More

    ರೈತರು, ಒಕ್ಕೂಟದ ಅಭಿವೃದ್ಧಿಗೆ ಹಾಲು ದರ ಏರಿಕೆ ಲಾಭ

    ಬೆಂಗಳೂರು: ಪ್ರತಿ ಲೀಟರ್ ಹಾಲಿನ ದರವನ್ನು ಮೂರು ರೂ. ಹೆಚ್ಚಿಸಿದರೆ ಆ ಸಂಪೂರ್ಣ ಮೊತ್ತವನ್ನು ರೈತರು, ಮಾರಾಟಗಾರರು, ಒಕ್ಕೂಟ ಹಾಗೂ ಉತ್ಪಾದಕರ ಸಂಘಗಳ ಅಭ್ಯುದಯಕ್ಕೆ ಬಳಸುವುದಾಗಿ ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

    ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿ ಮೂರು ರೂ. ಹೆಚ್ಚಳಕ್ಕೆ ಒಪ್ಪಿಗೆ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ದರ ಹೆಚ್ಚಳ ಮಾಡಿಲ್ಲ. ಖಾಸಗಿ ಹಾಲಿನ ದರ ನಂದಿನಿ ಹಾಲಿನ ದರಕ್ಕಿಂತ ಪ್ರತಿ ಲೀಟರ್​ಗೆ ಕನಿಷ್ಠ 5 ರೂ. ಜಾಸ್ತಿ ಇದೆ ಎಂಬ ಅಂಶವನ್ನು ಮನವರಿಕೆ ಮಾಡಿಕೊಡಲಾಗಿದೆ.

    ಬಳಕೆ ಹೇಗೆ: ಹೆಚ್ಚಳ ಮಾಡುವ 3 ರೂ.ಗಳಲ್ಲಿ 1 ರೂ. ರೈತರಿಗೆ ಪ್ರೋತ್ಸಾಹ ಧನವಾಗಿ ನೀಡಲಾಗುತ್ತದೆ. ಈಗಾಗಲೇ ಸರ್ಕಾರ ನೀಡುತ್ತಿರುವ 5 ರೂ. ಜತೆಗೆ ಈ ಮೊತ್ತ ಸೇರಿ 6 ರೂ. ರೈತರಿಗೆ ಸಿಗಲಿದೆ. ಇಂದಿನ ಸಂಕಷ್ಟದ ದಿನಗಳಲ್ಲಿ ರೈತರಿಗೆ ಸಿಗುವುದು ಹಾಲಿನ ಪ್ರೋತ್ಸಾಹಧನವೇ ಆಗಿದೆ ಎಂಬುದನ್ನು ತಿಳಿಸಲಾಗಿದೆ.

    ರೈತರು, ಒಕ್ಕೂಟದ ಅಭಿವೃದ್ಧಿಗೆ ಹಾಲು ದರ ಏರಿಕೆ ಲಾಭಮಾರಾಟಗಾರರಿಗೆ ಕಮೀಷನ್ ಹೆಚ್ಚಳ ಮಾಡದೇ ಬಹಳ ವರ್ಷಗಳಾಗಿದೆ. ಅವರಿಂದಲೂ ಬೇಡಿಕೆ ಇದೆ. ಆದ್ದರಿಂದ ಪ್ರತಿ ಲೀಟರ್​ಗೆ 50 ಪೈಸೆ ಹೆಚ್ಚಳ ಮಾಡಲಾಗುತ್ತದೆ. 50 ಪೈಸೆಯನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಅವುಗಳ ಅಭಿವೃದ್ಧಿಗಾಗಿ ಪ್ರೋತ್ಸಾಹಧನವಾಗಿ ನೀಡಲಾಗುತ್ತದೆ. 50 ಪೈಸೆಯನ್ನು ಜಿಲ್ಲಾ ಹಾಲು ಒಕ್ಕೂಟಗಳಿಗೆ ಅಭಿವೃದ್ಧಿಯ ಸಲುವಾಗಿ ನೀಡಲಾಗುತ್ತದೆ. ಒಕ್ಕೂಟಗಳು ಈ ಹಣವನ್ನು ಠೇವಣಿ ರೂಪದಲ್ಲಿಟ್ಟು ಕೆಎಂಎಫ್ ಒಪ್ಪಿಗೆ ಪಡೆದು ವೆಚ್ಚ ಮಾಡಬೇಕು. ದುರುಪಯೋಗಕ್ಕೆ ಅವಕಾಶ ಇರುವುದಿಲ್ಲ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

    ಉಳಿಯುವ 50 ಪೈಸೆಯನ್ನು ಕೆಎಂಎಫ್​ನಲ್ಲಿ ಠೇವಣಿ ಇಡಲಾಗುತ್ತದೆ. ಈ ಮೊತ್ತ ವರ್ಷಕ್ಕೆ ಸುಮಾರು 100 ಕೋಟಿ ರೂ.ಗಳಾಗುತ್ತದೆ. ಹಾಲು ಉತ್ಪಾದಕರ ಸಹಕಾರ ಸಂಘದ ರೈತರಿಗೆ ಸೇರಿದ ಹಾಲು ಕೊಡುವ ಹಸು ಅಥವಾ ಎಮ್ಮೆಗಳು ಮೃತವಾದರೆ ಕೆಎಂಎಫ್​ನಿಂದ ನೇರವಾಗಿ 50 ರಿಂದ 60 ಸಾವಿರ ರೂ.ಗಳ ತನಕ ಪರಿಹಾರ ನೀಡಲು ಬಳಸಲಾಗುತ್ತದೆ. ವರ್ಷಕ್ಕೆ 20 ರಿಂದ 25 ಸಾವಿರ ಹಸು ಮತ್ತು ಎಮ್ಮೆಗಳು ಸಾವನ್ನಪು್ಪತ್ತವೆ ಎಂಬ ಮಾಹಿತಿ ಇದೆ. ರೈತರಿಗೆ ಪಶು ವಿಮೆ ರೂಪದಲ್ಲಿ ನೆರವಾದರೆ ಸರ್ಕಾರಕ್ಕೂ ಒಳ್ಳೆಯ ಹೆಸರು ಬರುತ್ತದೆ. ರೈತ ಪರ ಸರ್ಕಾರವೆಂಬ ಹೆಗ್ಗಳಿಕೆಯೂ ಸಿಗುತ್ತದೆ ಎಂದು ಮನವರಿಕೆ ಮಾಡಿಕೊಡಲಾಗಿದೆ.

    ಹಾಲಿನ ಉತ್ಪಾದನೆ ಎಷ್ಟು?

    ರಾಜ್ಯದಲ್ಲಿ ಪ್ರತಿ ನಿತ್ಯ 70 ಲಕ್ಷ ಲೀಟರ್ ಹಾಲು ಉತ್ಪಾ ದನೆಯಾಗುತ್ತಿದೆ. 40 ಲಕ್ಷ ಲೀಟರ್ ಮಾರಾಟವಾದರೆ, ಉಳಿದ 30 ಲಕ್ಷ ಲೀಟರ್ ಪೌಡರ್ ಹಾಗೂ ಇನ್ನಿತರ ಉತ್ಪನ್ನಗಳ ತಯಾರಿಗೆ ಬಳಸಲಾಗುತ್ತದೆ.

    ರೈತರು, ಒಕ್ಕೂಟದ ಅಭಿವೃದ್ಧಿಗೆ ಹಾಲು ದರ ಏರಿಕೆ ಲಾಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts