More

    ರಾಜಧಾನಿಯ 10 ರಸ್ತೆಗಳು ಐದು ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣ 

    ಬೆಂಗಳೂರು: ರಾಜಧಾನಿಯ 10 ರಸ್ತೆಗಳನ್ನು ವರ್ತಲ ರಸ್ತೆ ಮಾದರಿಯಲ್ಲಿ ನಿರ್ವಿುಸುವ ಕಾಮಗಾರಿ ಪ್ರಗತಿಯ ಹಂತದಲ್ಲಿದ್ದು, ಜೂನ್ ಅಂತ್ಯದೊಳಗೆ ಸುಗಮ ಸಂಚಾರಕ್ಕೆ ಸಿದ್ಧವಾಗಲಿವೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಗುರುವಾರ ವಿವಿಧ ರಸ್ತೆ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ, ಪ್ರಗತಿ ಹಾಗೂ ಗುಣ ಮಟ್ಟವನ್ನು ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. 21 ಕಿ.ಮೀ. ಉದ್ದದ 137 ಕೋಟಿ ರೂ. ಮೊತ್ತದ ಮೈನಹಳ್ಳಿ- ಬೂದಿಗೆರೆ ಕ್ರಾಸ್ ರಾಜ್ಯ ಹೆದ್ದಾರಿ, 39 ಕಿ.ಮೀ. ಉದ್ದದ 182 ಕೋಟಿ ರೂ. ಮೊತ್ತದ ಹೊಸಕೋಟೆ ರಸ್ತೆ- ಆನೇಕಲ್ ವಯಾ ಅತ್ತಿಬೆಲೆ, ಸರ್ಜಾಪುರ ರಾಜ್ಯ ಹೆದ್ದಾರಿ, 1.3 ಕಿ.ಮೀ. ಉದ್ದದ 163 ಕೋಟಿ ರೂ. ವೆಚ್ಚದ ಎಲಿವೇಟೆಡ್ ಕಾರಿಡಾರ್ ಕಾಮಗಾರಿಗಳು ಈಗಾಗಲೇ ಪ್ರಗತಿ ಹಂತದಲ್ಲಿವೆ. ಈ ಕಾಮಗಾರಿಗಳನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮವು

    ಕೈಗೊಳ್ಳುತ್ತಿದೆ. ಶೀಘ್ರವಾಗಿ ಅನುಷ್ಠಾನಗೊಳಿಸಲು ಇರುವ ಅಡೆತಡೆ, ಭೂಸ್ವಾಧೀನ, ಸಮಸ್ಯೆಗಳನ್ನು ರ್ಚಚಿಸಲಾಗಿದೆ ಎಂದು ಕಾರಜೋಳ ತಿಳಿಸಿದರು. ಔಟರ್ ರಿಂಗ್ ರಸ್ತೆ ನಿರ್ವಣಕ್ಕೆ ಭೂಸ್ವಾಧೀನ ಸಮಸ್ಯೆಯಾಗಿರುವುದರಿಂದ ಅಲ್ಲಲ್ಲಿ 4- 5 ಕಿ.ಮೀ. ಉದ್ದದ ರಸ್ತೆಗಳನ್ನು ನಿರ್ವಿುಸಿ ಜೋಡಿಸಲಾಗುತ್ತಿದೆ. ಪ್ರಸ್ತಾಪಿತ ರಸ್ತೆ ಕಾಮಗಾರಿಗಳಲ್ಲಿ ಮಧ್ಯೆ ಮರಗಳಿದ್ದು, ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಮುಖ್ಯ ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.

    1,400 ಕೋಟಿ ರೂ. ಬಿಡುಗಡೆ

    ಭವನಗಳ ನಿರ್ಮಾಣ ಯೋಜನೆಯನ್ನು 2008ರಲ್ಲಿ ಪ್ರಾರಂಭಿಸಲಾಗಿದೆ. ಈವರೆಗೆ 6,900 ಭವನಗಳ ನಿರ್ವಣಕ್ಕೆ ಮಂಜೂರಾತಿ ನೀಡಲಾಗಿದ್ದು, 1,400 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 2,001 ಭವನಗಳ ಕಾಮಗಾರಿ ಪೂರ್ಣಗೊಂಡಿದೆ. ಹಣದ ಕೊರತೆ ಇಲ್ಲ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಇದೆ. ಕೆಲವು ಭವನಗಳಿಗೆ ನಿವೇಶನವಿಲ್ಲ. ಕೆಲವು ಪ್ರಗತಿಯಲ್ಲಿವೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

    ಮಂಗಳೂರು ಪ್ರಕರಣವನ್ನು ಯಾರೂ ಸಹಿಸಿಕೊಳ್ಳಲಾಗುವುದಿಲ್ಲ. ದೇಶದ ಭದ್ರತೆ ಹಾಗೂ ಜನರ ರಕ್ಷಣೆ ಹಿತದೃಷ್ಟಿಯಿಂದ ಯೋಚಿಸಬೇಕು. ಹೇಳಿಕೆಗಳಿಂದ ಪೊಲೀಸರ ತನಿಖೆಗೆ ತೊಂದರೆ ಆಗಬಾರದು.

    | ಗೋವಿಂದ ಕಾರಜೋಳ ಡಿಸಿಎಂ  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts