ನವದೆಹಲಿ: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಐಪಿಎಲ್ 2025ರ ರಿಟೆನ್ಶನ್ ಪ್ರಕ್ರಿಯೆಯಲ್ಲಿ ಕ್ರಿಕೆಟ್ ಅಭಿಮಾನಿಗಳಿಗಿದ್ದ ಗೊಂದಲಗಳು ಕಡೆಗೂ ಬಗೆಹರಿದಿದೆ. ಅಚ್ಚರಿಯಂತೆ ತಂಡದ ಸ್ಟಾರ್ ಆಟಗಾರರನ್ನೇ ಕೈಬಿಟ್ಟಿರುವ ಫ್ರಾಂಚೈಸಿಗಳು, ಮುಂಬರುವ ಆಕ್ಷನ್ನಲ್ಲಿ ತಾವು ಗುರಿಯಿಟ್ಟಿರುವ ಕ್ರಿಕೆಟಿಗರನ್ನು ತಮ್ಮ ತಂಡದತ್ತ ಕರೆದುಕೊಳ್ಳಲು ದೊಡ್ಡ ಲೆಕ್ಕಾಚಾರಗಳನ್ನು ಹಾಕಿಕೊಂಡಿವೆ. ಸದ್ಯ ಈ ಪೈಕಿ ಸದ್ದು-ಗದ್ದಲ ಮೂಡಿಸದೆ ಟೀಮ್ನ ನಾಲ್ವರು ಆಟಗಾರರನ್ನು ಉಳಿಸಿಕೊಂಡ ಮುಂಬೈ ಇಂಡಿಯನ್ಸ್ಗೆ (Mumbai Indians MI) ಇದೀಗ ನಾಯಕತ್ವದ ಗೊಂದಲ ಎದುರಾಗಿದೆ.
ಇದನ್ನೂ ಓದಿ: ಕೊಡವ ಲ್ಯಾಂಡ್ ಭೌಗೋಳಿಕ-ರಾಜಕೀಯ ಸ್ವಾಯತ್ತತೆಗೆ ಆಗ್ರಹಿಸಿ ಸತ್ಯಾಗ್ರಹ
ದೊಡ್ಡ ಗೊಂದಲ
2025ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಐಪಿಎಲ್ 18ನೇ ಆವೃತ್ತಿಗೆ ಇಂದಿನಿಂದಲೇ ಭರ್ಜರಿ ತಯಾರಿಗಳು ಶುರುವಾಗಿದೆ. ರಿಟೆನ್ಶನ್ ಪ್ರಕ್ರಿಯೆಯಲ್ಲಿ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರಿತ್ ಬುಮ್ರಾರನ್ನು ಫ್ರಾಂಚೈಸಿ ಉಳಿಸಿಕೊಂಡಿದೆ. 18 ಕೋಟಿ ರೂ. ಸಂಭಾವನೆಯನ್ನು ಕೊಟ್ಟು ಬುಮ್ರಾರನ್ನು ರಿಟೈನ್ ಮಾಡಿರುವ ಮುಂಬೈ ಇಂಡಿಯನ್ಸ್ಗೆ ಇದೀಗ ದೊಡ್ಡ ಗೊಂದಲ ಕಾಡುತ್ತಿರುವುದು ನಾಯಕತ್ವದ ಜವಾಬ್ದಾರಿ ಯಾರಿಗೆ ಕೊಡಬೇಕು ಎಂಬುದು.
ಷರತ್ತುಗಳನ್ನು ಕೇಳಿದ್ದೇ ಆದರೂ
ವರದಿಗಳ ಪ್ರಕಾರ, ಐದು ಬಾರಿ ಚಾಂಪಿಯನ್‌ಗಳಾಗಿ ಐಪಿಎಲ್ನಲ್ಲಿ ಮೆರೆದಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲು ಬಯಕೆ ವ್ಯಕ್ತಪಡಿಸಿರುವ ಸೂರ್ಯಕುಮಾರ್ ಯಾದವ್, ಫ್ರಾಂಚೈಸಿ ತಮಗಾಗಿ ಹೊಂದಿರುವ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಅವರು ಬಯಸಿದ್ದಾರೆ. ಕ್ಯಾಪ್ಟನ್ ಸ್ಥಾನಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳಬೇಕಾದ ಟೀಮ್ ಮ್ಯಾನೇಜ್ಮೆಂಟ್, ‘ಸ್ಕೈ’ ಅವರ ಷರತ್ತುಗಳನ್ನು ಕೇಳಿದ್ದೇ ಆದರೂ ಸದ್ಯದ ಮಟ್ಟಿಗೆ ಯಾವುದಕ್ಕೂ ಕಮ್ಮಿಟ್ ಆಗುವುದಿಲ್ಲ ಎಂದು ತಿಳಿಸಿರುವುದು ಗಮನಾರ್ಹ,(ಏಜೆನ್ಸೀಸ್).
ಪೆಟ್ರೋಲ್ ಹಾಕಿಸಿಕೊಳ್ಳುವವರು ಈ ಮಿಸ್ಟೇಕ್ಸ್ ಎಂದಿಗೂ ಮಾಡ್ಬೇಡಿ! ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ | Petrol