More

    ಜಾಗ ಸಿಕ್ಕರೆ ಚಿಕ್ಕನಾಯಕನಹಳ್ಳಿಯಲ್ಲಿ ಶೀಘ್ರದಲ್ಲೇ ಡಿಪೋ ನಿರ್ಮಾಣ : ಸಚಿವ ಜೆ.ಸಿ.ವಾಧುಸ್ವಾಮಿ

    ಚಿಕ್ಕನಾಯಕನಹಳ್ಳಿ: ಕೆಎಸ್‌ಆರ್‌ಟಿಸಿ ಡಿಪೋ ಸ್ಥಾಪನೆಗೆ ಸ್ಥಳ ಪರಿಶೀಲನೆ ನಡೆಸಿದ್ದು, ಶ್ರೀದಲ್ಲೇ ಪಟ್ಟಣ ವ್ಯಾಪ್ತಿಯಲ್ಲಿ ಡಿಪೋ ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಶನಿವಾರ ಗಾರ್ಮೆಂಟ್ಸ್ ಕಾರ್ಖಾನೆಗಳ ನೌಕರರಿಗಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಚಾಲನೆ ನೀಡಿ ವಾತನಾಡಿದ ಅವರು, ಡಿಪೋ ನಿರ್ಮಿಸಲು ತಾಲೂಕು ಕಚೇರಿ ಹಿಂಭಾಗ ಗುರುತಿಸಲಾಗಿದ್ದ ಜಾಗ ಸೂಕ್ತವಲ್ಲ. ಕೇದಿಗೆಹಳ್ಳಿ ಬಳಿ ಜಾಗ ಪರಿಶೀಲಿಸಲಾಗಿದೆ, ಸಾಧ್ಯವಾದರೆ ಹುಳಿಯಾರು ಭಾಗದಲ್ಲಾದರೂ ನಿರ್ಮಿಸುವ ಯೋಜನೆ ಇದೆ ಎಂದರು.

    ಗಾರ್ಮೆಂಟ್ಸ್‌ಗಳಿಗೆ ಹೋಗುವವರಿಗೆ ಅನುಕೂಲವಾಗಲೆಂದು ತಾಲೂಕಿನ ಹಂದನಕೆರೆ, ಹುಳಿಯಾರು, ಹಾಗಲವಾಡಿ, ಕೆ.ಬಿ.ಕ್ರಾಸ್, ತುರುವೇಕೆರೆ, ತುಮಕೂರು ಗಾರ್ಮೆಂಟ್ಸ್ ಕಾರ್ಖಾನೆಗಳಿಗೆ ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ವಾಡಲಾಗಿದೆ. ಸಾರ್ವಜನಿಕರು ಸದುಪಯೋಗ ಪಡೆಯಬೇಕು ಎಂದರು.

    ಈಗಿನ ಪರಿಸ್ಥಿತಿಯಲ್ಲಿ ಗ್ರಾರ್ಮೆಂಟ್ಸ್ ಸ್ಥಾಪಿಸುವ ಬಗ್ಗೆ ಯಾವುದೇ ಕಂಪನಿ ಮುಂದೆ ಬಂದಿಲ್ಲ. ಈ ಬಗ್ಗೆ ಉದ್ಯಮಿಗಳು, ಗಾರ್ಮೆಂಟ್ಸ್ ವಾಲೀಕರೊಂದಿಗೆ ಚರ್ಚೆ ವಾಡಿದ್ದು, ಕಟ್ಟಡ ನಿರ್ವಾಣ ಮಾಡಿ ಬಾಡಿಗೆಗೆ ನೀಡಿದರೆ ಕಾರ್ಖಾನೆಗಳನ್ನು ಪ್ರಾರಂಭಿಸುತ್ತೇವೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲೂ ಗ್ರಾರ್ಮೆಂಟ್ಸ್‌ಗಳನ್ನು ಪ್ರಾರಂಭಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು.

    ತಾಲೂಕು ಪಂಚಾಯಿತಿ ಸದಸ್ಯ ಕೇಶವಮೂರ್ತಿ, ತಾಲೂಕು ಪಂಚಾಯಿತಿ ವಾಜಿ ಅಧ್ಯಕ್ಷ ಎಚ್.ಆರ್.ಶಶಿಧರ್, ಪುರಸಭಾ ಸದಸ್ಯರಾದ ಶ್ಯಾಮ್, ನಾಗರಾಜು, ವಾಜಿ ಸದಸ್ಯರಾದ ಶಶಿಕಲಾ, ರೂಪಾ, ರಂಗಸ್ವಾಮಿ, ರೇಣುಕಾಮೂರ್ತಿ, ಕವಿತಾ ಮತ್ತಿತರರು ಇದ್ದರು.

    ಭವನ ನಿರ್ಮಿಸಲು ಹೊರಟಿಲ್ಲ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಬಾಬು ಜಗಜೀವನರಾಂ ಭವನ ನಿರ್ಮಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕಾಲೇಜಿನ ಆವರಣದಲ್ಲಿ ಜಾಗ ವ್ಯರ್ಥ ಮಾಡಿರುವುದರಿಂದ ಭವನ ನಿರ್ಮಿಸುವ ಯೋಜನೆಯಿತ್ತು. ಅಲ್ಲಿ ಭವನ ನಿರ್ಮಾಣ ಬೇಡವೆಂದರೆ ಬೇಡ. ಆದರೆ, ಕಾಲೇಜಿನ ಲಿತಾಂಶ ಹಾಗೂ ವಿವಿಧ ಕೋರ್ಸ್‌ಗಳನ್ನು ಮುಚ್ಚಿರುವ ಬಗ್ಗೆ ಕಾಲೇಜು ಅಭಿವೃದ್ಧಿ ಸಮಿತಿಯಲ್ಲಿ ನಾನು ಕೇಳಿದ್ದನ್ನು ಬಿಟ್ಟು ಭವನದ ಬಗ್ಗೆ ಮಾತನಾಡುತ್ತಾರೆ. ಹೀಗಾಗಿ ಕಾಲೇಜಿನ ಪ್ರಾಂಶುಪಾಲ, ಉಪನ್ಯಾಸಕರನ್ನು ವರ್ಗಾವಣೆ ವಾಡಲು ಸರ್ಕಾರಕ್ಕೆ ಶಿಫಾರಸು ವಾಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

    ಸಂತೆ ಸ್ಥಳಾಂತರದಿಂದ ಅನುಕೂಲ: ವಾರದ ಸಂತೆಯನ್ನು ಪಟ್ಟಣದ ಎಪಿಎಂಸಿಗೆ ಸ್ಥಳಾಂತರಿಸಿ ರುವುದು ಸವಾಧಾನ ತಂದಿದೆ. ಪ್ರತೀ ವಾರ 7080 ಮೊಬೈಲ್ ಕಳವು ಪ್ರಕರಣ ನಿಂತಿವೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ, ಯಾರಿಗೂ ಸಂತೆ ಸ್ಥಳಾಂತರದಿಂದ ಅನಾನೂಕೂಲವಾಗಿಲ್ಲ. ಆದರೆ ಇದನ್ನು ನ್ಯಾಯಾಲಯದ ಮೆಟ್ಟಿಲೇರಿರುವ ಕಾರಣ ಕುಡಿಯುವ ನೀರು, ಇನ್ನಿತರ ಸವಲತ್ತುಗಳನ್ನು ವಾಡಲು ಸಾಧ್ಯವಾಗುತ್ತಿಲ್ಲ, ಆದರೆ ಸಂತೆಯಿಂದ ಎಲ್ಲರಿಗೂ ಅನುಕೂಲವಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

    ಪಟ್ಟಣದಲ್ಲಿ 5ಲಕ್ಷ ಲೀಟರ್ ನೀರಿನ ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್ ನಿರ್ವಾಣ ಹಾಗೂ ನಿವೇಶನಗಳಿಗೆ ರಸ್ತೆ, ಚರಂಡಿಗಳ ನಿರ್ವಾಣ ಕಾಮಗಾರಿಗಳನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ.
    ಜೆ.ಸಿ.ಮಾಧುಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts