More

    ಏಸುವಿನ ಮೂರ್ತಿಯನ್ನ ನಿಲ್ಲಿಸುವುದು ಡಿಕೆಶಿಗೆ ಏಕೆ ಬೇಕಿತ್ತು: ಸಚಿವ ಜಗದೀಶ್ ಶೆಟ್ಟರ್ ಪ್ರಶ್ನೆ

    ಹುಬ್ಬಳ್ಳಿ: ಬಿಜೆಪಿಯ ಸಂಘಟನೆಯನ್ನ ಮತ್ತು ನಮ್ಮ ಸರ್ಕಾರವನ್ನ ಎದುರಿಸಲು ಕಾಂಗ್ರೆಸ್‌ಗೆ ಯಾವುದೇ ವಿಷಯಗಳಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
    ಪೌರತ್ವ ಕಾಯ್ದೆಯ ಬಗ್ಗೆ ಅಲ್ಪಸಂಖ್ಯಾತರ ನಡುವೆ ಅಪಪ್ರಚಾರ ಮಾಡಿ ದಾರಿ ತಪ್ಪಿಸುವ ಕೆಲಸವನ್ನ ಕಾಂಗ್ರೆಸ್‌ನವರು ಮಾಡ್ತಾ ಇದ್ದಾರೆ. ದೇಶದಲ್ಲಿ ಅಶಾಂತಿಯನ್ನ ಮೂಡಿಸುವ ಕೆಲಸವನ್ನ ಕಾಂಗ್ರೆಸ್‌ನವರು ಮಾಡ್ತಾ ಇದ್ದಾರೆ ಎಂದು ಶೆಟ್ಟರ್ ಆರೋಪಿಸಿದರು.

    ಕಾಂಗ್ರೆಸ್‌ನವರು ಕಾನೂನಿಗೆ ಬೆಲೆ ಕೊಡಬೇಕು. ಇವತ್ತು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಕಾಂಗ್ರೆಸ್‌ನವರು ರಾಜಕೀಯ ‌ಮಾಡ್ತಾ ಇದ್ದಾರೆ, ಏಸುವಿನ ಮೂರ್ತಿಯನ್ನ ನಿಲ್ಲಿಸುವುದು ಡಿಕೆಶಿಗೆ ಏಕೆ ಬೇಕಿತ್ತು ಎಂದು ಅವರು ಪ್ರಶ್ನಿಸಿದರು.

    ಡಿಕೆಶಿಯವರು ಏಸುವಿನ ಮೂರ್ತಿ ಪ್ರತಿಷ್ಠಾಪನೆ ಮಾಡಲು ಅವರು ಸ್ವಂತ ಭೂಮಿ ನೀಡಲಿ. ಅದು ಬಿಟ್ಟು ಸರ್ಕಾರದ ಭೂಮಿ‌ ಮಂಜೂರು ಮಾಡುವ ಪ್ರತಿಷ್ಠೆ ಡಿಕೆಶಿ ಗೆ ಏಕೆ ಬಂತು ನನಗೆ ಗೊತ್ತಿಲ್ಲ ಎಂದರು.

    ಡಿಕೆಶಿಯವರು ಅದನ್ನ ಪ್ರತಿಷ್ಠೆಯಾಗಿ ತೆಗೆದುಕೊಳ್ಳುವದನ್ನ ಬಿಟ್ಟು, ಸೌಹಾರ್ದಯುತ ವಾತಾವರಣ ಸೃಷ್ಟಿ ‌ಮಾಡುವುದು ಡಿಕೆಶಿ ಕೈಯಲ್ಲಿದೆ. ಸಮಾಜದಲ್ಲಿ ಅಸ್ತವ್ಯಸ್ತ ಮತ್ತು ಸಂಘರ್ಷ ಮಾಡಿಸುವ ಕೆಲಸವನ್ನ ಡಿಕೆಶಿ ಮಾಡ್ತಾ ಇದ್ದಾರೆ ಎಂದು ಟೀಕಿಸಿದರು.

    ಜಮೀರ್ ಅಹ್ಮದ್ ಅವರಿಗೆ ಈಗ ಮಾಡಲಿಕ್ಕೆ ಏನೂ ಕೆಲಸ ಇಲ್ಲಾ. ಯಡಿಯೂರಪ್ಪನವರು ಸಿಎಮ್ ಆದ್ರೆ ವಾಚ್ ಮನ್ ಕೆಲಸ ಮಾಡ್ತೆನೆ ಅಂದಿದ್ರೂ ಈಗ ಆ ಕೆಲಸ ಮೊದಲು ಮಾಡಲಿ. ನಂತ್ರ ಸೋಮಶೇಖರ್ ರೆಡ್ಡಿ ಅವರ ಮನೆ‌ ಮುಂದೆ ಪ್ರತಿಭಟನೆ ಮಾಡಲಿ ಎಂದು ಹೇಳಿದರು.

    ಇದೇ 18 ರಂದು ಪೌರತ್ವ ಕಾಯ್ದೆಯ ಜನ ಜಾಗೃತಿ ಸಭೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬರ್ತಾ ಇದ್ದಾರೆ. ಅವರ ಆಗಮನದ ಹಿನ್ನೆಲೆ ಇವತ್ತು ಪೂರ್ವಭಾವಿ ಸಭೆ ಕರೆಲಾಗಿದೆ. 18 ರಂದು ನಡೆಯುವ ಸಮಾವೇಶದಲ್ಲಿ ಒಂದು‌ ಲಕ್ಷಕ್ಕೂ ಹೆಚ್ಚು ಜನ ಸೇರುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts