25.3 C
Bangalore
Friday, December 13, 2019

ಲಂಬಾಣಿ ಸಮುದಾಯದವರನ್ನು ಕುಡುಕರು ಎಂಬಂತೆ ಬಿಂಬಿಸುವ ಸಚಿವ ನಾಗೇಶ್​ ಹೇಳಿಕೆಗೆ ಖಂಡನೆ, ಕೂಡ್ಲಿಗಿಯಲ್ಲಿ ಪ್ರತಿಭಟನೆ

Latest News

ಸಾಲಿಗ್ರಾಮದಲ್ಲಿ ಕೋಮು ಗಲಾಟೆ ಸಂಬಂಧ ಮಾಜಿ ಸಚಿವ ಸಾ.ರಾ.ಮಹೇಶ್​ ಸಹೋದರನ ವಿರುದ್ಧ ಎಫ್​ಐಆರ್​

ಮೈಸೂರು: ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದಲ್ಲಿ ನಡೆದ ಕೋಮು ಗಲಾಟೆ ಸಂಬಂಧ ಮಾಜಿ ಸಚಿವ ಸಾ.ರಾ.ಮಹೇಶ್​ ಅವರ ಸಹೋದರ ಸಾ.ರಾ.ರಘು ಅವರ ಮೇಲೆ ಎಫ್​ಐಆರ್​...

ಪೌರತ್ವ ತಿದ್ದುಪಡಿ ಮಸೂದೆ ಸಿಂಧುತ್ವ ಪ್ರಶ್ನಿಸಿ ತ್ವರಿತ ವಿಚಾರಣೆಗೆ ಅರ್ಜಿ ಸಲ್ಲಿಸಿದ್ದ ಟಿಎಂಸಿ ಸಂಸದೆಗೆ ಸುಪ್ರೀಂಕೋರ್ಟ್​ನಲ್ಲಿ ಹಿನ್ನೆಡೆ!

ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಮಸೂದೆಯ ಸಿಂಧುತ್ವವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್​ ಪಕ್ಷದ ಸಂಸದೆ ಮೋಹುವಾ ಮೊಯಿತ್ರಾ...

ಜೀತ ವಿಮುಕ್ತರಿಗೆ ಬಂಧಮುಕ್ತ ಪ್ರಮಾಣಪತ್ರ ವಿತರಿಸಿದ ಎಸಿ ನವೀನ್ ಭಟ್

ಹೊಳೆನರಸೀಪುರ: ಪಟ್ಟಣದ ತಾಲೂಕು ಕಚೇರಿಯಲ್ಲಿ ಗುರುವಾರ ಸಂಜೆ ಜೀತ ಮುಕ್ತ ಗೊಳಿಸಿದ 6 ಜನರಿಗೆ ಬಂಧಮುಕ್ತ ಪ್ರಮಾಣ ಪತ್ರವನ್ನು ಉಪ ವಿಭಾಗಾಧಿಕಾರಿ ನವೀನ್ ಭಟ್ ವಿತರಿಸಿದರು. ನಂತರ...

ಹಾಸನದವರಷ್ಟು ಬುದ್ಧಿ ನನಗೆ ಕೊಡಪ್ಪ ಅಂತ ದೇವರಲ್ಲಿ ಕೇಳುತ್ತೇನೆ ಅಂದ್ರು ಸಚಿವ ಜೆ.ಸಿ.ಮಾಧುಸ್ವಾಮಿ

ಚನ್ನರಾಯಪಟ್ಟಣ: ತಾಲೂಕಿನ ಏತನೀರಾವರಿ ಯೋಜನೆಯಲ್ಲಿ ಜಮೀನು ಕಳೆದುಕೊಂಡಿರುವವರ ಪರಿಹಾರಕ್ಕೆ ಸುಮಾರು 200 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹೇಳಿದರು. ತಾಲೂಕಿನ...

ಪತ್ನಿಗೆ ಈರುಳ್ಳಿ ಕಿವಿಯೋಲೆ ತಂದುಕೊಟ್ಟ ಪ್ರಖ್ಯಾತ ನಟನ್ಯಾರು: ಕಾಮಿಡಿಯಾದ್ರೂ ಇದರಲ್ಲಿದೆ ಮನಮುಟ್ಟುವ ಸಂದೇಶ!

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಪತ್ನಿ ಟ್ವಿಂಕಲ್​ ಖನ್ನಾ ದೇಶದಲ್ಲಿ ಏನೇ ಬೆಳವಣಿಗೆಯಾದರೂ ಜಾಲತಾಣದಲ್ಲಿ ಪ್ರತಿಕ್ರಿಯೆ...

ಕೂಡ್ಲಿಗಿ: ರಾಜ್ಯದಲ್ಲಿ ಸಂಚಾರಿ ಮದ್ಯದಂಗಡಿಗಳನ್ನು ತೆರೆದು ಲಂಬಾಣಿ ತಾಂಡಾಗಳಲ್ಲಿನ ಮನೆ, ಮನೆಗೆ ಮದ್ಯ ತಲುಪಿಸಲಾಗುವುದು ಎಂಬ ಅಬಕಾರಿ ಸಚಿವ ನಾಗೇಶ್​ ಹೇಳಿಕೆಯನ್ನು ಶ್ರೀ ಸಂತ ಸೇವಾಲಾಲ್​ ಬಂಜಾರ ಅಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು ಖಂಡಿಸಿದ್ದಾರೆ. ಈ ಸಂಬಂಧ ಕೂಡ್ಲಿಗಿ ಪಟ್ಟಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಗಾಂಧಿ ಚಿತಾಭಸ್ಮವಿರುವ ಹುತಾತ್ಮರ ಸ್ಮಾರಕದಿಂದ ತಹಸಿಲ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ತಹಸೀಲ್ದಾರ್ ಎಸ್. ಮಹಾಬಲೇಶ್ವರ ಮೂಲಕ ಅಬಕಾರಿ ಸಚಿವರ ಹೇಳಿಕೆ ಖಂಡಿಸಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಸಂಚಾರಿ ಮದ್ಯ ಅಂಗಡಿಗಳನ್ನು ತೆರೆದು ಲಂಬಾಣಿ ತಾಂಡಾಗಳಲ್ಲಿ ಮನೆ ಮನೆಗೆ ಮದ್ಯ ತಲುಪಿಸಲಾಗುವುದು ಎಂದು ಹೇಳುವ ಮೂಲಕ ಸಚಿವ ನಾಗೇಶ್​ ಇಡೀ ಸಮುದಾಯವನ್ನೇ ಕುಡುಕರು ಎಂಬಂತೆ ಬಿಂಬಿಸಿದ್ದಾರೆ. ಇದರಿಂದ ರಾಜ್ಯದ ಲಂಬಾಣಿಗರ ಬದುಕಿಗೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗಿದೆ. ಆದ್ದರಿಂದ ಸಚಿವ ನಾಗೇಶ್ ಅವರು ಸಮುದಾಯದವರ ಬಳಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಭವಿಷ್ಯದಲ್ಲಿ ಕೂಡ ತಾಂಡಾಗಳ ಮನೆ, ಮನೆಗೆ ಮದ್ಯ ಪೂರೈಕೆ ಅಥವಾ ಮದ್ಯ ಮಾರಾಟ ಮಳಿಗೆ ಪ್ರಾರಂಭಿಸುವ ತಪ್ಪು ನಿರ್ಧಾರಗಳನ್ನು ಕೈಗೊಳ್ಳಬಾರದು. ಇದರೊಂದಿಗೆ ರಾಜ್ಯದ ಎಲ್ಲ ತಾಂಡಾಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆಯಬೇಕು. ತಾಂಡಾ ಅಭಿವೃದ್ಧಿ ನಿಗಮಕ್ಕೆ ಕನಿಷ್ಠ 1 ಸಾವಿರ ಕೋಟಿ ರೂ. ಅನುದಾನ ನೀಡಬೇಕು. ಮುಂದೆಯೂ ಯಾರಾದರು ಲಂಬಾಣಿಗರ ತಾಳ್ಮೆ, ಒಗ್ಗಟ್ಟುನ್ನು ಮುರಿಯಲು ಯತ್ನಿಸಿದರೆ ರಾಜ್ಯ ವ್ಯಾಪಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಸ್ಥೆ ಅಧ್ಯಕ್ಷ ಪ್ರಕಾಶ್ ಎಂ.ವೀರಾನಾಯ್ಕ, ಗೌರವಾಧ್ಯಕ್ಷ ಶ್ಯಾಂನಾಯ್ಕಾ, ಪ್ರಧಾನ ಕಾರ್ಯದರ್ಶಿ ಡಿ.ಟಿ.ರಾಮಸ್ವಾಮಿ ನಾಯ್ಕ, ಖಜಾಂಚಿ ಎಂ.ಕೊಟ್ರೇಶ್‌ನಾಯ್ಕ, ಸದಸ್ಯರಾದ ಉಮೇಶ್ ನಾಯ್ಕ, ರಾಮ ನಾಯ್ಕ, ವೆಂಕಟೇಶ್ ನಾಯ್ಕ, ವಿಜಯ ಕುಮಾರ್ ನಾಯ್ ಸೇರಿ ತಾಲೂಕಿನ ಎಲ್ಲ ತಾಂಡಾಗಳ ನಾಯ್ಕ, ಡಾವೋ, ಕಾರಬಾರಿ ಮತ್ತು ಯುವಕರು ಇದ್ದರು.

Stay connected

278,747FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...