ವಯೋಮುನ್ನ ಋತುಬಂಧ

ಮೂವತ್ತಾಗುತ್ತಿದ್ದಂತೆ ಋತುಚಕ್ರ ನಿಧಾನವಾಗಿ, ಕೊನೆಗೆ ನಿಂತೇ ಹೋಯಿತು ಎಂದು ಯಾರಾದರೂ ಹೇಳಿದರೆ ಅಚ್ಚರಿ ಪಡಬೇಕಿಲ್ಲ. ಋತುಬಂಧ ಈಗ ಮೊದಲಿಗಿಂತ ಕಡಿಮೆ ವಯಸ್ಸಿಗೇ ಕಂಡುಬರುತ್ತಿದೆ. ಇದಕ್ಕೆ ಕಾರಣಗಳು ಹಲವಾರು ಇರಬಹುದು. ಆದರೆ, ಬದಲಾಗುತ್ತಿರುವ ಮಹಿಳೆಯ ಬದುಕಿನಶೈಲಿಯನ್ನು ಇದು ಬೆರಳು ಮಾಡಿ ತೋರಿಸುತ್ತಿದೆ.

| ಸರೋಜಾ ಪ್ರಭಾಕರ್

ನಾಲ್ಕಾರು ಹೆಣ್ಣುಮಕ್ಕಳು ಒಂದೆಡೆ ಸೇರಿದಾಗ ಒಬ್ಬಾಕೆ ಹೇಳಿದ ಅನುಭವವಿದು. ‘19ಕ್ಕೆಲ್ಲ ವಿವಾಹವಾಗಿ 27-28ರ ಹೊತ್ತಿಗೆ ಎರಡು ಮಕ್ಕಳ ತಾಯಿಯಾಗಿ, ಮುಂದೊಂದು ದಿನ ಇದ್ದಕ್ಕಿದಂತೆ 32ನೇ ವಯಸ್ಸಿಗೆ ಮುಟ್ಟು ನಿಂತೇ ಹೋಯ್ತು’ ಎಂದಾಕೆ ಹೇಳಿದಾಗ ನಾವೆಲ್ಲ ಅಚ್ಚರಿಪಟ್ಟಿದ್ದೆವು. ಅತ್ತೆಯ ಒತ್ತಾಯದ ಮೇರೆಗೆ ವೈದ್ಯರನ್ನು ಸಂರ್ಪಸಿದೆ, ವಿನಾ ನನಗೇನೂ ತೊಂದರೆಯಾಗಲಿಲ್ಲ ಎಂದಾಗ ನಮ್ಮೆಲ್ಲರ ದೃಷ್ಟಿಯಲ್ಲಿ ಆಕೆ ಅದೃಷ್ಟವಂತಳಾಗಿ ಕಂಡಿದ್ದಳು.

ಹೆಣ್ಣುಮಕ್ಕಳಿಗೆ 45-50 ಋತುಬಂಧದ ಕಾಲ. ಈ ವಯಸ್ಸಿನಲ್ಲಿ ನಾವು ಕಾಲುನೋವು, ಸುಸ್ತು, ಎಂದೆಲ್ಲ ಹೇಳಿಕೊಂಡು ವೈದ್ಯರನ್ನು ಸಂರ್ಪಸಿದರೆ ‘45 ಆಯ್ತಲ್ಲ, ಇದು ಮೆನೋಪಾಸ್ ಬಿಡಿ’ ಎಂದು ಸಹಜವಾಗಿ ಹೇಳುವ ಅವರ ಮಾತು ನಮಗೆ ಮಾತ್ರ ಸಹಜವೆನಿಸುವುದಿಲ್ಲ. ಆಂಗ್ಲಭಾಷೆಯಲ್ಲಿ ಮೆನೋಪಾಸ್ ಎಂದರೆ ಋತುಚಕ್ರ ನಿಲ್ಲುವ ಹಂತ. ಅಂದರೆ, ಅಂಡಾಶಯವು ಈಸ್ಟ್ರೋಜೆನ್ (ಪುನರುತ್ಪತ್ತಿ ಚಕ್ರವನ್ನು ನಿಯಂತ್ರಿಸುವ ಹಾಮೋನ್) ಉತ್ಪಾದನೆಯನ್ನು ನಿಲ್ಲಿಸಿಬಿಡುತ್ತದೆ. ಆದರೆ, ಋತುಚಕ್ರ ದಿಢೀರ್ ನಿಲ್ಲುವುದಿಲ್ಲ, ಬದಲಾಗಿ ಸಾಕಷ್ಟು ಮೊದಲೇ ಅದರ ಪ್ರಕ್ರಿಯೆ ಆರಂಭವಾಗುತ್ತದೆ. ಆ ಅವಧಿಯ ಲಕ್ಷಣಗಳನ್ನು ಪೆರಿ ಮೆನೋಪಾಸ್ ಎಂದು ಕರೆಯಲಾಗುತ್ತದೆ. ಈ ಅವಧಿ ಸಾಮಾನ್ಯವಾಗಿ 40ಕ್ಕೆ ಆರಂಭವಾಗುತ್ತದೆ. 12 ತಿಂಗಳಿಗಿಂತ ಹೆಚ್ಚುಕಾಲ ಪಿರಿಯಡ್ ಆಗದೆ ಇದ್ದರೆ ಆಗ ಅದನ್ನು ಋತುಬಂಧವೆಂದು ತಿಳಿದುಕೊಳ್ಳಬಹುದು. ಅಷ್ಟಕ್ಕೂ ಇದು ಪ್ರಕೃತಿಸಹಜವೇ ವಿನಾ ರೋಗವಲ್ಲ. ಹೆಣ್ಣಿನ ದೇಹ ಗಟ್ಟಿಯಾಗುವುದೇ ಗರ್ಭಕೋಶದ ಸರಿಯಾದ ಕಾರ್ಯನಿರ್ವಹಣೆಯಿಂದ. ಈ ಋತುಚಕ್ರ ತಿಂಗಳ ಕಿರಿಕಿರಿ ಎನಿಸಿದರೂ ಸಹ, ಅದು ಸರಿಯಾಗಿದ್ದರೆ ಸ್ತ್ರೀಯರ ಆರೋಗ್ಯವೂ ಸರಿಯಾಗಿರುತ್ತದೆ. 40 ವರ್ಷಕ್ಕಿಂತ ಮೊದಲೇ ಕೆಲವರಲ್ಲಿ ಅಂಡಾಶಯಕ್ಕೆ ಹಾನಿ ಉಂಟಾದಾಗಲೋ ಅಥವಾ ಈಸ್ಟ್ರೋಜೆನ್ ಹಾಮೋನ್ ಉತ್ಪತ್ತಿ ನಿಂತುಬಿಡುವ ಕಾರಣದಿಂದಲೋ ಋತುಬಂಧ ಕಾಣಿಸಿಕೊಳ್ಳುತ್ತದೆ. ಅದನ್ನು ವಯೋಮುನ್ನ ಋತುಬಂಧ (ಅರ್ಲಿ ಮೆನೋಪಾಸ್)ವೆಂದು ಕರೆಯಲಾಗುತ್ತದೆ. ಇತ್ತೀಚೆಗೆ ಬಹಳಷ್ಟು ಮಹಿಳೆಯರಲ್ಲಿ ವಯಸ್ಸಿಗೂ ಮುನ್ನವೇ ಋತುಬಂಧ ಕಾಣಿಸಿಕೊಳ್ಳುತ್ತಿದೆ. ಐಎಸ್​ಇಸಿ 2016ರಲ್ಲಿ ಮಾಡಿದ ಒಂದು ಸಮೀಕ್ಷೆಯ ಪ್ರಕಾರ 29ರಿಂದ 34ರ ವಯೋಮಾನದ ಶೇ.4ರಷ್ಟು ಹಾಗೂ 35ರಿಂದ 39ರ ವಯೋಮಾನದ ಶೇ.8ರಷ್ಟು ಭಾರತೀಯ ಮಹಿಳೆಯರಲ್ಲಿ ವಯೋಮುನ್ನ ಋತುಬಂಧ ಕಾಣಿಸಿಕೊಳ್ಳುತ್ತಿದೆ. ಋತುಚಕ್ರದ ಅವಧಿಯಲ್ಲಿ ಏರುಪೇರಾದಾಗ ಗೈನಕಾಲಜಿಸ್ಟ್ ಬಳಿ ಹೋದಾಗ ಅವರು ಇದು ವಯೋಮುನ್ನ ಋತುಬಂಧವಿರಬಹುದೇ ಎನ್ನುವ ಕುರಿತಾಗಿಯೂ ಪರೀಕ್ಷೆ ಮಾಡುತ್ತಾರೆ.

ಚಿಕಿತ್ಸೆಯಿಂದ ಅಡ್ಡ ಪರಿಣಾಮ ಹೆಚ್ಚು

ವಯೋಮುನ್ನ ಮೆನೋಪಾಸ್​ಗೆ ಹಾಮೋನ್ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಉತ್ತಮ ಪರಿಣಾಮಗಳು ಇವೆಯಾದರೂ ಅಡ್ಡ ಪರಿಣಾಮಗಳೂ ಸಾಕಷ್ಟಿವೆ. ಹೀಗಾಗಿ, ಯಾರೋ ಸಲಹೆ ನೀಡಿದರು ಎಂದು ಏಕಾಏಕಿ ಮಾಡಿಸಲು ಮುಂದಾಗದೆ ವೈದ್ಯರೊಂದಿಗೆ ರ್ಚಚಿಸುವುದು ಉತ್ತಮ. ಮೊದಲೇ ಮುಟ್ಟು ನಿಲ್ಲುವುದರಿಂದ ಸಂತಾನಹೀನತೆಯ ಭಯ ಇದ್ದೇ ಇರುತ್ತದೆ. ಇದರೊಂದಿಗೆ ಹೃದ್ರೋಗ, ಆಸ್ಟಿಯೋಪೊರೊಸಿಸ್, ರ್ಪಾನ್​ಸನ್ ಲಕ್ಷಣ, ಖಿನ್ನತೆ, ಬುದ್ಧಿಮಾಂದ್ಯತೆ, ಅಕಾಲಿಕ ಸಾವು ಇವೂ ಸಂಭವಿಸಬಹುದು ಎನ್ನುತ್ತಾರೆ ತಜ್ಞರು. ಇತ್ತೀಚೆಗೆ ಸಾಕಷ್ಟು ಮಹಿಳೆಯರು ಅಡ್ಡಪರಿಣಾಮಗಳನ್ನು ಅರಿಯದೆ ಈ ಚಿಕಿತ್ಸೆ ಪಡೆಯಲು ಮುಂದಾಗುತ್ತಿರುವುದು ಕಂಡುಬರುತ್ತಿದೆ. ಯಾವುದೋ ಕಾರಣದಿಂದ ವಯೋಮುನ್ನ ಮೆನೊಪಾಸ್ ಸಮಸ್ಯೆ ತಲೆದೋರಿದರೂ ಮಕ್ಕಳನ್ನು ದತ್ತು ಸ್ವೀಕರಿಸುವುದು, ಬಾಡಿಗೆ ತಾಯಂದಿರ ನೆರವು, ಅಂಡಾಣು ದಾನ ಇವುಗಳ ಮೂಲಕ ಸಂತಾನ ಪಡೆಯುವ ಅವಕಾಶಗಳು ಇಂದು ಸಾಕಷ್ಟಿವೆ.

ಗರ್ಭಾಶಯ ವಿಫಲವಾಗುವುದು ಯಾವಾಗ?

ಇನ್​ಫರ್ಟಿಲಿಟಿ ತಜ್ಞೆ ಡಾ. ಅನುಭಾ ಸಿಂಗ್ ‘ವಯೋಮುನ್ನ ಮೆನೋಪಾಸ್​ನಲ್ಲಿಯೂ, ಸಹಜ ಮೆನೋಪಾಸ್​ನ ಸಮಸ್ಯೆಗಳೇ ಆದಂತಹ ಮುಟ್ಟಿನ ಅವಧಿಯಲ್ಲಿ ಏರುಪೇರು, ಹಾಟ್ ಫ್ಲಾಷಸ್, ಪದೇ ಪದೆ ಮೂಡ್ ಬದಲಾವಣೆ ಯಾಗುವುದು, ನಿದ್ರೆ ಬರದಿರುವುದು, ಅಳು ಬರುವುದು ಇವೇ ಮೊದಲಾದ ಲಕ್ಷಣಗಳು ಗೋಚರಿಸುತ್ತವೆ. ಇಂತಹ ಅನುಭವಗಳಾದಾಗ ಯಾವುದಾದರೂ ಫರ್ಟಿಲಿಟಿ ಕೇಂದ್ರವನ್ನು ಸಂರ್ಪಸಿ ಅವರು ಹೇಳಿದಂತೆ ರಕ್ತಪರೀಕ್ಷೆ ಮಾಡಿಸಬೇಕು. ಎಫ್​ಎಸ್​ಎಚ್ ಮಟ್ಟವು 25ಎಂಯುಎಲ್/ಎಲ್ ಇದ್ದರೆ ಆಗ ಅದು ಪ್ರಿಮೆಚ್ಯೂರ್ ಒವೇರಿಯನ್ ಫೇಲ್ಯೂವರ್ ಇದೆ ಎಂದರ್ಥ. ಧೂಮಪಾನ, ಮದ್ಯಪಾನ, ಥೈರಾಯ್್ಡ ಸಮಸ್ಯೆ ಹಾಗೂ ರುಮಟೈಡ್ ಆರ್ಥರೈಟಿಸ್​ನಂಥ ಆಟೋ ಇಮ್ಯೂನ್ ರೋಗಗಳಲ್ಲಿ ಕಾಣಿಸಿಕೊಳ್ಳುವ ಉರಿಯೂತದಿಂದಾಗಿ ಅಂಡಾಶಯವು ಹಾನಿಗೊಳಗಾಗುವುದು, ಕಿಮೋಥೆರಪಿ, ರೇಡಿಯೋ ಥೆರಪಿಯಂತಹ ರೇಡಿಯೇಷನ್ ಅತಿಹೆಚ್ಚು ತೆರೆದುಕೊಳ್ಳುವುದು, ಅಪೌಷ್ಟಿಕತೆ, ಎಪಿಲೆಪ್ಸಿಯಂತಹ ಕಾಯಿಲೆ ಇವೆಲ್ಲದರ ಜತೆಗೆ ಆನುವಂಶಿಕವಾಗಿ ಟ್ಯೂಬರ್​ಕ್ಯುಲೋಸಿಸ್ ಇದ್ದರೆ ಗರ್ಭಾಶಯದ ವಿಫಲತೆಯ ಸಂದರ್ಭ ಎದುರಾಗಬಹುದು’ ಎನ್ನುತ್ತಾರೆ. ಇನ್ನು, ಕ್ರೋಮೊಸೊಮ್ಲ್ಲಿನ ದೋಷಗಳಿಂದಲೂ ಈ ಸಮಸ್ಯೆ ತಲೆದೋರಬಹುದು. ಇದರಿಂದ ಸಂತಾನಹೀನತೆಯ ಜತೆಗೆ ಇನ್ನುಳಿದ ಗಂಭೀರ ಪರಿಣಾಮಗಳೂ ತೋರಬಹುದು.

ಕೆಲವು ಲಕ್ಷಣಗಳು

ಸುಸ್ತು, ಪದೇ ಪದೆ ಮೂತ್ರ ವಿಸರ್ಜನೆ, ಬಾಯಾರಿಕೆ, ಹಸಿವು ಹೆಚ್ಚಾಗುವುದು, ಇದ್ದಕ್ಕಿದ್ದ ಹಾಗೆ ತೂಕ ಕಡಿಮೆಯಾಗುವುದು, ಗಾಯ ವಾಸಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು, ಪಾದಗಳಲ್ಲಿ ಉರಿಯ ಅನುಭವ ಆಗುತ್ತದೆ. ಮಹಿಳೆಯರಲ್ಲಿ ಮೂತ್ರನಾಳದ ಸೋಂಕು ಉಂಟಾಗಬಹುದು, ಉರಿಯವ ಅನುಭವವೂ ಆಗಬಹುದು. ಆದರೆ, ಶೇ.50ರಷ್ಟು ಜನಕ್ಕೆ ಈ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ ಎನ್ನುವುದೂ ಸತ್ಯ. ಬೇರೆ ಯಾವುದೋ ಸಮಸ್ಯೆಗೆಂದು ಬಂದು ತಮಗಿರುವ ಸಕ್ಕರೆ ಕಾಯಿಲೆ ಬಗ್ಗೆ ತಿಳಿದುಕೊಳ್ಳುವವರೇ ಅಧಿಕ.

ಮಧುಮೇಹ ಸಂಸ್ಥೆ

ಕರ್ನಾಟಕ ಮಧುಮೇಹ ಸಂಸ್ಥೆ (ಕರ್ನಾಟಕ ಇನ್​ಸ್ಟಿಟ್ಯೂಟ್ ಆಫ್ ಎಂಡೋಕ್ರೖೆನಾಲಜಿ) ಸರ್ಕಾರದ ನೋಂದಾಯಿತ ಸ್ವಾಯತ್ತ ಸಂಸ್ಥೆಯಾಗಿದ್ದು, ಮಧುಮೇಹಕ್ಕೆ ಸಂಬಂಧಿಸಿದ ಉನ್ನತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಮಧುಮೇಹಕ್ಕೆ ಸಂಬಂಧಿಸಿದ ಎಲ್ಲ ಚಿಕಿತ್ಸೆಗಳೂ ಇಲ್ಲಿ ಒಂದೇ ಸೂರಿನಡಿ ದೊರೆಯುತ್ತವೆ. ಶುಲ್ಕದಲ್ಲಿ ಬಿಪಿಎಲ್ ಕಾರ್ಡ್​ದಾರರಿಗೆ ಶೇ.30, ಹಿರಿಯ ನಾಗರಿಕರಿಗೆ ಶೇ.30 ರಿಯಾಯಿತಿ ಇದ್ದರೆ, ಎಸ್​ಸಿ ಹಾಗೂ ಎಸ್​ಟಿ ಸಮುದಾಯದವರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಲಭ್ಯ. ಹೆಚ್ಚಿನ ಮಾಹಿತಿಗೆ ದೂರವಾಣಿ-080-22977698.

ನೈಸರ್ಗಿಕಕ್ಕೆ ಮೊರೆ ಹೋಗಿ

ನೈಸರ್ಗಿಕ ಚಿಕಿತ್ಸೆಯನ್ನು ಮಾಡಬಹುದು. ಸೋಯಾದಲ್ಲಿ ಸಾಕಷ್ಟು ಫೈಟೋ ಈಸ್ಟ್ರೋಜೆನ್ ಪ್ರಮಾಣ ಇರುವುದರಿಂದ ಇದು ನೆರವಾಗುತ್ತದೆ. ನಿತ್ಯಜೀವನದಲ್ಲಿ ಚಟುವಟಿಕೆಯಿಂದಿರುವುದು ವಯೋಮುನ್ನ ಋತುಬಂಧದ ಅಪಾಯ ತಡೆಗಟ್ಟುವ ಉತ್ತಮ ಮಾರ್ಗ. ಅರ್ಧ ಗಂಟೆ ಏರೋಬಿಕ್ಸ್​ನ್ನು ವಾರದಲ್ಲಿ ಮೂರುದಿನ ಮಾಡಿದರೂ ಉತ್ತಮ ಫಲಿತಾಂಶ ಕಾಣಬಹುದು. ದಿನವೂ ವ್ಯಾಯಾಮ ಮಾಡುವ ಪದ್ಧತಿ ಇರಿಸಿಕೊಳ್ಳುವುದು ಉತ್ತಮ. ವಿಟಮಿನ್ ಡಿ, ಇ, ಝಿಂಕ್, ಮ್ಯಾಗ್ನೀಷಿಯಂ ಮೊದಲಾದವನ್ನು ದೇಹಕ್ಕೆ ವಿವಿಧ ರೀತಿಯಲ್ಲಿ ಪೂರೈಸಬೇಕು. ಕಡಿದ ತಿಂಡಿ, ಜಂಕ್​ಫುಡ್ ತ್ಯಜಿಸಬೇಕು. ಕ್ಯಾಲ್ಸಿಯಂಪೂರ್ಣ ಆಹಾರವಾದ ಬಾದಾಮಿ, ಚೀಸ್, ಹಸಿರು ಸೊಪ್ಪು, ಹಾಲು, ಸಿರಿಧಾನ್ಯ, ಕಾರ್ನ್​ಫ್ಲೇಕ್ಸ್, ಒಣದ್ರಾಕ್ಷಿ ಇಂಥವನ್ನೆಲ್ಲ ಆಹಾರದಲ್ಲಿ ಬಳಸಿದರೆ ವಯೋಮುನ್ನ ರಜೋಬಂಧ ತಡೆಗೆ ಸಹಕಾರಿ.

ಜೀವನಶೈಲಿಯೂ ಇದಕ್ಕೆ ಕಾರಣ…

ಗರ್ಭಾಶಯ ಚಟುವಟಿಕೆಯಿಂದ ಇದ್ದಾಗಲೂ ಸಹ ವಯೋಮುನ್ನ ಋತುಬಂಧ ಕಾಣಿಸಿಕೊಳ್ಳಬಹುದು. ಜೀವನಶೈಲಿ ಇದಕ್ಕೆ ಕಾರಣವಾಗಿರಬಹುದು. ಧೂಮಪಾನದಂತಹ ದುಶ್ಚಟಗಳು ಆಂಟಿಈಸ್ಟ್ರೋಜೆನ್ ಪರಿಣಾಮವನ್ನು ನೀಡುತ್ತವೆ. ಹಲವಾರು ಅಧ್ಯಯನಗಳು ಹೇಳುವಂತೆ ದೀರ್ಘಕಾಲ ನಿಯಮಿತವಾಗಿ ಧೂಮಪಾನ ಮಾಡುವವರಿಗೆ ವಯೋಮುನ್ನ ಮೆನೋಪಾಸ್ ತಲೆದೋರುತ್ತದೆ. ಧೂಮಪಾನ ಮಾಡದ ಮಹಿಳೆಯರಿಗಿಂತ ಧೂಮಪಾನ ಮಾಡುವ ಮಹಿಳೆಯರಿಗೆ ಒಂದೆರಡು ವರ್ಷ ಮೊದಲೇ ಮೆನೋಪಾಸ್ ತಲೆದೋರುತ್ತದೆ ಎನ್ನುತ್ತದೆ ಅಧ್ಯಯನ. ಗಮನಿಸಬೇಕಾದ ಅಂಶವೆಂದರೆ, ಈಸ್ಟ್ರೋಜೆನ್ ಕೊಬ್ಬು ಅಂಗಾಂಶಗಳಲ್ಲಿ ಸಂಗ್ರಹವಾಗಿರುತ್ತದೆ. ತುಂಬ ತೆಳ್ಳಗಿರುವ ಸ್ತ್ರೀಯರಲ್ಲಿ ಈಸ್ಟ್ರೋಜೆನ್ ಸಂಗ್ರಹ ಕಡಿಮೆ ಇದ್ದು ಬಲುಬೇಗನೆ ಅವು ಖಾಲಿಯಾಗಬಹುದು. ವ್ಯಾಯಾಮದ ಕೊರತೆ, ಬಿಸಿಲಿಗೆ ಮೈ ಒಡ್ಡದಿರುವುದು ಕೂಡ ವಯೋಮುನ್ನ ಮೆನೋಪಾಸ್​ಗೆ ಕಾರಣವಾಗಬಹುದೆಂದು ಕೆಲವು ಸಂಶೋಧನೆಗಳು ಹೇಳುತ್ತವೆ. ವೈದ್ಯಕೀಯ ನಿರ್ದೇಶಕರೂ, ಐವಿಎಫ್ ತಜ್ಞರೂ ಆದ ಡಾ. ಶೋಭಾ ಅವರು ‘ಆಹಾರಶೈಲಿಯ ಬದಲಾವಣೆ, ಸದಾ ಒತ್ತಡದ ಕೆಲಸದ ಶೈಲಿ ಮೊದಲಾದ ಕಾರಣಗಳಿಂದ 40 ವರ್ಷದೊಳಗೇ ಅಂಡಾಶಯಗಳು ಕಾರ್ಯನಿರ್ವಹಣೆಯನ್ನು ನಿಲ್ಲಿಸಿ ಪ್ರಿಮೆಚ್ಯುರ್ ಓವೆರಿಯನ್ ಫೇಲ್ಯೂರ್ ಆದಾಗ ವಯೋಮುನ್ನ ಮೆನೋಪಾಸ್ ಕಾಣಿಸಿಕೊಳ್ಳಬಹುದು. ವಾತಾವರಣ ಹಾಗೂ ಜೀವನಶೈಲಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಸ್ತ್ರೀಯರ ದೇಹದಲ್ಲಿ ತುಂಬ ಬದಲಾವಣೆಯಾಗುತ್ತಿದೆ. ಹಾಗಾಗಿ ಚಿಕ್ಕವಯಸ್ಸಿನಲ್ಲೇ ಮೆನೋಪಾಸ್ ಕೂಡಾ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ, ಸಂತಾನ, ಕುಟುಂಬ ವಿಸ್ತರಣೆಯ ಕುರಿತು ಬೇಗನೆ ಆಲೋಚನೆ ಮಾಡುವುದೊಳಿತು. ಏನಾದರೂ ಸಮಸ್ಯೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂರ್ಪಸಬೇಕು’ ಎನ್ನುತ್ತಾರೆ.

ಆನುವಂಶೀಯವಾಗಿಯೂ ಮೆನೋಪಾಸ್

ಸಾಮಾನ್ಯವಾಗಿ 40ರ ನಂತರ ಆರೋಗ್ಯ ಸಮಸ್ಯೆ ಬಂದಾಗ ವೈದ್ಯರ ಬಳಿ ಹೋದರೆ, ‘ನಿಮ್ಮ ತಾಯಿಗೆ ಎಷ್ಟು ವರ್ಷಕ್ಕೆ ಋತುಬಂಧವಾಗಿತ್ತು?’ ಎಂದು ಕೇಳುತ್ತಾರೆ. ಅಂದರೆ, ಮೆನೋಪಾಸ್ ಆನುವಂಶೀಯವಾಗಿಯೂ ಇರಬಹುದು. ಮುಟ್ಟಿನಲ್ಲಿ ಏರುಪೇರು, ಅತಿಯಾದ ರಕ್ತಸ್ರಾವ, ಸ್ಪಾಟಿಂಗ್, ವಾರಗಟ್ಟಲೇ ಬ್ಲೀಡಿಂಗ್ ಆಗುತ್ತಿರುವುದು, ತಿಂಗಳುಗಟ್ಟಲೆ ಪಿರಿಯಡ್ ಆಗದಿರುವುದು ಇವು ಸಾಮಾನ್ಯ ಲಕ್ಷಣಗಳು. ಇವು ಕಂಡುಬಂದಾಗ ವೈದ್ಯರನ್ನು ಕಾಣುವುದೊಳಿತು. ವಯೋಮುನ್ನ ಋತುಬಂಧಕ್ಕೆ ವೈದ್ಯಕೀಯವಾಗಿ ಸರಿಯಾದ ಕಾರಣ ದೊರಕದಿದ್ದರೂ ಅದು ಸಹ ಆನುವಂಶೀಯವಾಗಿರಬಹುದು. ತಾಯಿಗೆ ಯಾವಾಗ ಮುಟ್ಟು ನಿಂತಿದೆ ಎಂದು ತಿಳಿದರೆ ಮೊದಲ ಹಂತದ ಪರೀಕ್ಷೆ ಸುಲಭವಾಗುತ್ತದೆಯಾದರೂ ತಿಳಿಯುವುದು ಅರ್ಧ ಭಾಗ ಮಾತ್ರ. ಇದಕ್ಕೆ ಇನ್ನೂ ಹಲವಾರು ಕಾರಣಗಳಿರಬಹುದು. ಕ್ಯಾನ್ಸರ್ ಚಿಕಿತ್ಸೆಯ ಬಳಿಕ ಪಡೆಯುವ ಕಿಮೋಥೆರಪಿ ಅಥವಾ ಯಾವುದೋ ಕಾರಣದಿಂದ ಅಂಡಾಶಯವನ್ನು ತೆಗೆದಾಗ ಮುಟ್ಟು ನಿಲ್ಲಬಹುದು. ಇಂತಹ ಚಿಕಿತ್ಸೆ ಮಾಡಿದಾಗ ವೈದ್ಯರೇ ರೋಗಿಗಳನ್ನು ಕೌನ್ಸೆಲಿಂಗ್ ಮೂಲಕ ಮಾನಸಿಕವಾಗಿ ಸಿದ್ಧತೆ ಮಾಡುತ್ತಾರೆ.

ಕೆಲವು ಪರೀಕ್ಷೆಗಳು

  1. ವಯೋಮುನ್ನ ಮೆನೋಪಾಸ್ ತಲೆದೋರಿರಬಹುದೇ ಎಂದು ತಿಳಿಯಲು ವೈದ್ಯರು ಈ ಕೆಳಗಿನ ಪರೀಕ್ಷೆ ಮಾಡಿಸಬಹುದು:
  2. ಈಸ್ಟ್ರೋಜೆನ್ ಮಟ್ಟ ಪರೀಕ್ಷಿಸಬಹುದು.
  3. ಫಾಲಿಕಲ್ ಸ್ಟಿಮ್ಯುಲೇಟಿಂಗ್ ಹಾಮೋನ್ ಮಟ್ಟವು ನಿರಂತರವಾಗಿ 30 ಎಂಯುಎಲ್/ಎಲ್ ಇದ್ದರೆ, ವರ್ಷಗಟ್ಟಲೆ ಪಿರಿಯಡ್ ಆಗಿರದಿದ್ದರೆ ಇದು ವಯೋಮುನ್ನ ಮೆನೋಪಾಸ್. ಇದಕ್ಕೆ ಒಂದೇ ಹಂತದ ಪರೀಕ್ಷೆ ಸಾಲುವುದಿಲ್ಲ.
  4. ಥೈರಾಯ್್ಡ ಉತ್ತೇಜಕ ಹಾಮೋನ್ ಪರೀಕ್ಷೆ (ಟಿಎಸ್​ಎಚ್): ಇಲ್ಲಿ ನಿಷ್ಕ್ರಿಯ ಥೈರಾಯ್್ಡ ಫಲಿತಾಂಶ ಬಂದರೆ ಅಂದರೆ ಟಿಎಸ್​ಎಚ್ ಮಟ್ಟ ತುಂಬ ಹೆಚ್ಚಿದ್ದರೆ ಅದು ಮೆನೋಪಾಸ್ ಲಕ್ಷಣವನ್ನೇ ಹೊಂದಿರುತ್ತದೆ. ಆಗ ಅದು ಅವಧಿ ಮುನ್ನ ಮೆನೋ ಪಾಸ್ ಆಗಿರುವುದಿಲ್ಲ.