ವಿಮಾನದಲ್ಲಿ ಬೆತ್ತಲಾಗಿ ಓಡಾಡಿದ ಪ್ರಯಾಣಿಕ ಏರ್​ಲೈನ್​ ಸಿಬ್ಬಂದಿ ವಶಕ್ಕೆ

ಲಖನೌ (ಉತ್ತರ ಪ್ರದೇಶ): ಏರ್​ ಇಂಡಿಯಾ ಎಕ್ಸ್​ಪ್ರೆಸ್​ ವಿಮಾನದಲ್ಲಿ ಶನಿವಾರ ದುಬೈನಿಂದ ಲಖನೌಗೆ ತೆರಳುತ್ತಿದ್ದ ಪ್ರಯಾಣಿಕರು ತಮ್ಮ ಸಹ ಪ್ರಯಾಣಿಕನ ದುರ್ವರ್ತನೆಯಿಂದ ಆತಂಕಗೊಂಡಿದ್ದಾರೆ.

ವಿಮಾನಯಾನದ ವೇಳೆ ಇದ್ದಕ್ಕಿದ್ದ ಹಾಗೆ ಬಟ್ಟೆ ಬಿಚ್ಚಿ ಬೆತ್ತಲಾಗಿ ವಿಮಾನದ ತುಂಬಾ ಓಡಾಡಿದ್ದನ್ನು ಕಂಡ ಪ್ರಯಾಣಿಕರು ಒಂದು ಕ್ಷಣ ದಂಗಾದರು. ತಕ್ಷಣ ಸಿಬ್ಬಂದಿ ಆತನಿಗೆ ಕಂಬಳಿ ಹೊದಿಸಿದ್ದಾರೆ.

150 ಮಂದಿ ಪ್ರಯಾಣಿಸುತ್ತಿದ್ದ IX-194 ವಿಮಾನದಲ್ಲಿ ಈ ಘಟನೆ ನಡೆದಿದ್ದು, ಲಖನೌದಲ್ಲಿ ವಿಮಾನ ಭೂಸ್ಪರ್ಶಗೊಳ್ಳುತ್ತಿದ್ದಂತೆ ದುರ್ವರ್ತನೆ ತೋರಿದ್ದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ವ್ಯಕ್ತಿಯ ವರ್ತನೆಗೆ ಕಾರಣ ಏನೆಂಬುದು ಇನ್ನೂ ತಿಳಿದಿಲ್ಲ.

ವಿಮಾನದ ಕ್ಯಾಪ್ಟನ್​ ನಿರ್ದೇಶನದ ಮೇರೆಗೆ ಪ್ರಯಾಣಿಕನನ್ನು ಏರ್​ಲೈನ್​ ಭದ್ರತಾ ಸಿಬ್ಬಂದಿ ವಶಕ್ಕೆ ನೀಡಲಾಗಿದೆ. ಅವರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಏರ್​ ಇಂಡಿಯಾ ಎಕ್ಸ್​ಪ್ರೆಸ್​ ವಕ್ತಾರ ತಿಳಿಸಿದ್ದಾರೆ. (ಏಜೆನ್ಸೀಸ್​)