ಚಳ್ಳಕೆರೆ: ವಿಶ್ವದಲ್ಲಿ ಪ್ರಜಾಪ್ರಭುತ್ವ ಉಳಿವಿಗಾಗಿ ಪ್ರತಿಯೊಬ್ಬರೂ ಪಾಲ್ಗೊಳ್ಳುವ ಮೂಲಕ ಆಚರಿಸುತ್ತಿರುವ ಪ್ರಜಾಪ್ರಭುತ್ವ ಮಾನವ ಸರಪಳಿ ಮನುಕುಲಕ್ಕೆ ಒಂದು ದೊಡ್ಡ ಸಂದೇಶವಾಗಲಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಚಳ್ಳಕೆರೆ ಹೊರವಲಯದಲ್ಲಿ ಮಾನವ ಸರಪಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿಶ್ವದಲ್ಲಿ ಸೆ.15ರಂದು ಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತದೆ. ರಾಜ್ಯ ಸರ್ಕಾರ ವಿಶೇಷವಾಗಿ ಆಯೋಜಿಸಿರುವುದು ವಿಶ್ವದಲ್ಲಿಯೇ ಪ್ರಥಮವಾಗಿದೆ ಎಂದರು.
ನಗರಸಭಾ ಅಧ್ಯಕ್ಷೆ ಜೈತುನ್‌ಬಿ, ಉಪಾಧ್ಯಕ್ಷೆ ಸುಜಾತಾ ಪಾಲಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಜಿಪಂ ಕೆಡಿಪಿ ಸದಸ್ಯ ತಬಲ ರಂಗಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಯ್ಯ, ಜಿ.ಬಿ.ಶಶಿಧರ, ಸಿ.ವೀರಭದ್ರಬಾಬು, ತಹಸೀಲ್ದಾರ್ ರೆಹಾನ್ ಪಾಷಾ, ಪೌರಾಯುಕ್ತ ಜೆ.ಎಚ್.ಜಗರೆಡ್ಡಿ, ಪೊಲೀಸ್ ಉಪಅಧೀಕ್ಷಕ ಟಿ.ಬಿ.ರಾಜಣ್ಣ, ಬಿಇಒ ಕೆ.ಎಸ್.ಸುರೇಶ್, ತಾಪಂ ಇಒ ಎಚ್.ಶಶಿಧರ, ಬಿ.ಆನಂದ್, ರೈತ ಮುಖಂಡ ಕೆ.ಚಿಕ್ಕಣ್ಣ ಇದ್ದರು.