PHOTOS| ಪಿಗ್ಗಿಯ ಹೊಸ ಅವತಾರವಾಯ್ತು ಟ್ರೋಲಿಗರಿಗೆ ಆಹಾರ: ನಗೆಗಡಲಲ್ಲಿ ತೇಲಿಸುತ್ತಿದೆ ಪ್ರಿಯಾಂಕಾ ಕುರಿತಾದ ಮೇಮ್ಸ್​ಗಳು!​

ನವದೆಹಲಿ: ಸದಾ ತಮ್ಮ ವಿಭಿನ್ನ ಲುಕ್​ಗಳಿಂದಲೇ ಎಲ್ಲರ ಗಮನ ಸೆಳೆಯುವ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಜತೆಜತೆಯಲ್ಲಿಯೇ ಟ್ರೋಲಿಗರ ಕಾಲೆಳೆತಕ್ಕೆ ಸಿಕ್ಕಿಬೀಳುತ್ತಾರೆ. ಆದರೂ ತಮ್ಮ ವಿಭಿನ್ನತೆಯನ್ನು ಬಿಟ್ಟು ಕೊಡದ ಮಾಜಿ ವಿಶ್ವ ಸುಂದರಿ ಈ ಬಾರಿಯೂ ವಿಭನ್ನತೆ ಮೆರೆಯಲು ಹೋಗಿ ಟ್ರೋಲ್​ ದಾಳಕ್ಕೆ ಮತ್ತೊಮ್ಮೆ ಸಿಲುಕಿದ್ದಾರೆ.

ನ್ಯೂಯಾರ್ಕ್​ನ ಮೆಟ್ರೊಪಾಲಿಟನ್ ಆರ್ಟ್​ ಆಫ್​​ ಮ್ಯೂಸಿಯಂ​ನಲ್ಲಿ ನಡೆದ ಮೆಟ್​ ಗಾಲಾ 2019 ರೆಡ್​ ಕಾರ್ಪೆಟ್​ ಕಾರ್ಯಕ್ರಮದಲ್ಲಿ ಪ್ರಿಯಾಂಕ ಚೋಪ್ರಾ ತಮ್ಮ ಪತಿ ನಿಕ್​ ಜೋನಾಸ್​ರೊಂದಿಗೆ ವಿಭಿನ್ನವಾಗಿ ಕಾಣಿಸಿಕೊಂಡರು. ಈ ಮೊದಲು ನಟ, ನಟಿಯರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ ಇಬ್ಬರು ಮೊದಲ ಬಾರಿ ದಂಪತಿಯಾಗಿ ಕಾಣಿಸಿಕೊಳ್ಳುವ ಮೂಲಕ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದರು.

ವರ್ಣರಂಜಿತ ಗರಿಗಳಿರುವ ರಫಲ್ಸ್​ನೊಂದಿಗೆ ಪ್ರಿಯಾಂಕ ಸಿಲ್ವರ್​ ಗೌನ್​ ತೊಟ್ಟಿದ್ದರು. ವಿಚಿತ್ರ ಕೇಶ ಶೈಲಿಗೆ ಬೆಳ್ಳಿ ಕಿರೀಟ ಧರಿಸಿ ಕಾರ್ಯಕ್ರಮದಲ್ಲಿ ತುಂಬಾ ವಿಭಿನ್ನವಾಗಿ ಕಾಣಿಸಿಕೊಂಡರು. ಪ್ರಿಯಾಂಕಾಗೆ ಸಾಥ್​ ನೀಡಿದ ಪತಿ ನಿಕ್​, ಶ್ವೇತವರ್ಣ ವಿನ್ಯಾಸದ ಉಡುಪಿನೊಂದಿಗೆ ಬೆಳ್ಳಿಯ ಶೂಗಳನ್ನು ಹಾಕಿಕೊಂಡು ಕಾರ್ಯಕ್ರಮದಲ್ಲಿ ಪೋಸ್​ ಕೊಟ್ಟರು.

ಸ್ಪೈಕ್​​ ಮಾಡಿದ ಹೇರ್​ಸ್ಟೈಲ್​ನೊಂದಿಗೆ ವಿಭಿನ್ನವಾಗಿ​ ಮೇಕಪ್ ಮಾಡಿಕೊಂಡಿರುವ​ ಫೋಟೋವನ್ನು ಪ್ರಿಯಾಂಕ ಅವರು ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದೇ ತಡ ಅಸಂಖ್ಯಾತ ನೆಟ್ಟಿಗರು ತಮ್ಮದೇ ಕಲ್ಪನೆಯಲ್ಲಿ ಪ್ರಿಯಾಂಕ ಫೋಟೋವನ್ನು ಕೊಲಾಜ್​ ಮಾಡಿ ಟ್ರೋಲ್​ ಮಾಡಿ ಕಾಲೆಳೆಯುತ್ತಿದ್ದಾರೆ.

ಟ್ರೋಲಿಗರು ಮಾಡಿದ ಕೆಲವು ಹಾಸ್ಯಾತ್ಮಕ ಪೋಸ್ಟ್​ಗಳು ಈ ಕೆಳಕಂಡಂತಿದೆ…