ವಿಜಯವಾಣಿ ಸುದ್ದಿಜಾಲ ಕಲಬುರಗಿ
ಕಲಬುರಗಿ -ಬೀದರ ಹಾಗೂ ಯಾದಗಿರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದ
ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಗಳ ಆಯ್ಕೆಯ ಚುನಾವಣೆಯಲ್ಲಿ ಮೂವರು ನಿರ್ದೇಶಕರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿಗಳು ಆಗಿರುವ ಸಹಾಯಕ ಆಯುಕ್ತರಾದ ಮಮತಾಕುಮಾರಿ ತಿಳಿಸಿದ್ದಾರೆ.
ಹುಮನಾಬಾದ ತಾಲೂಕಿನ ಮುರಾಂಪುರದ ರೇವಣಸಿದ್ದಪ್ಪ ವೀರಣ್ಣ ಪಾಟೀಲ್, ಬಸವ ಕಲ್ಯಾಣ ತಾಲೂಕಿನ ಪ್ರತಾಪುರದ ಬಂಡುರಾವ ಕಿಶನರಾವ್ ಕುಲಕರ್ಣಿ, ಭಾಲ್ಕಿ ತಾಲೂಕಿನ ಹುಣಜಿ (ಕೆ) ಗ್ರಾಮದ ನಾಗರಾಜ ಅಮೃತರಾವ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದ ೨೩ ರಂದು ಈ ಸ್ಥಾನಗಳಿಗೆ ಒಬ್ಬರು ಮಾತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರು.
ರೇವಣಸಿದ್ದಪ್ಪ ಮೂರನೇ ಸಲ ನಿರ್ದೇಶಕರಾಗಿ ಹ್ಯಾಟ್ರಿಕ್ ಬಾರಿಸಿದ್ದಾರೆ. ಒಂದು ಅವಧಿಗೆ ಅಧ್ಯಕ್ಷರಾಗಿದ್ದರು. ಉಳಿದಿಬ್ಬರು ಮೊದಲ ಸಲ ಆಯ್ಕೆಯಾಗಿದ್ದಾರೆ. ಉಳಿದಿಬ್ಬರು ಮೊದಲ ಸಲ ಆಯ್ಕೆಯಾಗಿದ್ದಾರೆ.
ಸಾಮಾನ್ಯ ಚುನಾವಣೆಯಲ್ಲಿ ಕಲಬುರಗಿ ಉಪ ವಿಭಾಗದಲ್ಲಿ -೧ ನಿರ್ದೇಶಕರ ಸ್ಥಾನ, ಸೇಡಂ ಉಪ ವಿಭಾಗದಲ್ಲಿ-೨ ನಿರ್ದೇಶಕರ ಸ್ಥಾನ, ಬೀದರ ಉಪ ವಿಭಾಗದಲ್ಲಿ -೩ ನಿರ್ದೇಶಕರ ಸ್ಥಾನ, ಬಸವಕಲ್ಯಾಣ ಉಪ ವಿಭಾಗದಲ್ಲಿ-೩ ನಿರ್ದೇಶಕರ ಸ್ಥಾನ ಮತ್ತು ಯಾದಗಿರ ಜಿ¯್ಲೆಯ ಸುರಪುರ, ಶಹಾಪುರ ಹಾಗೂ ಯಾದಗಿರ ತಾಲೂಕ್ಲಿ ತಲಾ ಒಂದರAತೆ ನಿದೇಶಕರುಗಳ ಸ್ಥಾನಕ್ಕೆ ಜಿ¯್ಲÁ ಚುನಾವಣಾಧಿಕಾರಿಗಳ ಆದೇಶದಂತೆ ಉಳಿದ ಸ್ಥಾನಗಳಿಗೆ ಸೆ.೨೯ ರಂದು ಮತದಾನ ಜರುಗಲಿದೆ.
===