ಹುತಾತ್ಮ ಯೋಧನ ಮನೆಗೆ ಸಚಿವ ರಮೇಶ ಭೇಟಿ

ಬೋರಗಾಂವ: ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಕಾಳಗದಲ್ಲಿ ಹುತಾತ್ಮನಾದ ಸಮೀಪದ ಬೂದಿಹಾಳ ಗ್ರಾಮದ ವೀರಯೋಧ ಪ್ರಕಾಶ ಪುಂಡಲೀಕ ಜಾಧವ ಅವರ ಮನೆಗೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಯೋಧನ ಅಂತ್ಯ ಸಂಸ್ಕಾರ ನಡೆದ ಸ್ಥಳದಲ್ಲಿ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 25 ಲಕ್ಷ ರೂ., ಮನೆ ನಿರ್ಮಾಣಕ್ಕೆ 15 ಲಕ್ಷ ರೂ., ಜೀವನೋಪಾಯಕ್ಕೆ 5 ಲಕ್ಷ ರೂ. ಸೇರಿ ಒಟ್ಟು 45 ಲಕ್ಷ ರೂ.ಪರಿಹಾರವನ್ನು ಶೀಘ್ರ ನೀಡಲಾಗುವುದು. ಯೋಧನಿಗೆ ಕೇವಲ 3 ತಿಂಗಳ ಮಗಳಿದ್ದು, ಆಕೆಯ ಭವಿಷ್ಯದ ಕುರಿತು ಕಾಳಜಿ ವಹಿಸಲಾಗುವುದು ಎಂದು ತಿಳಿಸಿದರು.

ಯುವ ಧುರೀಣ ಉತ್ತಮ ಪಾಟೀಲ, ತಹಸೀಲ್ದಾರ್ ಮಹಾದೇವ ಬನಸಿ, ಅಶೋಕಕುಮಾರ ಅಸೋದೆ, ಯೋಧನ ತಂದೆ ಪುಂಡಲೀಕ ಜಾಧವ, ತಾಯಿ ಶಾರದಾ ಜಾಧವ, ಪತ್ನಿ ನೀತಾ, ಗ್ರಾ.ಪಂ ಉಪಾಧ್ಯಕ್ಷ ನಾಸೀರ್‌ಖಾನ್ ಇನಾಮದಾರ, ಇತರರು ಇದ್ದರು.