ನನ್ನನ್ನು ಮಂತ್ರಿ ಮಾಡಿದ್ದು ಪುಟ್ಟರಂಗ ಶೆಟ್ಟಿಯಲ್ಲ: ಸಚಿವ ಎನ್​. ಮಹೇಶ್​

ಕಾರವಾರ: ಪುಟ್ಟರಂಗ ಶೆಟ್ಟಿ ನನ್ನನ್ನು ಮಂತ್ರಿ ಮಾಡಿಲ್ಲ. ನನ್ನನ್ನು ಮಂತ್ರಿ ಮಾಡಿದ್ದು ಬೆಹನ್​ ಜಿ, ಎಚ್​.ಡಿ. ದೇವೆಗೌಡ ಹಾಗೂ ಎಚ್​.ಡಿ. ಕುಮಾರಸ್ವಾಮಿ. ಅಷ್ಟಕ್ಕೂ ನಾನು ಹೇಳಿದ್ದು ಛತ್ತೀಸ್​​ಗಡ ರಾಜಕೀಯದ ಬಗ್ಗೆ, ಆದ್ದರಿಂದ ಪುಟ್ಟರಂಗ ಶೆಟ್ಟಿ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಸಚಿವ ಎನ್​. ಮಹೇಶ್ ​ಅವರು ತಿರುಗೇಟು ನೀಡಿದ್ದಾರೆ.

ಕಾರವಾರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪುಟ್ಟರಂಗ ಶೆಟ್ಟಿ ಅವರಿಂದ ಏನು ಮಾಡಲಾಗದು. ಪಾರ್ಥೇನಿಯಂ ಅನ್ನು ಕಾಂಗ್ರೆಸ್ ಗಿಡ ಅಂತ ಕರೆಯುತ್ತಾರೆ. ಕಾಂಗ್ರೆಸ್ ಗಮನದಲ್ಲಿಟ್ಟುಕೊಂಡು ಮಾತನಾಡಿಲ್ಲ. ಬೇಸರವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ಹೇಳಿದರು.

ಛತ್ತೀಸ್​​ಗಡದಲ್ಲಿ ಕಾಂಗ್ರೆಸ್ ಮತ್ತು ಬಿಎಸ್ಪಿ ಹೊಂದಾಣಿಕೆ ಮಾಡಿಕೊಳ್ಳುವ ಅವಕಾಶ ಇತ್ತು. ಅದು ರಾಷ್ಟ್ರಮಟ್ಟದಲ್ಲಿ ನಡೆಯುವ ರಾಜಕೀಯ. ಕರ್ನಾಟಕದಲ್ಲಿ ಆ ರೀತಿಯ ಸಮಸ್ಯೆ ಇಲ್ಲ. ಪುಟ್ಟರಂಗ ಶೆಟ್ಟಿ ಈ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)