ಎನ್. ಮಹೇಶ್ ಯಾರು? ಮನಸ್ಸು ಮಾಡಿದ್ರೆ ಗೇಟ್​ಪಾಸ್!

ಚಾಮರಾಜನಗರ: ಶಿಕ್ಷಣ ಸಚಿವ ಎನ್‌. ಮಹೇಶ್‌ ವಿರುದ್ಧ ಸಚಿವ ಪುಟ್ಟರಂಗ ಶೆಟ್ಟಿ ಗುಡುಗಿದ್ದು, ಸಚಿವ ಎನ್. ಮಹೇಶ್ ಯಾರು? ಈಗ ತಾನೇ ಸಚಿವ ಮಹೇಶ್​​ ಕಣ್ಣು ಬಿಟ್ಟಿದ್ದಾನೆ. ಮನಸ್ಸು ಮಾಡಿದ್ರೆ ಮಹೇಶ್‌ಗೆ ಗೇಟ್‌ಪಾಸ್‌ ಕೊಡಬಹುದು ಎಂದು ಏಕವಚನದಲ್ಲಿ ಕಿಡಿಕಾರಿದ್ದಾರೆ.

ಪುಣ್ಯಕ್ಕೆ ಎನ್.ಮಹೇಶ್​ಗೆ ಸಚಿವ ಸ್ಥಾನ ಸಿಕ್ಕಿದೆ. ಅತಿರಥ ಮಹಾರಥರು ಕಾಂಗ್ರೆಸ್ ಪಕ್ಷವನ್ನು ಏನು ಮಾಡಲಿಕ್ಕೆ ಆಗುವುದಿಲ್ಲ. ಈ ಮಹೇಶ್ ಯಾರು..? ಮೊದಲ ಬಾರಿಗೆ ಸಚಿವನಾಗಿದ್ದಾನೆ. ಅದು ಸಮ್ಮಿಶ್ರ ಸರ್ಕಾರದಿಂದ ಮಾತ್ರ ಸಚಿವನಾಗಿರುವುದು. ಮಹೇಶ್ ಮನಸ್ಸು ಮಾಡಿದ್ರೆ ಏನು ಮಾಡಲಾಗುವುದಿಲ್ಲ. ನಾವು ಮನಸ್ಸು ಮಾಡಿದ್ರೆ ನಾಳೆನೇ ಕ್ಯಾಬಿನೆಟ್​​ನಿಂದ ಔಟ್ ಮಾಡಬಹುದು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಹೆಮ್ಮರವಾಗಿದೆ. ಕಾಂಗ್ರೆಸ್ ಬಗ್ಗೆ ಹಗುರವಾದ ಹೇಳಿಕೆ ಕೊಟ್ಟರೆ ಅವರೇ ಕಿತ್ತೋಗುತ್ತಾರೆ. ಅದರ ಬಗ್ಗೆ ಮಾತನಾಡೋಕೆ ಇವನ್ಯಾರು? ನಾವು 80 ಸ್ಥಾನವನ್ನು ಪಡೆದಿದ್ದೇವೆ ಹುಷಾರ್. ಯಾರನ್ನೋ ಮೆಚ್ಚಿಸಲು ಕಾಂಗ್ರೆಸ್​ ಬಗ್ಗೆ ಮಾತನಾಡುತ್ತಿದ್ದಾರೆ. ಏನೇ ಗೊಂದಲವಿದ್ದರೂ ಸರ್ಕಾರ 5 ವರ್ಷ ಪೂರೈಸುತ್ತದೆ ಎಂದು ಸಚಿವರು ಮತ್ತೊಬ್ಬ ಸಚಿವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)