ಯಲಬುರ್ಗಾ: ಸಂತ ಶ್ರೀ ಸೇವಾಲಾಲರ ಜೀವನ ಮತ್ತು ಸಂದೇಶಗಳು ಮನುಕುಲದ ಏಳಿಗೆಗೆ ಪೂರಕ. ಎಲ್ಲರೂ ಅವರ ವಿಚಾರ ಹಾಗೂ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಬಸವರಾಜ್ ತೆನ್ನಳ್ಳಿ ಹೇಳಿದರು.
ಪಟ್ಟಣದ ಬಂಡಿ ರಸ್ತೆಯ ಸಂತ ಸೇವಾಲಾಲ್ ವೃತ್ತದಲ್ಲಿ ಜಯಂತ್ಯುತ್ಸವ ನಿಮಿತ್ತ ತಾಲೂಕು ಆಡಳಿತದಿಂದ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು. ಸೇವಾಲಾಲ್ ಮಹಾರಾಜರ ಮಾರ್ಗದರ್ಶನದಲ್ಲಿ ಸಾಗೋಣ. ಅನ್ಯ ಸಮುದಾಯಗಳ ಜತೆ ಅನೋನ್ಯವಾಗಿ ಬಾಳುವ ಪಾಠವನ್ನು ಮಕ್ಕಳಿಗೆ ಹೇಳೋಣ ಎಂದರು.
ಹಿರಿಯರಾದ ಬಸಲಿಂಗಪ್ಪ ಭೂತೆ ಹಾಗೂ ವೀರಣ್ಣ ಹುಬ್ಬಳ್ಳಿ ಮಾತನಾಡಿ, ಸೇವಾಲಾಲರು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ತತ್ವಾದರ್ಶಗಳು ನಮ್ಮ ನಿತ್ಯದ ಬದುಕಿಗೆ ಮಾರ್ಗದರ್ಶನವಾಗಿವೆ. ಬಂಜಾರ ಸಮುದಾಯದಲ್ಲಿ ಬಡವರೇ ಹೆಚ್ಚಾಗಿದ್ದು, ಇವರು ಶ್ರಮ ಜೀವಿಗಳು. ಸೇವಾಲಾಲರ ಜೀವನ ಚರಿತ್ರೆ ಈಗಿನ ಯುವ ಪೀಳಿಗೆ ಅರಿಯಬೇಕು ಎಂದರು.
ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಮಾತನಾಡಿ, ಬಂಜಾರ ಸಮುದಾಯ ಹಿಂದುಳಿದಿದ್ದು, ಸಮಾಜ ಕಟ್ಟುವಲ್ಲಿ ಯುವಕರು ಒಂದಾಗಬೇಕಿದೆ. ಸ್ವಾಭಿಮಾನದಿಂದ ಜೀವನ ಸಾಗಿಸಬೇಕಾಗಿದೆ ಎಂದು ಹೇಳಿದರು.
ಪಪಂ ಮುಖ್ಯಾಧಿಕಾರಿ ನಾಗೇಶ, ಬಂಜಾರ ಸಮುದಾಯದ ತಾಲೂಕು ಅಧ್ಯಕ್ಷ ಸೀನಪ್ಪ ನಾಯಕ, ಪ್ರಮುಖರಾದ ಹನುಮಗೌಡ ಪಾಟೀಲ್, ಸದಸ್ಯರಾದ ವಸಂತಕುಮಾರ ಬಾವಿಮನಿ, ಬಸಲಿಂಗಪ್ಪ ಕೊತ್ತಲ, ಹನುಮಂತ ಭಜಂತ್ರಿ, ಲೋಕಪ್ಪ ನಾಯಕ, ಶಿವನಗೌಡ ದಾನರೆಡ್ಡಿ, ಶರಣಪ್ಪ ಗಾಂಜಿ, ಯಲ್ಲಪ್ಪ ನಾಯಕ, ಮಲ್ಲು ಜಕ್ಕಲಿ, ಈಶ್ವರ ಅಟಮಾಳಗಿ, ಅಚ್ಚಪ್ಪ ನಾಯಕ, ವೆಂಕಟೇಶ ನಾಯಕ,ಪರುಶುರಾಮ ಚವ್ಹಾಣ, ಹನುಮಂತ ರಾಠೋಡ, ಶಿವು ರಾಠೋಡ, ಎಂ.ಎನ್.ಜನಾದ್ರಿ, ಮಂಜು ಲಮಾಣಿ, ಪರುಶುರಾಮ ನಾಯಕ್ ಇತರರಿದ್ದರು.