ಬೆಳಗಾವಿ: ಸಚಿವ ಸ್ಥಾನ ವಂಚಿತರಿಗೆ ಕಾದಿದೆ ಅವಕಾಶ

ಬೆಳಗಾವಿ: ರಾಜಕೀಯ ಅಂದಮೇಲೆ ಸಹಜವಾಗಿ ಪಕ್ಷದಲ್ಲಿ ಭಿನ್ನಮತ ಇರುವುದು ಸಹಜ. ಮುಂದೆ ಸಚಿವ ಸ್ಥಾನ ವಂಚಿತರಿಗೆ ಅವಕಾಶಗಳು ಸಿಗುತ್ತವೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ನಗರದ ಗೃಹ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಪಕ್ಷ ಅಕಾರಕ್ಕೆ ಬಂದರೆ ಎಲ್ಲರಿಗೂ ಮಂತ್ರಿ ಆಗುವ ಅಪೇಕ್ಷೆ ಇರುತ್ತದೆ. ಆದರೆ, ಎಲ್ಲ ಸಂದರ್ಭಗಳೂ ಒಂದೇ ಆಗಿರುವುದಿಲ್ಲ.ಕೆಲವರಿಗೆ ಅವಕಾಶ ತಪ್ಪಿ ಹೋಗುತ್ತದೆ. ಆದರೆ ವರಿಷ್ಠರು ಎಲ್ಲರಿಗೂ ಜವಾಬ್ದಾರಿ ವಹಿಸುವುದು ನಿಶ್ಚಿತ ಎಂದರು.

ಸಂಪುಟ ರಚನೆ ಬಳಿಕ ಪಕ್ಷದಲ್ಲಿ ಉದ್ಭವಿಸಿರುವ ಭಿನ್ನಮತದ ಬಗ್ಗೆ ನಮ್ಮ ವರಿಷ್ಠರು ಚರ್ಚೆ ಮಾಡಿದ್ದಾರೆ.ಈಗಾಗಲೇ ಮೊದಲ ಹಂತದಲ್ಲಿ 17 ಜನರನ್ನು ಸಚಿವರನ್ನಾಗಿ ಮಾಡಿದ್ದಾರೆ. ಇನ್ನೂ ಎರಡನೇ ಹಂತದಲ್ಲಿ ಸ್ಥಾನ ವಂಚಿತರಿಗೆ ಅವಕಾಶ ಸಿಗಲಿದೆ. ಶಾಸಕ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ ಅವರನ್ನು ನಿತ್ಯ ಭೇಟಿ ಮಾಡುತ್ತೇನೆ. ನಾವೆಲ್ಲ ಒಂದೇ ಜಿಲ್ಲೆಯವರು ಆಗಿರುವುದರಿಂದ ಒಂದೇ ವಿಚಾರ ಹೊಂದಿದವರಾಗಿದ್ದೇವೆ ಎಂದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಬಿಜೆಪಿಯಲ್ಲಿ ಭಿನ್ನಮತದ ಲಾಭ ಪಡೆಯುವ ಹಗಲುಗನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಮುಳುಗಿ ಹೋಗುವ ಸ್ಥಿತಿಯಲ್ಲಿದೆ. ಕಾಂಗ್ರೆಸ್ ಶೀಘ್ರ ರಾಜಕೀಯ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಹೇಳಿದರು.

ರೈ ಮೊದಲು ಸ್ವಪಕ್ಷದ ಸ್ಥಿತಿ ನೋಡಿಕೊಳ್ಳಲಿ

ಗೋಡ್ಸೆ ಸಂತತಿ ಬಗ್ಗೆ ಮಾಜಿ ಸಚಿವ ರಮಾನಾಥ ರೈ ಹೇಳಿಕೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಲಕ್ಷ್ಮಣ ಸವದಿ, ಮೊದಲು ತಮ್ಮ ಪಕ್ಷದ ಸ್ಥಿತಿ ಬಗ್ಗೆ ಮಾಜಿ ಸಚಿವ ರಮಾನಾಥ ರೈ ನೋಡಿಕೊಳ್ಳಲಿ. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳೀನ್‌ಕುಮಾರ್ ಬಗ್ಗೆ ಮಾತನಾಡಲು ರೈ ಯಾರು? ಅವರ ಪಕ್ಷದಲ್ಲೆ ಸಾಕಷ್ಟು ಗೊಂದಲವಿದ್ದು, ಕುಸಿದು ಹೋಗುತ್ತಿದೆ ಎಂದು ತಿರುಗೇಟು ನೀಡಿದರು.


ಹಿರಿಯ ಶಾಸಕ ಉಮೇಶ ಕತ್ತಿ ಅವರಿಗೆ ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನ ಸಿಗಬೇಕಿತ್ತು. ಈ ಬಗ್ಗೆ ಅಸಮಾಧಾನ ಸಾಮಾನ್ಯ ಸಂಗತಿ. ಶಾಸಕರಾದ ಉಮೇಶ ಕತ್ತಿ, ಆನಂದ ಮಾಮನಿ, ಅಭಯ ಪಾಟೀಲ ಯಾರೊಬ್ಬರ ಮೊಬೈಲ್ ಸ್ವಿಚ್ ಆ್ ಆಗಿಲ್ಲ.
|ಅನಿಲ ಬೆನಕೆ ಶಾಸಕ

Leave a Reply

Your email address will not be published. Required fields are marked *