ಅರ್ಜುನ್​ ಸರ್ಜಾ ವಿರುದ್ಧ ದ್ವೇಷ ಸಾಧನೆ ಆರೋಪ: ನಟ ಚೇತನ್​ ಹೇಳಿದ್ದೇನು?

ಬೆಂಗಳೂರು: ನಾನು ಅರ್ಜುನ್​ ಸರ್ಜಾ ಅವರ ವಿರುದ್ಧ ಮೀ ಟೂ ಅಭಿಯಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ. ನನ್ನ ಮತ್ತು ಅವರ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷ ಇಲ್ಲ ಎಂದು ನಟ ಚೇತನ್​ ಅವರು ಸ್ಪಷ್ಟನೆ ನೀಡಿದ್ದಾರೆ.

ನಾನು ಸರ್ಜಾ ಅವರ ಬಳಿ ಪ್ರೇಮ ಬರಹ ಸಿನಿಮಾಕ್ಕಾಗಿ 10 ಲಕ್ಷ ರೂ. ಪಡೆದಿಲ್ಲ. 9 ಲಕ್ಷ ರೂ. ಅಡ್ವಾನ್ಸ್​ ಪಡೆದಿದ್ದೆ. ಮುಂದಿನ ದಿನಗಳಲ್ಲಿ ಮತ್ತೆ ನಾವು ಒಟ್ಟಿಗೆ ಕೆಲಸ ಮಾಡಬಹುದು ಎಂದು ನಟ ಅರ್ಜುನ್ ಸರ್ಜಾ ಅವರು ಹೇಳಿದ್ದರು. ಹೀಗಾಗಿ ಅವರು ನನಗೆ ನೀಡಿದ್ದ ಮುಂಗಡ ಹಣವನ್ನು ಮತ್ತೆ ಮರಳಿ ಕೊಟ್ಟಿಲ್ಲ ಎಂದು ಚೇತನ್​ ತಿಳಿಸಿದರು.

ಇದೇ ಸಂದರ್ಭದಲ್ಲಿ ನಿರ್ಮಾಪಕ ಮತ್ತು ಶಾಸಕ ಮುನಿರತ್ನ ಹಾಗೂ ಸಾ.ರಾ. ಗೋವಿಂದು ಅವರು ಮಹಿಳಾ ವಿರೋಧಿಗಳು ಮತ್ತು ಸಮಾನತಾ ವಿರೋಧಿಗಳು. ಇಂಥಹವರ ವಿರುದ್ಧ ಪ್ರಶ್ನಾತೀತವಾಗಿ ನಾವು ದನಿ ಎತ್ತಬೇಕು ಎಂದು ಚೇತನ್​ ಕಿಡಿ ಕಾರಿದರು.

ಶ್ರುತಿ ಹರಿಹರನ್​ ಪರ ನಿಂತಿರುವ ನಟ ಚೇತನ್​ ಅರ್ಜುನ್​ ಸರ್ಜಾ ವಿರುದ್ಧ ಧ್ವನಿಯೆತ್ತಿದ್ದೇಕೆ?