ವಿಶ್ವಕಪ್​ಗೆ ಜೋಫ್ರಾ ಆರ್ಚರ್​ ಆಯ್ಕೆ ಆಗದಿದ್ದರೆ ಬೆತ್ತಲಾಗುತ್ತೇನೆಂದು ಇಂಗ್ಲೆಂಡ್ ತಂಡದ​​ ಮಾಜಿ ನಾಯಕ ಹೇಳಿದ್ದೇಕೆ?

ನವದೆಹಲಿ: ಏಕದಿನ ವಿಶ್ವಕಪ್​ಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ವಿವಿಧ ದೇಶಗಳು ತಮ್ಮ ತಂಡಗಳನ್ನು ಪ್ರಕಟ ಮಾಡಿವೆ. ಆದರೆ, ಕ್ರಿಕೆಟ್​ ಜನಕ ಎಂದು ಖ್ಯಾತಿ ಪಡೆದಿರುವ ಇಂಗ್ಲೆಂಡ್​, ಪೂರ್ವಭಾವಿ ತಂಡವನ್ನು ಮಾತ್ರ ಪ್ರಕಟ ಮಾಡಿದ್ದು, ಇನ್ನು ಅಂತಿಮಗೊಳಿಸಿಲ್ಲ. ಹೀಗಿರುವಾಗಲೇ ಆಂಗ್ಲ ಪಡೆಯ ಮಾಜಿ ನಾಯಕ ಮೈಕೆಲ್​ ವಾಘನ್ ಅವರು ಜೋಫ್ರಾ ಆರ್ಚರ್​ ಅವರನ್ನು ಆಯ್ಕೆ ಮಾಡದಿದ್ದರೆ ಬೆತ್ತಲಾಗುತ್ತೇನೆ ಎಂದು ಹೇಳಿ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.

ಜೋಫ್ರಾ ಆರ್ಚರ್​ ಆಂಗ್ಲ ಪಡೆಯ ವೇಗದ ಬೌಲರ್​ ಆಗಿದ್ದು, ಮೂಲತಃ ಬಾರ್ಬಡೋಸ್ ದೇಶದವರು. ಇಂಗ್ಲೆಂಡ್​ನ ಮತ್ತು ವೇಲ್ಸ್​ ಕ್ರಿಕೆಟ್​ ಮಂಡಳಿ(ಇಸಿಬಿ) ವೇಗದ ಪಿಚ್​​ಗಳಿಗೆ ಸೂಕ್ತವಾದ ಆರ್ಚರ್​ ಅವರಂತಹ ಅರ್ಹ ಆಟಗಾರನನ್ನು ಹೊಂದಿದೆ. ಆದರೆ, ಆತನ ಆಯ್ಕೆ ಮೇಲೆ ಎಲ್ಲರ ಕುತೂಹಲ ನೆಟ್ಟಿದ್ದು, ಬುಧವಾರ ಪ್ರಕಟವಾದ ಪೂರ್ವಭಾವಿ ತಂಡದಲ್ಲಿ ಆರ್ಚರ್​ ಹೆಸರು ನಾಪತ್ತೆಯಾಗಿತ್ತು. ಆದರೆ, ಅಂತಿಮ ಪಟ್ಟಿಯಲ್ಲಿ ಹೆಸರು ಇರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಆಂಗ್ಲ ಪಡೆಯ ಮಾಜಿ ನಾಯಕ ಮೈಕೆಲ್​ ವಾಘನ್​, ಜೋಫ್ರಾ ಆರ್ಚರ್​ ವಿಶ್ವಕಪ್​ಗೆ ಆಯ್ಕೆ ಆಗದಿದ್ದರೆ, ನಾನು ಬೆತ್ತಲೆ ಆಗುತ್ತೇನೆ ಎಂದು ಹೇಳಿ ಆರ್ಚರ್​ ಬೆನ್ನಿಗೆ ನಿಂತಿದ್ದಾರೆ. ​

ಈಗಾಗಲೇ ತಂಡದಲ್ಲಿ ಆಡಲು ಮೊದಲ ಬಾರಿಗೆ ಅವಕಾಶ ಸಿಕ್ಕಿದ್ದು, ಪಾಕ್​ ವಿರುದ್ಧದ ಏಕದಿನ ಸರಣಿಗೆ ಆರ್ಚರ್​ ಆಯ್ಕೆ ಆಗಿದ್ದಾರೆ. ಸದ್ಯ ಐಪಿಎಲ್​ನಲ್ಲಿ ರಾಜಸ್ಥಾನ ರಾಯಲ್ಸ್​ ಪರ ಆಡುತ್ತಿರುವ ಆರ್ಚರ್,​ ತಮಗೆ ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ವಿಶ್ವಕಪ್​ ಆಯ್ಕೆಗೆ ಸೂಕ್ತ ಎಂಬ ಸಂದೇಶ ರವಾನಿಸಿದ್ದಾರೆ. ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​ ಮೇ 19ರಂದು ಅಂತಿಮ ತಂಡವನ್ನು ಪ್ರಕಟ ಮಾಡಲಿದ್ದು, ಆರ್ಚರ್​ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ವೇಳೆಗಾಗಲೇ ಪಾಕ್​ ವಿರುದ್ಧ ಸರಣಿ ಮುಕ್ತಾಯ ಆಗಿರುತ್ತದೆ.

ಆರ್ಚರ್​ ಹರ್ಷ
ಪಾಕ್​ ವಿರುದ್ಧದ ಸರಣಿಗೆ ಆಯ್ಕೆ ಆಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ನಾನು ಇಂಗ್ಲೆಂಡ್​ ತಂಡದ ಪರ ಆಡುತ್ತೇನೆ ಎಂದು ನಿರೀಕ್ಷೆ ಮಾಡಿರಲಿಲ್ಲ. ನನಗೆ ಒಳ್ಳೆಯ ಅವಕಾಶ ಸಿಕ್ಕದೆ. ಅದನ್ನು ಸದುಪಯೋಗ ಪಡಿಸಿಕೊಂಡು ತಂಡಕ್ಕೆ ಉತ್ತಮವಾದುದ್ದನ್ನು ನೀಡುತ್ತೇನೆ ಎಂದು ಆರ್ಚರ್​ ತಿಳಿಸಿದ್ದಾರೆ. (ಏಜೆನ್ಸೀಸ್​)

One Reply to “ವಿಶ್ವಕಪ್​ಗೆ ಜೋಫ್ರಾ ಆರ್ಚರ್​ ಆಯ್ಕೆ ಆಗದಿದ್ದರೆ ಬೆತ್ತಲಾಗುತ್ತೇನೆಂದು ಇಂಗ್ಲೆಂಡ್ ತಂಡದ​​ ಮಾಜಿ ನಾಯಕ ಹೇಳಿದ್ದೇಕೆ?”

  1. Yes jofra archer is a excellent bowler and excellent performance in ipl plz need to select in world cup playing xl its giving for best performance in world cup

Leave a Reply

Your email address will not be published. Required fields are marked *