ಮಂಡ್ಯ: ತೋಟಗಾರಿಕಾ ಸಚಿವ ನಾರಾಯಣ ಗೌಡ ಅವರು ಇಂದು ಸ್ವಲ್ಪದರಲ್ಲಿ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ.
ನಾಗಮಂಗಲದ ಬಂಕಾಪುರದ ಬಳಿ ಸಚಿವರು ಕಾರು ಬರುತ್ತಿದ್ದಾಗ, ರಸ್ತೆ ಬದಿಯಲ್ಲಿದ್ದ ಕಲ್ಲುಬಂಡೆ ಏಕಾಏಕಿ ಸ್ಫೋಟಗೊಂಡಿದೆ. ಸಚಿವರು ಕೆ.ಆರ್.ಪೇಟೆಗೆ ಹೊರಟಿದ್ದರು.
ಇದನ್ನೂ ಓದಿ: ಅಗಲಿದ ನಟನಿಗೆ ಶ್ರದ್ಧಾಂಜಲಿ ಅರ್ಪಿಸಿದ ರಾಜಕೀಯ ಗಣ್ಯರು; ದಿಗ್ಭ್ರಮೆಯಾಗಿದೆ ಎಂದ್ರು ಸಿಎಂ ಯಡಿಯೂರಪ್ಪ
ಬೆಂಗಳೂರು-ಜಲಸೂರು ರಸ್ತೆ ನಿರ್ಮಾಣಕ್ಕಾಗಿ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರ ಹಗಲು ಹೊತ್ತಿನಲ್ಲಿಯೇ, ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದೆ ಬಂಡೆಯನ್ನು ಸ್ಫೋಟಿಸಿದ್ದಾನೆ. ಈ ಬಂಡೆ ಸ್ಫೋಟಗೊಳ್ಳುವುದಕ್ಕೂ, ಸಚಿವರ ಕಾರು ಅಲ್ಲಿ ಬರುವುದಕ್ಕೂ ಸರಿಯಾಗಿದ್ದು, ಸಚಿವರು ಕೂದಲೆಳೆ ಅಂತರದಿಂದ ಅಪಾಯದಿಂದ ಪಾರಾಗಿದ್ದಾರೆ.
ಕೆಶಿಫ್ ರಸ್ತೆ ಕಾಮಗಾರಿ ನಡೆಸುತ್ತಿದ್ದ ಮೈಸೂರಿನ ಗುತ್ತಿಗೆದಾರ ಶ್ರೀನಿವಾಸ್ ರಾಜ್ ಅವರ ಬೇಜವಾಬ್ದಾರಿತನದ ವಿರುದ್ಧ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದು, ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
https://www.facebook.com/VVani4U/videos/251785529428839/?t=14
VIDEO: ಕರೊನಾದಿಂದ ಗುಣಮುಖರಾಗಿ ರೋಡ್ ಷೋ: ಇಮ್ರಾನ್ ಪಾಷಾ ಅರೆಸ್ಟ್- ಜಮೀರ್ ಗರಂ