ಪ್ಯಾರಿಸ್: ಭಾರತ ಪುರುಷರ ಹಾಕಿ ತಂಡ ಸತತ ಎರಡನೇ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ಗೇರಿದ ಸಾಧನೆ ಮಾಡಿದೆ. 41 ವರ್ಷಗಳ ಬಳಿಕ ಟೋಕಿಯೊ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದ ಭಾರತ ತಂಡ ಕ್ವಾರ್ಟರ್‌ಫೈನಲ್‌ನಲ್ಲಿ ಬ್ರಿಟನ್ ಎದುರು ಶೂಟೌಟ್‌ನಲ್ಲಿ 4-2 ಅಂತರದ ರೋಚಕ ಗೆಲುವು ದಾಖಲಿಸಿದೆ. ನಿಗದಿತ ಸಮಯದಲ್ಲಿ ಪಂದ್ಯ1-1 ರಿಂದ ಸಮಬಲಗೊಂಡಿತ್ತು. ಈ ಲಿತಾಂಶದೊಂದಿಗೆ ಹರ್ಮಾನ್‌ಪ್ರೀತ್ ಪಡೆ ಪದಕ ಖಾತ್ರಿಪಡಿಸಲು ಕೇವಲ 1 ಗೆಲುವಿನ ದೂರದಲ್ಲಿದ್ದು, 44 ವರ್ಷಗಳ ಬಳಿಕ ಒಲಿಂಪಿಕ್ಸ್ ೈನಲ್‌ಗೇರುವ ನಿರೀಕ್ಷೆ ಮೂಡಿಸಿದೆ. ಉಪಾಂತ್ಯದಲ್ಲಿ ಸೋತರೆ ಕಂಚಿನ ಪದಕದ ಪ್ಲೇಆಫ್ ಪಂದ್ಯ ಆಡುವ ಅವಕಾಶ ಹೊಂದಿದೆ.
ಟೀಶರ್ಟ್ ಬಿಚ್ಚಿ ಸಂಭ್ರಮ: ಶೂಟೌಟ್‌ನಲ್ಲಿ ಭಾರತದ ಪರ ರಾಜ್ ಕುಮಾರ್ ಪಾಲ್ ಗೋಲು ಗಳಿಸುತ್ತಿದ್ದಂತೆ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತು. ಇದರ ನಡುವೆ 27 ವರ್ಷದ ಮಿಡ್ ಫೀಲ್ಡರ್ ಸುಮಿತ್ ಟೀ ಶರ್ಟ್ ತೆಗೆದು ತಿರುಗಿಸುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು. ಈ ಸಂಭ್ರಮಾಚರಣೆಯನ್ನು ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರೊಂದಿಗೆ ನೆಟ್ಟಿಗರು ಹೋಲಿಕೆ ಮಾಡಿದ್ದಾರೆ. 2002ರಲ್ಲಿ ಇಂಗ್ಲೆಂಡ್ ಎದುರು ನಾಟ್‌ವೆಸ್ಟ್ ಟ್ರೋಫಿ ಗೆದ್ದ ಬಳಿಕ ಲಾರ್ಡ್ಸ್ ಬಾಲ್ಕನಿಯಲ್ಲಿ ಗಂಗೂಲಿ ಟೀಶರ್ಟ್ ಕಳಚಿ ಸಂಭ್ರಮಿಸಿದ್ದರು.
ಶೂಟೌಟ್
ಭಾರತ-4
ಹರ್ಮಾನ್‌ಪ್ರೀತ್ ಸಿಂಗ್
ಸುಖ್‌ಜೀತ್ ಸಿಂಗ್
ಲಲಿತ್ ಉಪಾಧ್ಯಾಯ
ರಾಜ್‌ಕುಮಾರ್ ಪಾಲ್
ಬ್ರಿಟನ್ 2
ಜೇಮ್ಸ್ ಆಲ್ಬೇರಿ
ವ್ಯಾಲೇಸ್ ಝಕಾರಿ
ವಿಲಿಯಮ್ಸನ್ ಕಾನರ್*
ಫಿಲ್ ರೊಪರ್ *