More

    ಕಾಳಜಿಯಿಂದ ಕೆಲಸ ನಿರ್ವಹಿಸಲು ಸಚಿವ ಸಂತೋಷ ಲಾಡ್ ಸೂಚನೆ

    ಧಾರವಾಡ: ಜನಸ್ನೇಹಿ ಆಡಳಿತಕ್ಕೆ ನನ್ನ ಮೊದಲ ಆದ್ಯತೆ. ಅದಕ್ಕೆ ಪೂರಕವಾಗಿ ಎಲ್ಲ ಇಲಾಖೆಗಳ ಅಽಕಾರಿಗಳು ಕೆಲಸ ಮಾಡಬೇಕು. ಜನಸ್ನೇಹಿ ಸೇವೆಗೆ ಬದ್ಧನಾಗಿದ್ದು, ಅಽಕಾರಿಗಳು ಬೆಂಬಲವಾಗಿ ನಿಲ್ಲಬೇಕು ಎಂದು ಸಚಿವ ಸಂತೋಷ ಲಾಡ್ ಸೂಚಿಸಿದರು.
    ನಗರದ ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ಜರುಗಿದ ತಾಲೂಕು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಕಾಂಗ್ರೆಸ್ ಚುನಾವಣೆಗೂ ಮೊದಲು ನೀಡಿದ್ದ ೫ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದೆ. ಸರ್ಕಾರದ ೫ ಗ್ಯಾರಂಟಿಗಳು ೬೦ ಸಾವಿರ ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳ್ಳುತ್ತಿವೆ. ಹಾಗಾಗಿ ಈ ಮಹತ್ವಕಾಂಕ್ಷಿ ಯೋಜನೆಗಳ ಜಾರಿಯಲ್ಲಿ ಹಲವು ಇಲಾಖೆಗಳ ಪಾತ್ರ ಮಹತ್ವದ್ದು ಎಂದರು.
    ಜನಪರ ಆಡಳಿತ ನೀಡುವುದು ನೌಕರರ ಕರ್ತವ್ಯ. ಅದನ್ನು ಬಿಟ್ಟು ಟೇಬಲ್ ಮೇಲೆ- ಕೆಳಗಿನ ವ್ಯವಹಾರ ಮಾಡಲು ಯತ್ನಿಸಿದರೆ ಸಹಿಸುವುದಿಲ್ಲ. ತಾಳ್ಮೆಯಿಂದ ಕೆಲಸ ನಿರ್ವಹಿಸಿ ಸಾರ್ವಜನಿಕರ ಅಗತ್ಯಗಳನ್ನು ಪೂರೈಸಬೇಕು. ಬದ್ಧತೆಯಿಂದ ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಕ್ಷೇತ್ರ ವ್ಯಾಪ್ತಿಯಲ್ಲಿ ಅನಿರೀಕ್ಷಿತ ಭೇಟಿ ನೀಡಲಿದ್ದು, ಅವ್ಯವಹಾರಗಳು ಕಂಡುಬAದರೆ ಸಹಿಸುವುದಿಲ್ಲ ಎಂದರು.
    ಉಪ ವಿಭಾಗಾಽಕಾರಿ ಅಶೋಕ ತೇಲಿ, ತಹಸೀಲ್ದಾರ್ ಡಾ. ಮೋಹನ ಭಸ್ಮೆ, ತಾ.ಪಂ. ಇಒ ಗಂಗಾಧರ ಕಂದಕೂರ ವೇದಿಕೆಯಲ್ಲಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts