ಎಚ್‌ಡಿಕೆ ವಿರುದ್ಧದ ಮೀಟೂ ಹೇಳಿಕೆಗೆ ಈಗಲೂ ಬದ್ಧ: ಕುಮಾರ್‌ ಬಂಗಾರಪ್ಪ

ಶಿವಮೊಗ್ಗ: ಎಚ್.ಡಿ. ಕುಮಾರಸ್ವಾಮಿ ವಿರುದ್ಧದ ಮೀಟೂ ಹೇಳಿಕೆಗೆ ನಾನು‌ ಈಗಲೂ ಬದ್ಧವಾಗಿದ್ದೇನೆ. ಯಾವುದೇ ಕಾರಣಕ್ಕೂ ನಾನು ಆ ಮಾತುಗಳನ್ನು ವಾಪಸ್ ಪಡೆಯಲ್ಲ ಎಂದು ಶಾಸಕ ಕುಮಾರ್‌ ಬಂಗಾರಪ್ಪ ತಿಳಿಸಿದ್ದಾರೆ.

ಮತದಾನದ ಬಳಿಕ ಮಾತನಾಡಿದ ಅವರು, ನಾನು ಯೋಚನೆ ಮಾಡಿಯೇ ಮಾತನಾಡಿದ್ದೇನೆ. ನನ್ನ ಮಾತುಗಳು ಅವರಿಗೆ ವರವಾದರೆ, ಅವರ ಮಾತುಗಳು ನಮಗೆ ವರವಾಗುತ್ತವೆ. ದೊಡ್ಡ ಸಾಹೇಬರ ವಿಚಾರವಾಗಿ ನನ್ನ ಮೇಲೆ ಮಾತನಾಡಿದ್ದಕ್ಕೆ ವಿಧಾನಸಭೆ ಚುನಾವಣೆಯಲ್ಲಿ ಸೊರಬದಲ್ಲಿ ಉತ್ತರ ಕೊಟ್ಟಿದ್ದಾರೆ. ಶಿವಮೊಗ್ಗದಲ್ಲಿ ಜೆಡಿಎಸ್ ಅನ್ನು ತೆಗೆದಿದ್ದಾರೆ ಎಂದು ಹೇಳಿದರು.

ಶಿವಮೊಗ್ಗ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಸೊರಬ ತಾಲೂಕಿನ ಕುಬಟೂರು ಗ್ರಾಮದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಮತದಾನ ಮಾಡಿದರು. ಕುಟುಂಬಸ್ಥರ ಜತೆ ಬಂದು ತಮ್ಮ ಮತ ಚಲಾಯಿಸಿದರು. (ದಿಗ್ವಿಜಯ ನ್ಯೂಸ್)