ಪಾಕಿಸ್ತಾನದಲ್ಲಿ ಪೆಟ್ರೋಲ್​, ಡೀಸೆಲ್​ಗಿಂತ ದುಬಾರಿಯಾದ ಹಾಲು

ಕರಾಚಿ: ಸಾಮಾನ್ಯವಾಗಿ ಒಂದು ಲೀ. ಹಾಲು 35 ರಿಂದ 40 ರೂ. ಗೆ ದೊರೆಯುತ್ತದೆ. ಆದರೆ ಪಾಕಿಸ್ತಾನದಲ್ಲಿ ಒಂದು ಲೀ. ಹಾಲಿನ ದರ ಪೆಟ್ರೋಲ್​ ಮತ್ತು ಡೀಸೆಲ್​ಗಿಂತಲೂ ಹೆಚ್ಚಾಗಿದೆ. ಒಂದು ಲೀ. ಹಾಲಿನ ಬೆಲೆ 140 ರೂ. (ಪಾಕಿಸ್ತಾನಿ ರೂಪಾಯಿ)ಗೆ ತಲುಪಿದೆ.

ಮೊಹರಂ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕರಾಚಿ ಮತ್ತು ಸಿಂಧ್​ ಪ್ರಾಂತ್ಯದಲ್ಲಿ ಹಾಲಿನ ಬೆಲೆ 140 ರೂ.ಗೆ ತಲುಪಿತ್ತು. ಆಶ್ಚರ್ಯವೆಂದರೆ ಇಲ್ಲಿ ಒಂದು ಲೀ. ಪೆಟ್ರೋಲ್​ 113 ರೂ.ಗೆ ಮತ್ತು ಒಂದು ಲೀ. ಡೀಸೆಲ್​ 91 ರೂ.ಗೆ ಮಾರಾಟವಾಗುತ್ತಿದೆ.

ಮೊಹರಂ ಹಿನ್ನೆಲೆಯಲ್ಲಿ ಮೆರವಣಿಗೆ ಸಾಗುವವರಿಗೆ ಹಾಲು, ಜ್ಯೂಸ್​ ಮತ್ತು ತಣ್ಣನೆಯ ನೀರನ್ನು ಒದಗಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹಾಲಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಬೆಲೆ 120 ರಿಂದ 140 ರೂ.ವರೆಗೆ ತಲುಪಿದೆ. ಇದೇ ಮೊದಲ ಬಾರಿಗೆ ಹಾಲಿನ ಬೆಲೆ ಇಷ್ಟು ದುಬಾರಿಯಾಗಿದೆ. ಹಾಲಿನ ಬೆಲೆ ಹೆಚ್ಚಾಯಿತು ಎಂದು ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ಮುರಿಯಲು ಸಾಧ್ಯವಿಲ್ಲ. ಎಷ್ಟು ಸಾಧ್ಯವೋ ಅಷ್ಟು ಹಾಲನ್ನು ಮೆರವಣಿಗೆಯಲ್ಲಿ ಸಾಗುವವರಿಗೆ ವಿತರಿಸುತ್ತೇವೆ ಎಂದು ಕರಾಚಿಯ ನಿವಾಸಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *