ಮೆಲ್ಬೋರ್ನ್: ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ನಾಯಕ ಮೈಕೆಲ್ ಕ್ಲಾರ್ಕ್, ಜೀವನದಲ್ಲಿ ಮತ್ತೊಬ್ಬ ಹೊಸ ಮಹಿಳೆಯ ಪ್ರವೇಶವಾಗಿದೆ! ಈಗಾಗಲೆ ಒಬ್ಬಳ ಜತೆಗೆ ನಿಶ್ಚಿತಾರ್ಥ, ಮತ್ತೊಬ್ಬಳ ಜತೆಗೆ ವೈವಾಹಿಕ ಜೀವನವನ್ನೇ ಮುರಿದುಕೊಂಡಿರುವ ಮಾಜಿ ಬ್ಯಾಟ್ಸ್‌ಮನ್ ಈಗ ಮತ್ತೊಬ್ಬ ಮಹಿಳೆಯ ಜತೆಗೆ ಸುತ್ತಾಟ ಆರಂಭಿಸಿದ್ದಾರೆ. ಕ್ಲಾರ್ಕ್ ಜೀವನವನ್ನು ಪ್ರವೇಶಿಸಿರುವ ಈ ಮೂರನೇ ಮಹಿಳೆ ಈಗಾಗಲೆ 13 ವರ್ಷದ ಪುತ್ರನನ್ನು ಹೊಂದಿದ್ದಾಳೆ!
2007ರ ಏಕದಿನ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದ ಮೈಕೆಲ್ ಕ್ಲಾರ್ಕ್ 2015ರಲ್ಲಿ ತಮ್ಮ ನಾಯಕತ್ವದಲ್ಲೇ ತವರು ನೆಲದಲ್ಲಿ ವಿಶ್ವಕಪ್ ಎತ್ತಿ ಹಿಡಿದ ಬಳಿಕ ನಿವೃತ್ತಿ ಹೊಂದಿದ್ದರು. 39 ವರ್ಷದ ಕ್ಲಾರ್ಕ್ ಈಗ ಆಸ್ಟ್ರೇಲಿಯಾದ ಫ್ಯಾಷನ್ ಡಿಸೈನರ್ ಪಿಪ್ ಎಡ್ವರ್ಡ್ಸ್ ಜತೆಗೆ ಡೇಟಿಂಗ್ ಆರಂಭಿಸಿದ್ದಾರೆ. 40 ವರ್ಷದ ಪಿಪ್, ‘ಪಿಇ ನೇಷನ್’ ಎಂಬ ತಮ್ಮದೇ ಆದ ಕಂಪನಿಯನ್ನು ಹೊಂದಿದ್ದು, ಆಸೀಸ್ನ ಫ್ಯಾಷನ್ ಲೋಕದಲ್ಲಿ ಪ್ರಭಾವಿ ವ್ಯಕ್ತಿ ಎನಿಸಿದ್ದಾರೆ. ಇವರಿಬ್ಬರು ಬೀಚ್‌ನಲ್ಲಿ ಮತ್ತು ಡಿನ್ನರ್ ಪಾರ್ಟಿಯಲ್ಲಿ ಜತೆಯಾಗಿರುವ ಚಿತ್ರಗಳು ಈಗಾಗಲೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: ನಾನು ಅಂದು ಅಮಿತಾಭ್ ಬಚ್ಚನ್ ಆಗಿದ್ದೆ!
ಕಳೆದ ಫೆಬ್ರವರಿಯಿಂದಲೇ ಕ್ಲಾರ್ಕ್-ಪಿಪ್ ನಡುವಿನ ಸಂಬಂಧದ ಬಗ್ಗೆ ಸುದ್ದಿ ಕೇಳಿಬರುತ್ತಿತ್ತು. ಆದರೆ ಖಚಿತಗೊಂಡಿರಲಿಲ್ಲ. ಆದರೆ ಈಗ ಬೀಚ್‌ನಲ್ಲಿ ಜತೆಯಾಗಿ ಮರಳಿನ ಮೇಲೆ ಮಲಗಿಕೊಂಡಿರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸುವ ಮೂಲಕ ಇಬ್ಬರೂ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಕ್ಲಾರ್ಕ್ ಆಸ್ಟ್ರೇಲಿಯಾ ಪರ 115 ಟೆಸ್ಟ್ ಮತ್ತು 245 ಏಕದಿನ ಪಂದ್ಯ ಆಡಿದ್ದಾರೆ. 2004ರ ಭಾರತ ಪ್ರವಾಸದಲ್ಲಿ ಬೆಂಗಳೂರಿನಲ್ಲಿ ಆಡಿದ ಚೊಚ್ಚಲ ಟೆಸ್ಟ್‌ನಲ್ಲೇ ಶತಕ ಸಿಡಿಸಿ ಮಿಂಚಿದ್ದರು.
ಮಾಜಿ ಪತ್ನಿ ಕೈಲಿ ಬೋಲ್ಡಿ ಮತ್ತು ಮಾಜಿ ಗೆಳತಿ ಲಾರಾ ಜತೆಗೆ ಕ್ಲಾರ್ಕ್
ರೂಪದರ್ಶಿ ಹಾಗೂ ಕೈಲಿ ಬೋಲ್ಡಿ ಜತೆಗೆ 2012ರಲ್ಲಿ ವಿವಾಹವಾಗಿದ್ದ ಕ್ಲಾರ್ಕ್ ಓರ್ವ ಪುತ್ರಿಯನ್ನು ಹೊಂದಿದ್ದಾರೆ. ಈ ವರ್ಷ ಫೆಬ್ರವರಿಯಲ್ಲಿ ಇವರಿಬ್ಬರು ವಿಚ್ಛೇದನ ಪಡೆದುಕೊಂಡಿದ್ದರು. ಅದಕ್ಕೆ ಮುನ್ನ ಮತ್ತೋರ್ವ ರೂಪದರ್ಶಿ ಲಾರಾ ಬಿಂಗಲ್ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕ್ಲಾರ್ಕ್, 2010ರಲ್ಲಿ ಇದನ್ನು ಮುರಿದುಕೊಂಡಿದ್ದರು.
https://www.instagram.com/p/CCfYXT4p1HX/?utm_source=ig_web_copy_link
ಮಾಸ್ಕ್ ಧರಿಸಿ ಬ್ರಾ ತ್ಯಜಿಸಿ, ಕರೊನಾಗೆ ಗಾಲ್ಫ್ ಆಟಗಾರ್ತಿ ಮದ್ದು!