ಬೆಂಗಳೂರು: ರಾಜ್ಯದಲ್ಲಿರುವ ಮೈಕ್ರೋಫೈನಾನ್ಸ್ ಸಂಸ್ಥೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಕುರಿತು ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.
ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯುವ ಸಭೆಗೆ ಬರುವಂತೆ ಉಪ ಮುಖ್ಯಮಂತ್ರಿ, ಗೃಹ ಸಚಿವ, ಕಂದಾಯ ಸಚಿವ, ಸಹಕಾರ ಸಚಿವರಿಗೆ ಆಹ್ವಾನಿಸಿದ್ದು, ಮುಖ್ಯಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಅಡ್ವೋಕೇಟ್ ಜನರಲ್, ಆರ್ಥಿಕ, ಒಳಾಡಳಿತ ಇಲಾಖೆ ಹಿರಿಯ ಅಧಿಕಾರಿಗಳಿಗೆ ಹಾಜರಿರುವಂತೆ ಸೂಚನೆ ನೀಡಿದ್ದಾರೆ.
ರಾಜ್ಯ ಬ್ಯಾಂಕರುಗಳ ಸಮಿತಿ ಸಂಯೋಜಕರಿಗೂ ಈ ಸಭೆಗೆ ಆಹ್ವಾನ ನೀಡಲಾಗಿದೆ. ಬ್ಯಾಂಕರುಗಳ ಸಮಿತಿ ಮೈಕ್ರೋೈನಾನ್ಸ್‌ನಿಂದ ವಿವಿಧ ಕಡೆ ಆಗಿರುವ ಅಡ್ಡ ಪರಿಣಾಮದ ಕುರಿತು ಸರ್ಕಾರಕ್ಕೆ ವರ್ಷದ ಹಿಂದೆಯೇ ಎಚ್ಚರಿಸಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ ಸಂಗತಿಯಾಗಿದೆ.
ರಾಜ್ಯದ ಉದ್ದಗಲಕ್ಕೂ ಮೈಕ್ರೋೈನಾನ್ಸ್‌ನವರ ಕಿರುಕುಳದಿಂದ ಜನರು ಸಂಕಷ್ಟಕ್ಕೆ ಸಿಲುಕುತ್ತಿರುವ ಘಟನೆಗಳು, ಪ್ರತಿಭಟನೆ, ಹೋರಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮುಂದೆ ಯಾವ ತೀರ್ಮಾನ ಮಾಡಬೇಕು ಮತ್ತು ಮೈಕ್ರೋೈನಾನ್ಸ್‌ನ ವ್ಯಾಪ್ತಿ, ಅವುಗಳನ್ನು ನಿಯಂತ್ರಿಸಲು ಇರುವ ಅವಕಾಶದ ಕುರಿತು ಈ ಸಭೆಯಲ್ಲಿ ಸಿಎಂ ಸಮಾಲೋಚನೆ ನಡೆಸುವರು.
ಮೈಕ್ರೋ ಫೈನಾನ್ಸ್ ಕಿರುಕುಳ; ಉನ್ನತ ಮಟ್ಟದ ಸಭೆ

You Might Also Like
ಸಂಬಳ ಸಾಲ್ತಿಲ್ಲ! ಸಾಲ ತೀರಿಸಲು ಚಿನ್ನದ ಸಾಲ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳನ್ನು ಮಾತ್ರ ಮಾಡಬೇಡಿ | Gold Loan
Gold Loan: ಸಂಸ್ಥೆ ಕೊಡುತ್ತಿರುವ ಸಂಬಳ ನಮಗೆ ಮಾತ್ರವಲ್ಲ, ನಮ್ಮ ಸಾಲ ತೀರಿಸಲು ಸಹ ಸಾಲುತ್ತಿಲ್ಲ…
ಭಾರತದಲ್ಲಿ ಅನಾರೋಗ್ಯಕರ ಆಹಾರ ಸೇವನೆಯೇ ಹೆಚ್ಚು: ಶೇ. 56 ರೋಗಗಳಿಗೆ ಕೆಟ್ಟ ಆಹಾರ ಪದ್ಧತಿ ಕಾರಣವೆಂದ ಏಮ್ಸ್! Indians Food
Indians Food : ಭಾರತದಲ್ಲಿ ಬೊಜ್ಜು ಅಥವಾ ಸ್ಥೂಲಕಾಯತೆ ಇಂದು ಸಾಮಾನ್ಯ ಹಾಗೂ ಸಂಕೀರ್ಣ ಕಾಯಿಲೆಗಳಲ್ಲಿ…
ನೀವು ಚಿಕನ್ ಅಥವಾ ಮಟನ್ ಲಿವರ್ ತಿಂತಿರಾ? ಹಾಗಾದ್ರೆ ಎಚ್ಚರ! ಈ ವಿಚಾರ ನಿಮಗೆ ಗೊತ್ತಿರಲೇಬೇಕು… Liver
Liver : ಮಾಂಸಾಹಾರ ಬಹುತೇಕರ ಪ್ರಿಯವಾದ ಆಹಾರ. ಬೇರೆ ಯಾವುದನ್ನು ಬೇಕಾದರೂ ಬಿಡುತ್ತೇನೆ ಆದರೆ, ಒಂದು…