More

    ಕಪಾಲ ಬೆಟ್ಟದ ವಿಚಾರ ಹಿಂದೆ ಏನ್ ಮಾಡಿದ್ದಾರೋ ಗೊತ್ತಿಲ್ಲ; ಒಟ್ಟಿನಲ್ಲದು ಅಕ್ರಮ ಎಂದ ಸಚಿವ ಆರ್.ಅಶೋಕ್

    ಬೆಂಗಳೂರು: ಕಪಾಲ ಬೆಟ್ಟದ ವಿಚಾರ ಹಿಂದೆ ಏನ್ ಮಾಡಿದ್ದಾರೋ ಗೊತ್ತಿಲ್. ನಮಗೆ ಬಂದಿರೋ ಮೌಖಿಕ ಮಾಹಿತಿ ಪ್ರಕಾರ ಡಿಸೆಂಬರ್ ನಲ್ಲಿ ಅನುಮತಿ ಕೇಳಿದ್ದಾರೆ. ಬೆಸ್ಕಾಂನಿಂದ ವರದಿ ಕೇಳಿದ್ದೇವೆ ಎಂದು ಸಚಿವ ಆರ್.ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.

    ತರಾತುರಿಯಲ್ಲಿ ದಾಖಲೆಗಳನ್ನ ಸೃಷ್ಟಿ‌ ಮಾಡಲಾಗ್ತಿದೆ, ಅಲ್ಲಿ ರಸ್ತೆ ಮಾಡೋಕೆ ಯಾವುದೇ ಅನುಮತಿ ಪಡೆದಿಲ್ಲ. ಆರೇಳು ಪ್ರತಿಮೆಗಳ ಇಟ್ಟಿದ್ದಾರೆ..ಅದಕ್ಕೂ ಅನುಮತಿ ಪಡೆದಿಲ್ಲ. ಮೆಲ್ನೋಟಕ್ಕೆ ಎಲ್ಲವೂ ಕಾನೂನು ಬಾಹಿರವಾಗಿ ಮಾಡ್ತಿದ್ದಾರೆ. ಡಿಸಿ ಮೌಖಿಕವಾಗಿ ವರದಿ ನೀಡಿದ್ದಾರೆ

    ಸಂಪೂರ್ಣ ವರದಿ ನೀಡುವಂತೆ ಸೂಚಿಸಿದ್ದೇನೆ. ಟ್ರಸ್ಟ್ ಡೀಡ್​ನಲ್ಲಿ ಎಲ್ಲೂ ಕೂಡ ಪ್ರತಿಮೆ ಮಾಡ್ತೀವಿ ಎಂದು ಇಲ್ಲ. ಶಾಲೆ ಮಾಡ್ತೀವಿ, ಹೆಲ್ತ್ ಕ್ಯಾಂಪ್ ಮಾಡ್ತೀವಿ ಅಂತ ಹೇಳಿದ್ದಾರೆ. ಸಂಪೂರ್ಣ ವರದಿ ಬಂದ ಬಳಿಕ ಸೂಕ್ತ ನಿರ್ಧಾರವನ್ನ ಸರ್ಕಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.

    ರಾಮನಗರದಲ್ಲಿ ಕೂಡ ಇದೇ ರೀತಿಯ ಪ್ರಕರಣ ನಡೆದಿವೆ. ಮುನೇಶ್ವರ ಬೆಟ್ಟದಲ್ಲೂ ಶಿಲುಬೆಗಳು ಹಾಕಿದ್ದಾರೆ. ಕಪಾಲ ಬೆಟ್ಟದ ಬಗ್ಗೆ ವರದಿ ನೀಡೋಕೆ ಕೆಲವು ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts