More

    ನೂರು ಗ್ರಾಮ ನ್ಯಾಯಾಲಯಗಳ ಆರಂಭ:ಸಚಿವ ಎಚ್.ಕೆ.ಪಾಟೀಲ್

    ಕೊಪ್ಪಳ: ಜನರಿಗೆ ತ್ವರಿತಗತಿ ನ್ಯಾಯದಾನ ನೀಡಲು ಪೂರಕವಾಗಿ ಇದೇ ಆರ್ಥಿಕ ವರ್ಷದಲ್ಲಿ ರಾಜ್ಯದಲ್ಲಿ 100 ಗ್ರಾಮ ನ್ಯಾಯಾಲಯಗಳನ್ನು ಆರಂಭಿಸಲಾಗುವುದೆಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.

    ಹೈ ಕೋರ್ಟ್ ನ್ಯಾಯಾಧೀಶರೊಂದಿಗೆ ಈ ಬಗ್ಗೆ ಚರ್ಚಿಸಲಾಗಿದೆ. ರಾಜ್ಯದಲ್ಲಿ ಲಕ್ಷಾಂತರ ಪ್ರಕರಗಳು ಹಲವು ವರ್ಷಗಳಿಂದ ಬಾಕಿ ಇವೆ. ಇದಕ್ಕೆ ನಾವೆಲ್ಲ ಪರಿಹಾರ ಕಂಡುಕೊಳ್ಳಬೇಕಿದೆ.

    ಇಲ್ಲದಿದ್ದರೆ ಅಭಿವೃದ್ಧಿ ಮುಂದುವರೆಯುವುದಿಲ್ಲ. ಜನರಿಗೆ ಕಷ್ಟ ತಪ್ಪದು. ಇದೇ ಉದ್ದೇಶಕ್ಕೆ 2008ರಲ್ಲೇ ಗ್ರಾಮ ನ್ಯಾಯಾಲಯಗಳನ್ನು ಆರಂಭಿಸಬೇಕೆಂದು ಕಾನೂನು ಮಾಡಲಾಗಿದೆ. ಆದರೆ, ರಾಜ್ಯದಲ್ಲಿ ಅನುಷ್ಠಾನ ಮಾಡಿಲ್ಲ.

    ಕೇವಲ 2 ಮಾದರಿ ನ್ಯಾಯಾಲಯ ಆರಂಭಿಸಿದ್ದು ಬಿಟ್ಟರೆ ಪ್ರಗತಿ ಕಂಡಿಲ್ಲ. ಈ ಬಗ್ಗೆ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

    ಗ್ರಾಮೀಣ ವ್ಯಾಜ್ಯಗಳು ಬೇಗನೇ ಪರಿಹಾರ ಕಾಣಬೇಕಿದೆ. ಇದರಿಂದ ಸಮಾಜದಲ್ಲಿ ಶಾಂತಿ ನೆಲಸಲು ಅನುಕೂಲವಾಗಲಿದೆ. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದ್ದು, 100 ಗ್ರಾಮ ನ್ಯಾಯಾಲಯಗಳನ್ನು ಆರಂಭಿಸಲು ಕ್ರಮವಹಿಸಿದೆ.

    ಕಾನೂನು ಶಾಸ್ತ್ರ ಅಧ್ಯಯನ ಮಾಡುವ ವಕೀಲ ಸಮೂಹ, ಮಾಧ್ಯಮ ಈ ಬಗ್ಗೆ ಹೆಚ್ಚು ಬೆಳಕು ಚೆಲ್ಲಬೇಕು. ಕಾಯ್ದೆ ರೂಪಿಸಿದರೆ ಸಾಲದು, ಅವುಗಳನ್ನು ಅನುಷ್ಠಾನಕ್ಕೆ ತಂದಾಗ ಜನತೆಗೆ ಪ್ರಯೋಜನವಾಗಲಿದೆ.

    ಮಾನವ ಹಕ್ಕು ಉಲ್ಲಂಘನೆ ಕಾಯ್ದೆ ಜಾರಿಗೆ ಬಂದು ಎಷ್ಟೋ ವರ್ಷಗಳಾಯಿತು. ಆದರೆ, ಅದಕ್ಕೆ ಸಂಬಂಧಿಸಿದ ನ್ಯಾಯಾಲಯಗಳು ಸ್ಥಾಪನೆಯಾಗಲಿಲ್ಲ. ಹೀಗಾದರೆ ಹೇಗೆ ? ಈ ಬಗ್ಗೆ ವಕೀಲರು ಧ್ವನಿ ಎತ್ತಬೇಕು ಎಂದರು.

    ರಾಜ್ಯೋತ್ಸವ ರಸಪ್ರಶ್ನೆ - 25

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts