ಕಿಕಿ ಚಾಲೆಂಜ್​ ಸ್ವೀಕರಿಸಿ ರಾತ್ರೋರಾತ್ರಿ ಫೇಮಸ್​​ ಆದ ಆಂಟಿ!

<< ಎಚ್ಚರಿಕೆ ನೀಡಿದ ಪೊಲೀಸರು >>

ವಡೋದರಾ: ಚಲಿಸುತ್ತಿರುವ ಕಾರಿನಿಂದ ಇಳಿದು, ‘ಕಿಕಿ ಡು ಯು ಲವ್ ಮಿ’ ಹಾಡಿನ ಸಾಹಿತ್ಯಕ್ಕೆ ಹೆಜ್ಜೆ ಹಾಕುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಯುವಜನತೆ/ಚಾಲಕರು ಈ ಚಾಲೆಂಜ್ ಸ್ವೀಕರಿಸುತ್ತಿದ್ದಾರೆ. ಆದರೆ ಗುಜರಾತ್​ನ ಮಧ್ಯಮಯಸ್ಸಿನ ಮಹಿಳೆಯೊಬ್ಬರು ಕಿಕಿ ಡ್ಯಾನ್ಸ್​ ಚಾಲೆಂಜ್​ ಸ್ವೀಕರಿಸಿ ರಾತ್ರೋರಾತ್ರಿ ಪ್ರಖ್ಯಾತರಾಗಿದ್ದಾರೆ.

ಗುಜರಾತ್​ನ ವಡೋದರಾದ ರಿಜ್ವಾನಾ ಮಿರ್​ ಎಂಬ ಮಹಿಳೆ ಕಿಕಿ ಡ್ಯಾನ್ಸ್​ ಮಾಡಿ ವಿಡಿಯೋವನ್ನು ಹರಿಬಿಟ್ಟಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್​ ಆಗಿತ್ತು. ವಿಡಿಯೋ ಅಪ್​ಲೋಡ್​ ಮಾಡಿದ ಒಂದೇ ವಾರದಲ್ಲಿ ಇವರು ಸಾಕಷ್ಟು ಫೇಮಸ್​ ಆಗಿದ್ದರು. ಆದರೆ ಈಗ ಇದೇ ಇವರಿಗೆ ಮುಳ್ಳಾಗಿದ್ದು, ಗುಜರಾತ್​ ಪೊಲೀಸರು ಇವರೂ ಸೇರಿದಂತೆ ಕಿಕಿ ಚಾಲೆಂಜ್​ ಸ್ವೀಕರಿಸುವವರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಅಪಾಯಕಾರಿ ಕಿಕಿ ಚಾಲೆಂಜ್​ ಸ್ವೀಕರಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಪೊಲೀಸರು ಯುವಜನತೆಗೆ ಎಚ್ಚರಿಕೆ ನೀಡಿದ್ದು, ಕಿಕಿ ಚಾಲೆಂಜ್​ ಸ್ವೀಕರಿಸದಂತೆ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್​)