ಡಿ.ಕೆ.ಶಿವಕುಮಾರ್​ಗೆ ಈಗ ಜ್ಞಾನೋದಯ ಆಗಿದೆ : ಶೋಭಾ ಕರಂದ್ಲಾಜೆ

ಉಡುಪಿ: ವೋಟ್​ ಬ್ಯಾಂಕ್​ಗಾಗಿ ಕಾಂಗ್ರೆಸ್​ನವರು ವೀರಶೈವ ಲಿಂಗಾಯತ ಧರ್ಮ ಒಡೆಯುವ ಕೆಲಸ ಮಾಡಿದರು. ಆ ಸತ್ಯವೀಗ ಸಚಿವ ಡಿ.ಕೆ.ಶಿವಕುಮಾರ್​ ಬಾಯಿಯಿಂದ ಹೊರಬಿದ್ದಿದೆ. ಡಿಕೆಶಿಗೆ ಈಗಲಾದರೂ ಜ್ಞಾನೋದಯ ಆಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
ಬೈಂದೂರಿನಲ್ಲಿ ಮಾತನಾಡಿ, ಈ 70 ವರ್ಷದ ಅವಧಿಯಲ್ಲಿ ಕಾಂಗ್ರೆಸ್​ ಜಾತಿ ಒಡೆಯುವ ಕೆಲಸ ಮಾಡಿದೆ. ಧರ್ಮ ಒಡೆದು ಅಧಿಕಾರ ಉಳಿಸಿಕೊಳ್ಳಬೇಕು ಎಂಬ ದುರಾಸೆಯಲ್ಲಿದ್ದಾರೆ. ರಾಜ್ಯದ ಜನಕ್ಕೆ ಇದು ಅರ್ಥ ಆಗಿದೆ. ಹಾಗಾಗಿಯೇ ಕಾಂಗ್ರೆಸ್​ನಲ್ಲಿದ್ದ 120 ಸ್ಥಾನವನ್ನು 78ಕ್ಕೆ ಇಳಿಸಿದ್ದಾರೆ ಎಂದರು.

ಕಾಂಗ್ರೆಸ್​ನಲ್ಲಿ ಎಲ್ಲವೂ ಸರಿಯಿಲ್ಲ. ಕಿತ್ತಾಟ ನಡೆಯುತ್ತಿದೆ. ಮಂತ್ರಿ ಆದವರು, ಆಗದವ ಮಧ್ಯ ಅಸಮಾಧಾನ ಇದೆ. ಕಾಂಗ್ರೆಸ್​ನದ್ದು ಅವಕಾಶವಾದಿ ರಾಜಕಾರಣ. ಮಂದಿನ ದಿನದಲ್ಲಿ ಕಾಂಗ್ರೆಸ್​ನ್ನು ಜನರೇ ಕಸದ ಬುಟ್ಟಿಗೆ ಎಸೆಯುತ್ತಾರೆ ಎಂದು ಹೇಳಿದರು.

ಟಿಪ್ಪು ಜಯಂತಿ ಆಚರಣೆ ಬೇಡ
ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಬಾರದು ಎಂಬುದಕ್ಕೆ ಇವತ್ತಿಗೂ ಬಿಜೆಪಿ ಬದ್ಧವಾಗಿದೆ. ಆಚರಣೆ ಮಾಡಿದರೆ ನಾವು ವಿರೋಧಿಸುತ್ತೇವೆ. ಟಿಪ್ಪುಜಯಂತಿ ಮಾಡಿದರೆ ಯಾರೂ ಉದ್ಧಾರವಾಗುವುದಿಲ್ಲ. ಮತಾಂಧ ಟಿಪ್ಪುವಿನ ಜಯಂತಿ ಆಚರಣೆ ಮಾಡಬಾರದು ಎಂದು ಹೇಳಿದರು.

ಮೈಸೂರಲ್ಲಿ ಕಿತ್ತಾಟ
ಮೈಸೂರಿನಲ್ಲಿ ರಾಜಕೀಯ ಕಿತ್ತಾಟ ನಡೆಯುತ್ತಿದೆ. ಸಾ.ರ.ಮಹೇಶ್​, ಜಿ.ಟಿ.ದೇವೇಗೌಡ ಮಧ್ಯ ಏನೂ ಸರಿಯಲ್ಲ. ಕಾಂಗ್ರೆಸ್​ನ ಯಾವುದೇ ಶಾಸಕರು ದಸಾರದಲ್ಲಿ ಭಾಗವಹಿಸಿಲ್ಲ. ಒಬ್ಬನೇ ಒಬ್ಬ ಕಾರ್ಯಕರ್ತನೂ ದಸರಾ ಕಮಿಟಿಗೆ ಹೋಗಿಲ್ಲ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ದಸರಾ ಕಮಿಟಿ ರಚನೆ ಆಗಿಲ್ಲ ಎಂದರು.

ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ
ತಾಯಿ ಚಾಮುಂಡೇಶ್ವರಿ ದಸಾರದಲ್ಲಿ ಮೊದಲಬಾರಿಗೆ ಹೆಣ್ಣು ಮಕ್ಕಳ ಮೇಲೆ ಕೈ ಮಾಡಲಾಗಿದೆ. ಇದಕ್ಕೆ ಸರ್ಕಾರವೇ ಹೊಣೆ ಹೊರಬೇಕು ಎಂದು ಹೇಳಿದರು.