ಸಚಿವರ ಕಾರಿಗೆ ಆಕಸ್ಮಿಕವಾಗಿ ಅಡ್ಡಬಂದ ಸಾರಿಗೆ ಬಸ್​:​ ಚಾಲಕನ ಮೇಲೆ ಸಚಿವರ ಪಿಎ ದರ್ಪ

ಧಾರವಾಡ: ನಗರದ ಹಳೇ ಬಸ್ ನಿಲ್ದಾಣದಿಂದ ಹೊರ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್​ ಏಕಾಏಕಿ ಬಂದ ಸಚಿವರ ಕಾರಿಗೆ ಅಡ್ಡ ಬಂದಿದ್ದು, ದಾರಿ ಬಿಡಲು ತಡ ಮಾಡಿದ ಕಾರಣ ಬಸ್​ ಚಾಲಕನ ಮೇಲೆ ಸಚಿವರ ಪಿಎ ದರ್ಪ ತೋರಿದ ಘಟನೆ ನಡೆದಿದೆ.

ಬಸ್​ ನಿಲ್ದಾಣದಿಂದ ಬಸ್​ ಹೊರ ಹೋಗುತ್ತಿದ್ದ ವೇಳೆ, ಏಕಾಏಕಿ ಸಚಿವ ಆರ್​.ವಿ.ದೇಶಪಾಂಡೆ ವಾಹನ ಬಂದಿದೆ. ಈ ವೇಳೆ ಸಚಿವರ ವಾಹನಕ್ಕೆ ದಾರಿ ಬಿಡಲು ತಡವಾಗಿದೆ. ಇದರಿಂದ ಕೋಪಗೊಂಡ ಸಚಿವರ ಪಿಎ, ಪೊಲೀಸರಿಗೆ ಬಸ್ ಬಿಡಬೇಡ ಎಂದು ಒತ್ತಾಯಿಸಿದ್ದು ದಂಡ ವಿಧಿಸಲು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಸಂಚಾರಿ ಪೊಲೀಸರು ಬಸ್ ನಿಲ್ದಾಣದಲ್ಲಿಯೇ ಬಸ್ ತಡೆದು ನಿಲ್ಲಿಸಿದ್ದಾರೆ.

ಸಂಜೆ 5.45ರಲ್ಲಿ ಈ ಘಟನೆ ನಡೆದಿದ್ದು, ಧಾರವಾಡದಿಂದ ಹೊಸವಾಳ ಗ್ರಾಮಕ್ಕೆ ತೆರಳುತ್ತಿದ್ದ ಬಸ್​ ಅನ್ನು ಏಕಾಏಕಿ ತಡೆದಿದ್ದರಿಂದ ಹಲವು ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ. (ದಿಗ್ವಿಜಯ ನ್ಯೂಸ್​)Leave a Reply

Your email address will not be published. Required fields are marked *