ಸಮಾಜಮುಖು ಕೆಲಸದಿಂದ ಮನಸ್ಸು ಹಗುರ

blank

ಶಿಕಾರಿಪುರ: ಶರಣರೆಂದರೆ ಶುದ್ಧ ಮನಸಿನವರು. ನುಡಿದಂತೆ ನಡೆದು ತೋರಿಸಿದವರು. ಹಲವಾರು ಶರಣರು ಜನಿಸಿದ ಮತ್ತು ನಡೆದಾಡಿದ ನಾಡು ನಮ್ಮದು ಎಂದು ಶಿಕಾರಿಪುರ ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ ಹೇಳಿದರು.
ಮತ್ತಿಕೋಟೆಯ ಶ್ರೀ ಸಿದ್ದಾರೂಢ ಮಠದಲ್ಲಿ ಸೋಮವಾರ ವಿರಕ್ತಮಠ ಆಯೋಜಿಸಿದ್ದ ಕಾರ್ತಿಕದಲ್ಲಿ ಸುಜ್ಞಾನದ ಬೆಳಕು ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, 12ನೇ ಶತಮಾನ ಸಾಮಾಜಿಕ ಕ್ರಾಂತಿ, ಸಮಾನತೆ ಸಾರಿದ ಶತಮಾನ. ಬಸವಾದಿ ಶರಣರು ನಾಡಿನಲ್ಲಿ ಜನಿಸಿ ಹೊಸ ಇತಿಹಾಸವನ್ನೇ ನಿರ್ಮಿಸಿದರು ಎಂದರು.
ಕಾರ್ತಿಕ ಮಾಸದಲ್ಲಿ ನಾವು ಸದ್ವಿಚಾರಗಳನ್ನು ಕೇಳಬೇಕು. ಸಾಧು-ಸಂತರ, ಸತ್ಪುರುಷರ ಜೀವನ ಚರಿತ್ರೆಗಳನ್ನು ೀದಬೇಕು. ಸಹನೆ, ಶಾಂತಿ, ಸಂಯಮವನ್ನು ಸಮಾಜಕ್ಕೆ ಪಸರಿಸುವ ಕೆಲಸ ಮಾಡಬೇಕು. ಧರ್ಮ ಕಾರ್ಯಗಳನ್ನು ಮಾಡಿದಾಗ ಮನಸು ರಾಗದ್ವೇಷಗಳಿಂದ ಮುಕ್ತವಾಗುತ್ತದೆ. ಹಾಗಾಗಿ ಸಮಾಜಮುಖಿ ಬದುಕು ನಮ್ಮದಾಗಬೇಕು ಎಂದು ತಿಳಿಸಿದರು.
ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ ಎಚ್.ಟಿ.ಬಳಿಗಾರ್ ಮಾತನಾಡಿ, ಮೇಲು-ಕೀಳು, ಬಡವ-ಶ್ರೀಮಂತ ಎಂಬ ಭೇದವನ್ನು ತೊಡೆದುಹಾಕಿ ಸಮಾನತೆ ತರಲು ಪ್ರಯತ್ನಿಸಿದವರು ಶರಣ-ಶರಣೆಯರು. ಸಮಾನತೆಯನ್ನೇ ಉಸಿರಾಡಿದವರು ಶರಣರು. ಮಠ ಮಂದಿರಗಳು ನಮ್ಮ ಶ್ರದ್ಧಾ ಕೇಂದ್ರಗಳು. ಧರ್ಮೋತ್ಥಾನ ಕಾರ್ಯದಲ್ಲಿ ಮಠ ಮಂದಿರಗಳು, ಗುರುಗಳ ಪಾತ್ರ ಬಹಳ ದೊಡ್ಡದು. ಶಿಕಾರಿಪುರದ ವಿರಕತಮಠದ ಶ್ರೀ ಚನ್ನಬಸವ ಸ್ವಾಮೀಜಿಗಳು ಶರಣರ ಸಂದೇಶಗಳನ್ನು ಸಾರುತ್ತ ಬಂದಿದ್ದಾರೆ ಎಂದರು.
ಶರಣ ಶರಣೆಯರ ವಚನಗಳನ್ನು ಸಂಗ್ರಹ ಮಾಡಬೇಕು. ಪ್ರತಿ ಮನೆ ಮತ್ತು ಮನದಲ್ಲಿ ವಚನಗಳ ಸಂದೇಶ ಜಾಗೃತಿ ಮೂಡಿಸಬೇಕು. ಮತ್ತಿಕೋಟೆಯಂತೆಯೇ ಇತರ ಹಳ್ಳಿಗಳಲ್ಲೂ ಧರ್ಮದ ಬಗ್ಗೆ ಅರಿವು ಮತ್ತು ಅಭಿಮಾನ ಮೂಡಿಸುವ ಕಾರ್ಯಗಳು ಆಗಬೇಕು ಎಂದು ತಿಳಿಸಿದರು.
ಮತ್ತಿಕೋಟೆ ಸಿದ್ದಾರೂಢ ಮಠದ ಶ್ರೀಪಾದ ಅವಧೂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಸುಧೀರ್ ಮಾರವಳ್ಳಿ, ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಪ್ಯಾಟಿ ಈರಣ್ಣ, ಚಂದ್ರಶೇಖರ ಸುರಹೊನ್ನೆ, ನಾಗರಾಜ್, ನಿಜಲಿಂಗಪ್ಪ ಗುಬ್ಬೇರ್, ಮಂಜುನಾಥ್ ಬೇಗೂರು, ಸುಭಾಸ್‌ಚಂದ್ರ ಸ್ಥಾನಿಕ್, ಶಿಕ್ಷಕ ಶಿವಾನಂದಪ್ಪ, ಸೋಮಶೇಖರ ಗಟ್ಟಿ ಇತರರಿದ್ದರು.

Share This Article

Spirituality: ಇರುವೆಗಳಿಗೆ ಆಹಾರ ನೀಡಿದರೆ ಶನಿದೇವನ ಪ್ರಭಾವ ಇರುವುದಿಲ್ಲವೇ?

Spirituality: ನಮ್ಮಲ್ಲಿರುವ ವಸ್ತು ಅಥವಾ ಯಾವುದೇ ಪದಾರ್ಥವನ್ನು ಇಲ್ಲದವರಿಗೆ ದಾನ ಮಾಡಿದರೆ ದೇವರ ಅನುಗ್ರಹ ಸದಾ…

2025ರಲ್ಲಿ ಸಾಲದ ಸುಳಿಗೆ ಸಿಲುಕಲಿದ್ದಾರಂತೆ ಈ 3 ರಾಶಿಯವರು!? ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರ | Money

Money : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ ನಂಬದವರು…

30 ನೇ ವಯಸ್ಸಿನಲ್ಲಿಯೇ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತಿದೆಯೇ? White Hair ಆಗಿದ್ರೆ ಇಲ್ಲಿದೆ ಉಪಯುಕ್ತ ಮಾಹಿತಿ

White Hair : ಇಂದಿನ ಕಾಲದಲ್ಲಿ ಜನರ ಕೂದಲು ಚಿಕ್ಕ ವಯಸ್ಸಿನಲ್ಲೇ ಬೆಳ್ಳಗಾಗುತ್ತಿದೆ. ಇನ್ನು ಕೆಲವರು…