ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಶುರುವಾದ ಮೇಲೆ ಸಮೂಹ ಸಾರಿಗೆಗೆ ಒಲವು ಹೆಚ್ಚಿದೆ, ಮತ್ತೊಂದೆಡೆ ಸೈಕಲ್ ಬಳಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇದೀಗ ಈ ಎರಡೂ ವರ್ಗದ ಜನರಿಗೆ ಖುಷಿ ನೀಡುವ ಸಂಗತಿಯನ್ನು ನಮ್ಮ ಮೆಟ್ರೋ ನೀಡಿದೆ. ಅದೇನೆಂದರೆ ಇನ್ಮುಂದೆ ಮೆಟ್ರೋದಲ್ಲಿ ಸೈಕಲ್ ಕೂಡ ತೆಗೆದುಕೊಂಡು ಹೋಗಬಹುದು.
ಮೆಟ್ರೋದಲ್ಲಿ ಸಂಚರಿಸುವವರಿಗೆ ಇರುವ ದೊಡ್ಡ ಅನನುಕೂಲತೆ ಅಂದರೆ ಹತ್ತುವ ಹಾಗೂ ಇಳಿಯುವ ಜಾಗದಲ್ಲಿ ಹಿಂದಿನ/ಮುಂದಿನ ಪ್ರಯಾಣಕ್ಕೆ ಹೋಗಲು ವಾಹನದ ಸಮಸ್ಯೆ. ಮತ್ತೊಂದೆಡೆ ಸೈಕಲ್ ಬಳಸುವವರಿಗೆ ಕೂಡ ಮೆಟ್ರೋಗೆ ಹತ್ತುವಾಗ ಸೈಕಲ್ ಬಿಟ್ಟರೆ ಮತ್ತೆ ಇಳಿದ ಮೇಲೆ ಹೋಗಬೇಕಾದ ಸ್ಥಳಕ್ಕೆ ಹೋಗಲು ಬೇರೆ ವಾಹನದ ಮೊರೆ ಹೋಗಬೇಕು. ಆದರೆ ಮೆಟ್ರೋದ ಹೊಸ ನಿರ್ಧಾರ ಈ ಸಮಸ್ಯೆಯನ್ನು ಹೋಗಲಾಡಿಸುವ ಜತೆಗೆ ಮೆಟ್ರೋ ಹಾಗೂ ಸೈಕಲ್ ಬಳಕೆದಾರರಿಬ್ಬರಿಗೂ ಅನುಕೂಲ ಮಾಡಿಕೊಟ್ಟಿದೆ.
ಹಾಗಂತ ಸೈಕಲ್ ಬಳಸುವ ಎಲ್ಲರೂ ಇದರಿಂದ ಖುಷಿಯಾಗುವಂತಿಲ್ಲ. ಏಕೆಂದರೆ ಇಲ್ಲೊಂದು ಷರತ್ತು ಕೂಡ ಇದೆ. ಈ ಅನುಕೂಲ ಮಡಚಬಹುದಾದ ಸೈಕಲ್ ಬಳಸುವವರಿಗೆ ಮಾತ್ರ. ಮಡಚಬಹುದಾದ ಸೈಕಲ್ ಹೇಗಿರಬೇಕು, ಹೇಗೆ ಕೊಂಡೊಯ್ಯಬೇಕು ಎಂಬ ಸೂಚನೆಗಳನ್ನು ನೀಡಿರುವ ನಮ್ಮ ಮೆಟ್ರೋ, ಸೈಕಲ್ ಕೊಂಡೊಯ್ಯಲು ಶುಲ್ಕ ವಿನಾಯಿತಿ ಕೂಡ ನೀಡಿದೆ.
ಸೂಚನೆಗಳು ಇಂತಿವೆ..
ಯುವ ಕಾಂಗ್ರೆಸ್ ಜೀಪ್ ಪಲ್ಟಿ; ಒಬ್ಬ ಸ್ಥಳದಲ್ಲೇ ಸಾವು, ಮೂವರಿಗೆ ಗಾಯ..