ಸಚಿವ ಡಿಕೆಶಿ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ಎಫ್​ಐಆರ್​ !

ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್​ ವಿರುದ್ಧ ಎಫ್ಐಆರ್​ ದಾಖಲಾಗಿದೆ. ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿ ಮುತ್ತುರಾಜ್​ ನೀಡಿದ ದೂರಿನ ಅನ್ವಯ ಎಫ್​ಐಆರ್​ ದಾಖಲಿಸಲಾಗಿದೆ.

ಅನಧಿಕೃತ ಜಾಹೀರಾತು ಫಲಕಗಳನ್ನು ಹೈಕೋರ್ಟ್​ ನಿಷೇಧಿಸಿದ್ದರೂ ಸಚಿವ ಡಿ.ಕೆ.ಶಿವಕುಮಾರ್​ ಮಾಲೀಕತ್ವದ ಜಮೀನುಗಳಲ್ಲಿ ಜಾಹೀರಾತುಗಳು ನೇತಾಡುತ್ತಿದ್ದವು. ಮೈಸೂರು ರಸ್ತೆಯ ಪಂತರಪಾಳ್ಯದಲ್ಲಿದ್ದ ಡಿಕೆಶಿ ಮಾಲೀಕತ್ವದ ಜಮೀನಿನಲ್ಲಿ ಇದ್ದ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸುವಂತೆ ಬಿಬಿಎಂಪಿ ಡಿಕೆಶಿಗೆ ನೋಟಿಸ್​ ನೀಡಿತ್ತು. ಆದರೆ ಆ ನೋಟಿಸ್​ಗೆ ಸಚಿವರು ಕ್ಯಾರೆ ಎನ್ನಲಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿ ಮುತ್ತುರಾಜ್​ ಡಿಕೆಶಿ ವಿರುದ್ಧ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *