ಬೆಂಗಳೂರು-ಮೈಸೂರು ನಡುವೆ ಕಡಿಮೆ ದರದ ಮೆಮು ರೈಲು ಸೇವೆ: ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಸಂಸದ ಪ್ರತಾಪ್​ ಸಿಂಹ

ಬೆಂಗಳೂರು/ಮೈಸೂರು: ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿನ ನಡುವೆ ಇನ್ನು ಮುಂದೆ ನೂತನ ಮೆಮು (ಮೇನ್​ಲೈನ್​ ಎಲೆಕ್ಟ್ರಿಕ್​​ ಮಲ್ಟಿಪಲ್​ ಯೂನಿಟ್​) ರೈಲು ಸಂಚಾರ ಮಾಡಲಿದೆ ಎಂದು ಸಂಸದ ಪ್ರತಾಪ್​ ಸಿಂಹ ಅವರು ಶನಿವಾರ ಮಾಹಿತಿ ತಿಳಿಸಿದ್ದಾರೆ.

ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಸಿಹಿ ಸುದ್ದಿಯನ್ನು ಹಂಚಿಕೊಂಡಿರುವ ಪ್ರತಾಪ್​ ಸಿಂಹ ಕಡಿಮೆ ದರದ ರೈಲು ಪ್ರಯಾಣ ಶೀಘ್ರದಲ್ಲೇ ಆರಂಭವಾಗಲಿದೆ. ಕೇವಲ 30 ರೂ.ಗೆ ಬೆಂಗಳೂರು-ಮೈಸೂರು ಪ್ರಯಾಣ ಮಾಡಬಹುದು ಎಂದು ಹೇಳಿದ್ದಾರೆ.

ಬೆಂಗಳೂರಿನಿಂದ ಸಂಜೆ 5.20ಕ್ಕೆ ಹೊರಡುವ ಮೆಮು ರೈಲು ರಾತ್ರಿ 8ಕ್ಕೆ ಮೈಸೂರು ತಲುಪಲಿದೆ. ಪುನಃ ರಾತ್ರಿ 8.30ಕ್ಕೆ ಹೊರಟು 11ಕ್ಕೆ ಬೆಂಗಳೂರಿಗೆ ಮರಳಲಿದೆ. ಸೋಮವಾರದಿಂದ ಶನಿವಾರದವರೆಗೆ ಈ ಸೇವೆ ಲಭ್ಯವಿರಲಿದೆ ಎಂದು ಮಾಹಿತಿ ನೀಡಿದ್ದಾರೆ.

ನಿನ್ನೆಯೇ ಈ ವಿಚಾರವನ್ನು ಘೋಷಿಸಬೇಕೆಂದು ಯೋಚಿಸಿದ್ದೆ, ಆರ್ಡರ್ ಕಾಪಿ ಸಿಗುವುದು ವಿಳಂಬ ಆಯಿತು. ಇನ್ನೊಂದು ಘೋಷಣೆ ಬಾಕಿ ಇದೆ. ಮುಂದಿನ ವಾರದವರೆಗೂ ಕಾಯಿರಿ, ಬಳಿಕ ಈ ಸೇವೆ ಆರಂಭವಾಗಲಿದೆ ಎಂದು ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

Pratap Simha ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಜುಲೈ 20, 2019

Leave a Reply

Your email address will not be published. Required fields are marked *