಾರ್ಮಿಕ ಕ್ರಿಯಾ ಯೋಜನೆ ಜಾರಿಗೆ ತಂದಿತ್ತು .ಟಾಸ್ಕ್ ಪೋರ್ಸ್ ಸಮಿತಿ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು.3 ವರ್ಷಗಳಿಂದ 1,02,213 ತಪಾಸಣೆ ನಡೆಸಲಾಗಿದ್ದು, ಅಂದಾಜು 2,084 ಬಾಲಕಾರ್ಮಿಕರನ್ನು ಪತ್ತೆ ಹಚ್ಚಿ ಪುನರ್ವಸತಿ ಕಲ್ಪಿಸಲಾಗಿದೆ. 705 ಕೇಸ್ ದಾಖಲಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಜನರು ತಮ್ಮ ಕರ್ತವ್ಯ ಮರೆತು ಸರ್ಕಾರವನ್ನು ದೂಷಿಸಬಾರದು. ಸಣ್ಣ ಬದಲಾವಣೆ ಹೆಜ್ಜೆ ದೊಡ್ಡ ಮಟ್ಟದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ಬಾಲಕಾರ್ಮಿಕ ಪದ್ಧತಿ ನಿಮೂರ್ಲನೆಗೆ ಸಾರ್ವಜನಿಕರ ಪ್ರೋತ್ಸಾಹ ಅಗತ್ಯ.
| ಅದಿತಿ ಪ್ರಭುದೇವ ನಟಿ.
ಕರಾವಳಿ, ಮಲೆನಾಡಲ್ಲಿ ಮಳೆ ತೀವ್ರ: ಜೂ.16ರವರೆಗೆ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್