ಉಗ್ರರೊಂದಿಗಿನ ಹೋರಾಟದಲ್ಲಿ ಬೆಳಗಾವಿ ಯೋಧ ಹುತಾತ್ಮ

ಬೆಳಗಾವಿ: ಉಗ್ರರ ಜತೆಗಿನ ಹೋರಾಟದಲ್ಲಿ ಬೆಳಗಾವಿ ಯೋಧ ಭೋಜರಾಜ ಜಾಧವ್ (28) ಮೃತಪಟ್ಟಿದ್ದಾರೆ.

ಮೂಲತಃ ಬೂದಿಹಾಳ ಗ್ರಾಮದವರಾಗಿರುವ ಭೋಜರಾಜ್​ ಜಮ್ಮುಕಾಶ್ಮೀರದ ಅನಂತನಾಗ್​ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೋಮವಾರ ತಡರಾತ್ರಿ ಉಗ್ರರೊಂದಿಗೆ ನಡೆದ ಹೋರಾಟದಲ್ಲಿ ವೀರಮರಣವನ್ನಪ್ಪಿದ್ದಾರೆ. ಬುಧವಾರ (ನಾಳೆ) ಮಧ್ಯಾಹ್ನದ ಹೊತ್ತಿಗೆ ಅವರ ಸ್ವಗ್ರಾಮ ಬೂದಿಹಾಳಕ್ಕೆ ಪಾರ್ಥಿವ ಶರೀರವನ್ನು ತರಲಾಗುವುದು ಎಂದು ಮಾಹಿತಿ ಲಭ್ಯವಾಗಿದೆ.

ಕಳೆದ ಒಂದೂವರೆ ವರ್ಷಗಳ ಹಿಂದೆಯಷ್ಟೇ ಭೋಜರಾಜ್​ ಜಾಧವ್​ ಸೇನೆಗೆ ಸೇರಿದ್ದರು. ಅವರ ಸಾವಿನಿಂದ ಗ್ರಾಮದಲ್ಲಿ ನೀರವ ಮೌನ ಮಡುಗಟ್ಟಿದೆ.